ಎಚ್ಚರ, ಎಚ್ಚರ ಬೆಂಗಳೂರಿಗರೇ ಎಚ್ಚರ! ಮುಂದಿನ 5 ದಿನ ರಣಮಳೆಯ ಮುನ್ಸೂಚನೆ

Published : Oct 14, 2025, 09:37 AM IST

ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಚಳ್ಳಕೆರೆ ಸಂತೆಮೈದಾನದಲ್ಲಿ ಮಳೆನೀರು ಮತ್ತು ಕೆಸರು ತುಂಬಿ ಸಮಸ್ಯೆ ಸೃಷ್ಟಿಯಾಗಿದೆ.

PREV
15
5 ದಿನ ಮಳೆ

ಕಳೆದ ಎರಡು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ವರುಣ ದೇವ ಮತ್ತೆ ಅಬ್ಬರಿಸಲು ಸಿದ್ಧವಾಗಿದ್ದಾನೆ. ಇಂದಿನಿಂದ 5 ದಿನ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

25
ನೈಋತ್ಯ ಮಾರುತ ಚುರುಕು

ಬಂಗಾಳ ಉಪಮಹಾಸಾಗರದಲ್ಲಿ ನೈಋತ್ಯ ಮಾರುತ ಚುರುಕು ಹಿನ್ನೆಲೆ ಗುಡುಗು ಸಹಿತ ಭಾರೀ ಮಳೆಯ ಸಾಧ್ಯತೆಗಳಿವೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ‌ ಇಲಾಖೆ ಮಾಹಿತಿ ನೀಡಿದೆ.

35
ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆ

ಕುಶಾಲನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ದಿನನಿತ್ಯ ಏರಿಕೆ ಆಗುತ್ತಿರುವ ದೃಶ್ಯ ಕಂಡು ಬಂದಿದೆ.ಜಿಲ್ಲೆಯ ಗಡಿ ಭಾಗ ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಬಳಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ.

45
ಕಾವೇರಿ ನದಿ

ಕಳೆದ ಮೇ ತಿಂಗಳ ಅಂತ್ಯದಿಂದ ಆರಂಭಗೊಂಡ ಮಳೆ ನಿರಂತರ ಏಳು ತಿಂಗಳ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ನಾಲ್ಕು ಬಾರಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದರು ಯಾವುದೇ ಸಮಸ್ಯೆ ಸೃಷ್ಟಿಯಾಗಿಲ್ಲ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮೇ ತಿಂಗಳಲ್ಲಿ 302 ಮಿಲಿಮೀಟರ್ ಪ್ರಮಾಣದ ಮಳೆ ಸುರಿದಿದ್ದು ನಂತರ ಪ್ರತಿ ತಿಂಗಳು ಸರಾಸರಿ 150 ಮಿಲಿ ಮೀಟರ್ ಪ್ರಮಾಣದ ಮಳೆ ಬಿದ್ದ ದಾಖಲೆ ಕಂಡು ಬಂದಿದೆ.

ಇದನ್ನೂ ಓದಿ: 'ಡಿಪಿಆರ್‌ನಲ್ಲಿ ಭಾರೀ ಲೋಪ..' ಬೆಂಗಳೂರು ಸುರಂಗ ರಸ್ತೆಗೆ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದಲೇ ವಿರೋಧ!

55
ಚಳ್ಳಕೆರೆ ನಗರದ ಸಂತೆಮೈದಾನದಲ್ಲಿ ತುಂಬಿರುವ ಕೆಸರು

ಕಳೆದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಸುರಿದ ಮಳೆಗೆ ನಗರದ ನೆಹರೂ ವೃತ್ತದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಹಿಂಭಾಗದ ಇಡೀ ಸಂತೆ ಮೈದಾನ ಮಳೆನೀರು, ಕೆಸರಿನಿಂದ ಆವೃತ್ತವಾಗಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೊಂದರೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನದಿಂದ ಪ್ರಿಯಾಂಕ್‌ ಖರ್ಗೆ ವಜಾಗೊಳಿಸಿ: ಎನ್‌.ರವಿಕುಮಾರ್‌ ಒತ್ತಾಯ

Read more Photos on
click me!

Recommended Stories