Gold Price Drop: ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಕಡಿವಾಣ ಬಿದ್ದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ನೀಡುತ್ತದೆ. ಜೊತೆಗೆ, ಬೆಳ್ಳಿ ದರದಲ್ಲಿನ ಬದಲಾವಣೆಯ ಮಾಹಿತಿಯನ್ನೂ ಒಳಗೊಂಡಿದೆ.
ಕಳೆದ ಎರಡ್ಮೂರು ದಿನಗಳಿಂದ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಚಿನ್ನದ ನಾಗಲೋಟಕ್ಕೆ ಇಂದು ಬ್ರೇಕ್ ಬಿದ್ದಿದೆ. ಬೆಲೆ ಇಳಿಕೆಯಾಗಿರೋದರಿಂದ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿರುವ ಜನರ ಸಂತಸ ಇಮ್ಮಡಿಯಾಗಿದೆ. ಚಿನ್ನದ ನಾಗಾಲೋಟಕ್ಕೆ ಲಗಾಮು ಬಿದ್ದಿದೆ.
27
22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ
ಜಾಗತೀಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಚಿನ್ನದ ಬೆಲೆ ಹೆಚ್ಚಳವಾದಂತೆ ಹೂಡಿಕೆದಾರರು ಬೆಳ್ಳಿಯತ್ತ ಮುಖ ಮಾಡಿದರು. ಈ ಹಿಂದೆ ಕೇವಲ ಆಭರಣ ಮತ್ತು ಪೂಜಾ ಸಾಮಾಗ್ರಿಗಳಿಗೆ ಸೀಮಿತವಾಗಿದ್ದ ಬೆಳ್ಳಿ ಇಂದು ಹೂಡಿಕೆ ಮೂಲವಾಗಿದೆ. ದೇಶದಲ್ಲಿಂದಿನ ಬೆಳ್ಳಿ ದರದ ಮಾಹಿತಿ ಈ ಕೆಳಗಿನಂತಿದೆ.
10 ಗ್ರಾಂ: 1,530 ರೂಪಾಯಿ
100 ಗ್ರಾಂ: 15,300 ರೂಪಾಯಿ
1000 ಗ್ರಾಂ: 1,53,000 ರೂಪಾಯಿ
77
ಎಷ್ಟು ದರ ಇಳಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಕಡಿಮೆಯಾಗಿದೆ.
1 ಕೆಜಿ ಬೆಳ್ಳಿ ದರದಲ್ಲಿ 2 ಸಾವಿರ ರೂ.ಗಳವರೆಗೆ ಹೆಚ್ಚಳವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.