ಬೆಂಗಳೂರಿನ ಜೆಪಿ ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಚ್ಚ ಹಸಿರಿನಿಂದ ಕೂಡಿದ್ದ ಪ್ರದೇಶವನ್ನು ಬೋಳು ಮಾಡಲಾಗಿದೆ. ಈ ಘಟನೆಯ ಡ್ರೋನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಅಭಿವೃದ್ಧಿಯೋ ಅಥವಾ ವಿನಾಶವೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಫೇಮಸ್ ಆಗಿರುವ ಬೆಂಗಳೂರು ತನ್ನ ನೈಸರ್ಗಿಕವಾಗಿ ಏರ್ ಕಂಡೀಷನರ್ ರೀತಿ ಇರುವ ತಾಪಮಾನಕ್ಕೂ ಫೇಮಸ್, ಹೀಗಾಗಿಯೇ ಬೆಂಗಳೂರಿಗೆ ಒಮ್ಮೆ ಬಂದು ನೆಲೆಸಿದವರು ಇಲ್ಲಿನ ಸೌಂದರ್ಯಕ್ಕೆ ಮರಳಾಗಿ ಇಲ್ಲಿಯೇ ನೆಲೆಸುತ್ತಾರೆ. ಬೆಂಗಳೂರಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಿದವರು ಲಕ್ಷಾಂತರ ಮಂದಿ ಇದ್ದಾರೆ.
27
ತಾಪಮಾನದಲ್ಲಿ ನಿರಂತರ ಏರಿಕೆ
ಆದರೆ ಬೇಸಿಗೆಯಲ್ಲೂ ಕೂಲ್ ಕೂಲ್ ಎನಿಸುತ್ತಿದ್ದ ಬೆಂಗಳೂರಿನ ತಾಪಮಾನದಲ್ಲೂ ಈಗ ಸಾಕಷ್ಟು ಬದಲಾವಣೆಯಾಗಿದೆ. ಜಾಗತಿಕ ತಾಪಮಾನವೂ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೆಂಗಳೂರಿನ ತಾಪಮಾನವೂ ಏರುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿ, ಹೌದು ಅಭಿವೃದ್ಧಿಯ ನೆಪದಲ್ಲಿ ಸೊಗಸಾದ ನಗರದ ನಡುವೆ ಕಾಂಕ್ರೀಟ್ ಕಾಡಿನ ಮಧ್ಯೆ ಇರುವ ಬೃಹತ್ ಮರಗಳನ್ನು ನೆಲಸಮ ಮಾಡುತ್ತಿರುವುದರಿಂದ ತಾಪಮಾನದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದೆ.
37
ಬೃಹತ್ ಮರಗಳ ನೆಲಸಮ
ಕೇವಲ ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಟ್ಟಡಗಳ ನಡುವೆ ಬೃಹತ್ ಆಗಿ ಬೆಳೆದು ನಿಂತು ತಂಪು ನೀಡುತ್ತಿದ್ದ ಬೃಹತ್ ಮರಗಳನ್ನು ನೆಲಸಮ ಮಾಡಲಾಗಿದೆ. ಹೌದು ಬೆಂಗಳೂರಿನ ಜೆಪಿ ನಗರ ಪ್ರದೇಶದ ಒಂದು ತಿಂಗಳ ಹಿಂದಿನ ಹಾಗೂ ಈಗಿನ ಡ್ರೋನ್ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿವೃದ್ಧಿಯ ನೆಪದಲ್ಲಿ ನಗರದ ನಡುವೆ ಇರುವ ನಾಲ್ಕು ಮರಗಳನ್ನು ಕಡಿಯುತ್ತಿರುವುದಕ್ಕೆ ಜನ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
anonymous (blr) @UsernaRandom ಎಂಬ ಎಕ್ಸ್ ಖಾತೆಯಿಂದ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಕಾಣುವಂತೆ ಜನವರಿ 6ರಂದು ಇದ್ದ ಸೊಗಸಾದ ದಟ್ಟವಾಗಿ ಬೆಳೆದಿದ್ದ ಮರಗಿಡಗಳು ಫೆಬ್ರವರಿ 11ರ ವೇಳೆಗೆಲ್ಲಾ ನೆಲಸಮವಾಗಿದ್ದು, ಬೋಳು ನೆಲ ಕಾಣುತ್ತಿದೆ.
