ತಿರುಪತಿ ದರ್ಶನಕ್ಕೆ ಬುಕಿಂಗ್- ವಿವಿಧ ಸೇವೆಗಳಿಗೆ ಆನ್​ಲೈನ್​ನಲ್ಲಿ ಶೀಘ್ರ ಬುಕ್​ ಹೇಗೆ? ಪುಲ್​ ಡಿಟೇಲ್ಸ್

Published : May 13, 2026, 12:03 PM IST

ವಿಶ್ವದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರನ ಆಗಸ್ಟ್ ತಿಂಗಳ ದರ್ಶನಕ್ಕಾಗಿ ಆನ್‌ಲೈನ್ ಬುಕಿಂಗ್ ದಿನಾಂಕಗಳು ಪ್ರಕಟಗೊಂಡಿವೆ. ಈ ಲೇಖನವು ಲಕ್ಕಿ ಡಿಪ್, ಆರ್ಜಿತ ಸೇವಾ, ವಿಶೇಷ ಪ್ರವೇಶ ದರ್ಶನ, ಅಂಗಪ್ರದಕ್ಷಿಣಂ ಮತ್ತು ವಸತಿ ಸೌಲಭ್ಯಗಳ ಬುಕಿಂಗ್‌ಗೆ ಸಂಬಂಧಿಸಿದ ಡಿಟೇಲ್ಸ್​ ಇಲ್ಲಿದೆ. 

PREV
16
ತಿರುಪತಿಗೆ ಆನ್​ಲೈನ್​ ಬುಕಿಂಗ್​

ವಿಶ್ವದ ಅತ್ಯಂತ ಶ್ರೀಮಂತ ದೇವರಲ್ಲಿ ಒಂದು ಎಂದೆನಿಸಿಕೊಳ್ಳುತ್ತಿರುವ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯವೂ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆನ್​ಲೈನ್​ ಮೂಲಕ ಮೂರು ತಿಂಗಳ ಮೊದಲೇ ಬುಕ್ಕಿಂಗ್​ ವ್ಯವಸ್ಥೆಯಿದ್ದು, ಐದೇ ನಿಮಿಷಗಳಲ್ಲಿ ಎಲ್ಲಾ ದರ್ಶನಗಳೂ ಕ್ಲೋಸ್​ ಆಗುವುದೇ ಇದಕ್ಕೆ ಸಾಕ್ಷಿಯಾಗಿದೆ. ಆನ್​ಲೈನ್​ ಬುಕ್ಕಿಂಗ್​ ಮಾಡುವವರಷ್ಟೇ ಅಲ್ಲದೇ, ಬುಕ್ಕಿಂಗ್​ ಇಲ್ಲದೆಯೂ ಬರುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಆನ್​ಲೈನ್​ನಲ್ಲಿ ಬುಕ್​ ಮಾಡಿಕೊಂಡು ಹೋದರೆ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

26
ಆಗಸ್ಟ್​ನ ಬುಕಿಂಗ್​

ಇದೇ ಕಾರಣಕ್ಕೆ ಪ್ರತಿ ತಿಂಗಳೂ ಆನ್​ಲೈನ್​ನಲ್ಲಿ ದರ್ಶನದ ಟಿಕೆಟ್​ ಬುಕ್​ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆ. ಮೂರು ತಿಂಗಳಿನ ಮುಂಚೆ ಈ ಬುಕಿಂಗ್​ ಆರಂಭವಾಗುತ್ತದೆ. ಇದರ ಅರ್ಥ ಈಗ ಮೇ ತಿಂಗಳು. ನೀವು ಆಗಸ್ಟ್​ ತಿಂಗಳಿಗೆ ಹೋಗಲು ಬಯಸಿದರೆ ಮೇ ತಿಂಗಳಿನಲ್ಲಿ ಆನ್​ಲೈನ್​ ಬುಕ್​ ಮಾಡಿಕೊಳ್ಳಬಹುದು. ಟಿಟಿಡಿ ರಿಲೀಸ್​ ಮಾಡುವ ದಿನಗಳಲ್ಲಿಯೂ ನೀವು ಬುಕ್​ ಮಾಡಿಕೊಳ್ಳಬಹುದೇ ವಿನಾ ಬೇರೆ ದಿನಗಳಲ್ಲಿ ಆಗುವುದಿಲ್ಲ. ಪ್ರತಿ ಮೂರು ತಿಂಗಳಿಗಿಂತ ಮುಂಚಿತವಾಗಿ ಬುಕ್​ ಮಾಡುವ ಅವಕಾಶ ನಿಮಗೆ ಸಿಗುತ್ತದೆ.

