ಬೆಂಗಳೂರಿನ ವೈದ್ಯೆ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪತಿ ಡಾ.ಮಹೀಂದ್ರಾ ರೆಡ್ಡಿಯೇ ಪ್ರಮುಖ ಆರೋಪಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಫ್ರೊಪೋ ಫಾಲ್ ಎಂಬ ಅರವಳಿಕೆ ನೀಡಿ ಕೊಲೆ ಮಾಡಿರುವುದು ದೃಢಪಟ್ಟಿದೆ
ಬೆಂಗಳೂರಿನ ಮಾರತಹಳ್ಳಿಯ ಡಾ.ಕೃತಿಕಾ ರೆಡ್ಡಿ ಕೊ*ಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿದೆ. ಕೃತಿಕಾ ಗಂಡ ಡಾ.ಮಹೀಂದ್ರಾ ರೆಡ್ಡಿಯೇ ಆರೋಪಿಯಾಗಿದ್ದು, ಓವರ್ ಡೋಸ್ ಅರವಳಿಕೆ ನೀಡಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
25
ಆರೋಪಿ ಮಹೀಂದ್ರಾ ರೆಡ್ಡಿ
ಆರೋಪಿ ಮಹೀಂದ್ರಾ ರೆಡ್ಡಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದನು. ಮಹೀಂದ್ರಾ ಸೋದರ ಮಡಿವಾಳದಲ್ಲಿ ಮೆಡಿಕಲ್ ಸ್ಟೋರ್ ಹೊಂದಿದ್ದನು. ಈ ಎರಡು ಸ್ಥಳಗಳ ಪೈಕಿ ಒಂದರಲ್ಲಿ ಆರೋಪಿ ಅನಸ್ತೇಶಿಯಾ ಡ್ರಗ್ ತೆಗೆದುಕೊಂಡು ಬಂದಿರುವ ಸಾಧ್ಯತೆಗಳಿವೆ. ಆರೋಪಿ ಫ್ರೊಪೋ ಫಾಲ್ ಎಂಬ ಅನಸ್ತೇಶಿಯಾ ಬಳಸಿರೋದು ಮರಣೋತ್ತರ ಶವ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ.
35
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಮಹೀಂದ್ರಾ ಕುಟುಂಬ?
ಮಹೀಂದ್ರಾ ರೆಡ್ಡಿ ಕುಟುಂಬ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದೆ. 2018ರಲ್ಲಿ ಮಹೀಂದ್ರಾ ಕಿರಿಯ ಸೋದರ ನಾಗೇಂದ್ರ ರೆಡ್ಡಿ ವಿರುದ್ಧ IPC ಸೆಕ್ಷನ್ 506, 34, 417, 354, 420, 323 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮಹೀಂದ್ರಾ ರೆಡ್ಡಿ ಎ2 ಆರೋಪಿಯಾಗಿದ್ದನು. ರಾಘವ್ ಎಂಬಾತ ಎ3 ಆರೋಪಿಯಾಗಿದ್ದನು.
ಯುವತಿಯೊಬ್ಬಳನ್ನು ಪ್ರೀತಿಸಿದ್ದ ನಾಗೇಂದ್ರ ಆಕೆಯೊಂದಿಗೆ ದೇವಾಲಯದಲ್ಲಿ ಮದುವೆಯಾಗಿದ್ದನು. ಆದರೆ ಈ ಮದುವೆಯನ್ನು ನೋಂದಣಿ ಮಾಡಿಕೊಂಡಿರಲಿಲ್ಲ. ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ನಾಗೇಂದ್ರ ನಿನ್ನೊಂದಿಗೆ ಬದುಕಲು ಇಷ್ಟವಿಲ್ಲ ಎಂದು ದೂರವಾಗಿದ್ದನು. ಈ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಂತ್ರಸ್ತೆ, ನಾಗೇಂದ್ರನಿಗೆ ಮಹೀಂದ್ರ ಮತ್ತು ರಾಘವ್ ಹೆಸರು ಸೂಚಿಸಿದ್ದರು.
ಕೃತಿಕಾ ರೆಡ್ಡಿ ಕೊ*ಲೆ ನಡೆದ ದಿನದಂದೇ ಸಂತ್ರಸ್ತೆಗೆ 20 ಲಕ್ಷ ರೂಪಾಯಿ ನೀಡಿ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದ್ದರು. ಅದೇ ದಿನ ಸಂಜೆ ಬಂದು ಪತ್ನಿ ಕೃತಿಕಾಗೆ ಓವರ್ ಡೋಸ್ ಅರವಳಿಕೆಯನ್ನು ನೀಡಿದ್ದನು. ಇದೀಗ ಈ ಪ್ರಕರಣದಲ್ಲಿ ಮಹೀಂದ್ರಾ ರೆಡ್ಡಿ ಪೊಲೀಸರ ಬಂಧನದಲ್ಲಿದ್ದಾನೆ