57
ಜೆಪಿ ನಗರ 4ನೇ ಹಂತದಲ್ಲಿ ಘಟನೆ
ಹೃದಯ ಒಡೆಯುತ್ತಿದೆ. ಕೇವಲ ಒಂದು ತಿಂಗಳೊಳಗೆ, ಮರಗಳಿಂದ ತುಂಬಿದ ಹಚ್ಚ ಹಸಿರಿನ ಪ್ರದೇಶವು ಬುಡಕ್ಕೆ ಇಳಿದಿದೆ, ಮತ್ತು ನಾವೆಲ್ಲರೂ ಅದನ್ನು ನೋಡಿದ್ದೇವೆ. ಆದರೆ ಯಾವುದೇ ಆಕ್ರೋಶವಿಲ್ಲ. ಯಾವುದೇ ಹೊಣೆಗಾರಿಕೆ ಇಲ್ಲ. ಕೇವಲ ಮೌನ. ಇದು ಅಭಿವೃದ್ಧಿ ಅಲ್ಲ. ಇದು ವಿನಾಶ ಎಂದು ಅವರು ಫೋಟೋ ಹಂಚಿಕೊಂಡು ಬರೆದಿದ್ದಾರೆ. ಇದು ಜೆಪಿ ನಗರ 4ನೇ ಹಂತ, ಕಲ್ಯಾಣಿ ವಿಸ್ತಾ 2 ಬಳಿ ನಡೆದ ಘಟನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಫೋಟೊಗಳು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಜನ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದ ಏಕೈಕ ಹಸಿರು ಭಾಗವನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗಿದೆ. ಈ ಪ್ರದೇಶಕ್ಕೆ ಸಮೀಪದಲ್ಲೇ ಪರಿಸರ ನಿರ್ವಹಣೆ ಮತ್ತು ನೀತಿ ನಿರ್ಮಾಣ ಸೇರಿದಂತೆ ಎಲ್ಲಾ ಪ್ರಮುಖ ಕಚೇರಿಗಳು ಕೇವಲ 100 ಮೀಟರ್ ದೂರದಲ್ಲಿದೆ. ಆದರೆ ಯಾರೊಬ್ಬರೂ ಇದನ್ನು ಗಮನಿಸಿಲ್ಲ. ಇದು ಯಾವುದೇ ಕಾರಣಕ್ಕೂ ಖಾಸಗಿ ಭೂಮಿಯಂತೆ ಕಾಣುತ್ತಿಲ್ಲ... ಸ್ಥಳೀಯರು ಸಹ ಇದನ್ನೇ ದೃಢಪಡಿಸುತ್ತಾರೆ. ಆದರೂ, ಅದು ಖಾಸಗಿ ಭೂಮಿಯಾಗಿದ್ದರೂ ಸಹ, ಒಂದು ವಾರದೊಳಗೆ ಇಷ್ಟೊಂದು ಮರಗಳನ್ನು ಕಡಿಯಲು ಅವಕಾಶವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ ಈ ಪೋಸ್ಟ್‌ಗೆ ಒಬ್ಬರು ಪ್ರತಿಕ್ರಿಯಿಸಿದ್ದು, ಅದು ಪಕ್ಕದಲ್ಲಿರುವ ಮಿನಿ ಫಾರೆಸ್ಟ್‌ಗೆ ಹೊಂದಿಕೊಂಡಿರುವ ಅವನ ಖಾಸಗಿ ಭೂಮಿ, ಅವನು ಅದನ್ನು ಅಭಿವೃದ್ಧಿಪಡಿಸಲು ಬಯಸಬಹುದು. ಇಲ್ಲಿ ಏನು ತಪ್ಪಾಗಿದೆ? ನಮಗೆ ಎಲ್ಲದಕ್ಕೂ ಆಕ್ರೋಶ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. ಭಾರತೀಯರಿಗೆ ಖಾಸಗಿ ಆಸ್ತಿ ಮತ್ತು ಭೂಮಾಲೀಕರ ಹಕ್ಕುಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.