ರೋಲ್ಸ್ ರಾಯ್ಸ್ ಸೇರಿ ನೆಚ್ಚಿನ ಕಾರುಗಳೊಂದಿಗೆ ಸಿಜೆ ರಾಯ್ ಅಂತಿಮ ಯಾತ್ರೆ

Published : Feb 01, 2026, 03:56 PM ISTUpdated : Feb 01, 2026, 04:01 PM IST

ರೋಲ್ಸ್ ರಾಯ್ಸ್ ಸೇರಿ ನೆಚ್ಚಿನ ಕಾರುಗಳೊಂದಿಗೆ ಸಿಜೆ ರಾಯ್ ಅಂತಿಮ ಯಾತ್ರೆ ಮಾಡಲಾಗಿದೆ. ಸಿಜೆ ರಾಯ್‌ಗೆ ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣ. ರಾಯ್ ನೆಚ್ಚಿನ ಕಾರುಗಳಲ್ಲಿ ಅಂತಿಮಯಾತ್ರೆ ನಡೆದಿದೆ.

PREV
15
ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರ

ಬೆಂಗಳೂರಿನ ಉದ್ಯಮಿ ಸಿಜೆ ರಾಯ್ ಸಾವು ಉದ್ಯಮ ಜಗತ್ತಿಗೆ ಆಘಾತ ತಂದಿದೆ. ಜನವರಿ 30 ರಂದು ಸಿಜೆ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಇಂದು ಸಿಜೆ ರಾಯ್ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯುತ್ತಿದೆ. ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಅಂತಿಮ ವಿಧಿ ವಿಧಾನ ಪ್ರಕ್ರಿಯೆ ಮುಗಿಸಿ ಬಳಿಕ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

25
ಅಂತಿಮ ಯಾತ್ರೆಯಲ್ಲಿ ನೆಚ್ಚಿನ ಕಾರುಗಳ ಬಳಕೆ

ಸಿಜೆ ರಾಯ್ ಹಲವು ಬಾರಿ ತಾವು ಕಾರ್ ಲವರ್ ಎಂದು ಹೇಳಿಕೊಂಡಿದ್ದಾರೆ. ಐಷಾರಾಮಿ ಕಾರುಗಳನ್ನು ಖರೀದಿಸಿವುದು ಡ್ರೈವ್ ಮಾಡುವುದು ಅತೀ ಹೆಚ್ಚು ಇಷ್ಟಪಡುತ್ತಾರೆ. ಇದೀಗ ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ನೆಚ್ಚಿನ ಎಲ್ಲಾ ಕಾರುಗಳನ್ನು ಬಳಕೆ ಮಾಡಿದ್ದಾರೆ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ರೇಂಜ್ ರೋವರ್, ಬುಗಾಟಿ, ಆಡಿ ಸೇರಿದಂತೆ ಹಲವು ಐಷರಾಮಿ ಕಾರುಗಳಲ್ಲಿ ಸಿಜೆ ರಾಯ್ ಅಂತಿಮ ಯಾತ್ರೆ ನಡೆದಿದೆ.

35
ರಾಯ್ ಇಷ್ಟದ ಕಾರಣ ಅಂತಿಮ ಯಾತ್ರೆಯಲ್ಲಿ ಕಾರು ಬಳಕೆ

ಸಿಜೆ ರಾಯ್‌ ಕಾರನ್ನು ಅತೀಯಾಗಿ ಪ್ರೀತಿಸುತ್ತಿದ್ದರು. ಹೀಗಾಗಿ ಕುಟುಂಬಸ್ಥರು ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ಕಾರುಗಳನ್ನು ಬಳಕೆ ಮಾಡುವ ನಿರ್ಧಾರ ಮಾಡಿದ್ದರು. ರಾಯ್ ಪ್ರತಿ ಕಾರುಗಳಲ್ಲಿ ಹಲವು ಕತೆಗಳಿತ್ತು. ಅಂತಿಮ ಯಾತ್ರೆಯಲ್ಲಿ ಕಾರು ಬಳಸುವಾಗ ಕುಟುಂಬಸ್ಥರು ಕಣ್ಮೀರಿಟ್ಟಿದ್ದಾರೆ.

45
ನೇಟರ್ ಲಕ್ಸುರಿ ರೆಸಾರ್ಟ್‌ನಲ್ಲಿ ಅಂತ್ಯಕ್ರಿಯೆ

ರಾಯ್ ಪಾರ್ಥಿವ ಶರೀರವನ್ನು ಮೊದಲಿಗೆ ಸೆಂಟ್ ಜೋಸೆಫ್ ಚರ್ಚ್‌ಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಅಂತಿಮ ವಿಧಿ ವಿಧಾನ ಪ್ರಕ್ರಿಯೆ ನಡೆಸಲಾಗಿದೆ. ಚರ್ಚ್ ನಲ್ಲಿ ಪ್ರಾರ್ಥನೆ ಬಳಿಕ ಪಾರ್ಥಿವ ಶರೀರವನ್ನು ನೇಟರ್ ಲಕ್ಸುರಿ ರೆಸಾರ್ಟ್‌ಗೆ ತಂದು ಅಂತ್ಯಕ್ರಿಯೆ ನಡೆಸಲಾಗುತ್ತದೆ.

55
ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ

ಸಿಜೆ ರಾಯ್ ದುರಂತ ಸಾವಿನ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, CJ ರಾಯ್ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಅವರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ. 20 ವರ್ಷಗಳಿಂದ ಸಿಜೆ ರಾಯ್ ಚಿರಪರಿಚಿತರು. ಉತ್ತಮ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ಕಾರ್ಯಕ್ರಮ ಮಾಡ್ತಿದ್ದರು ಉದ್ಘಾಟನೆಗೆ ಕರೆಯುತ್ತಿದ್ದರು ಎಂದಿದ್ದಾರೆ.

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ

Read more Photos on
click me!

Recommended Stories