36
ಲಕ್ಕಿ ಡಿಪ್​ನಿಂದ ಅದೃಷ್ಟ

ಇದೀಗ ಆಗಸ್ಟ್​ ತಿಂಗಳ ಬುಕಿಂಗ್​ ಇದೇ 21ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಅಂದರೆ, ಲಕ್ಕಿ ಡಿಪ್​ ಮಾಡಲಾಗುತ್ತದೆ. ಅದು ಇದೇ ತಿಂಗಳ 18 ರ ಬೆಳಿಗ್ಗೆ 10 ಗಂಟೆಯಿಂದ 20ರವರೆಗೆ ಬೆಳಿಗ್ಗೆ 10 ಗಂಟೆಯವರೆಗೆ ಇರುತ್ತದೆ. ಅಲ್ಲಿ ನೀವು ನಿಮ್ಮ ಡಿಟೇಲ್ಸ್​ ತುಂಬಿ ಅದೃಷ್ಟ ಪರೀಕ್ಷೆ ಮಾಡಬಹುದು.

46
ಆರ್ಜಿತ ಸೇವಾ- ವರ್ಚುವಲ್​ ಸೇವಾ

ಇದನ್ನು ಸೇವೆಗಳು 21ರಿಂದ ಆರಂಭವಾಗುತ್ತದೆ. ಆರ್ಜಿತ ಸೇವಾ ಟಿಕೆಟ್‌ಗಳು 21ರ ಬೆಳಿಗ್ಗೆ 10 ಗಂಟೆಯಿಂದ ಲಭ್ಯ. ಇದರಲ್ಲಿ ವಿವಿಧ ಸೇವೆಗಳಿದ್ದು, ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದೇ ದಿನ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆ + ದರ್ಶನದ ಟಿಕೆಟ್​ ಬಿಡುಗಡೆಯಾಗುತ್ತದೆ. ವರ್ಚುವಲ್ ಸೇವೆಗೆ ಪ್ರತಿಯೊಬ್ಬರಿಗೆ 500 ರೂಪಾಯಿ.

56
ಅಂಗಪ್ರದಕ್ಷಿಣಂ ಟಿಕೆಟ್​

ಮೇ 23ರಂದು ಅಂಗಪ್ರದಕ್ಷಿಣಂ ಟಿಕೆಟ್​ ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದ್ದರೆ, ಮಧ್ಯಾಹ್ನ 3ಕ್ಕೆ ಹಿರಿಯ ನಾಗರಿಕರ ಸೇವೆಯ ಟಿಕೆಟ್​ ಬಿಡುಗಡೆಯಾಗಲಿದೆ. ಇವೆರಡೂ ಉಚಿತವಾಗಿದೆ. ವಿಶೇಷ ಪ್ರವೇಶ (Special Entry) ಟಿಕೆಟ್​ 25ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಇದರ ಮೊತ್ತ ಒಬ್ಬರಿಗೆ 300 ರೂಪಾಯಿಗಳು. ಅದೇ ರೀತಿ ವಸತಿ ಸೌಲಭ್ಯ ಬೇಕಿದ್ದರೆ 25 ರಂದು ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗುವ ಸ್ಲಾಟ್​ನಲ್ಲಿ ಪಡೆಯಬಹುದು.

66
ಮೊದಲೇ ರೆಡಿ ಇಟ್ಟುಕೊಳ್ಳಿ

ಇದಕ್ಕೆ ನೀವು ಮೊದಲೇ ಸೈನ್​ ಇನ್​ ಮಾಡಿಟ್ಟುಕೊಂಡರೆ ಒಳಿತು. ಬಳಿಕ ನಿಮ್ಮ ಹೆಸರು, ಆಧಾರ್​ ಸಂಖ್ಯೆ, ವಯಸ್ಸು, ವಿಳಾಸ ಇವೆಲ್ಲವುಗಳನ್ನೂ ಮೊದಲೇ ರೆಡಿ ಮಾಡಿಟ್ಟುಕೊಳ್ಳಬೇಕು. ಹಿರಿಯ ನಾಗರಿಕ ಕೋಟಾಕ್ಕೆ ಆಧಾರ್​ ಕಾರ್ಡ್​ ಅಪ್​ಲೋಡ್​ ಮಾಡಬೇಕಾಗುವ ಕಾರಣ ಅದನ್ನೂ ಮೊದಲೇ ರೆಡಿ ಇಟ್ಟುಕೊಂಡರೆ ಒಳಿತು. ಸೀನಿಯರ್​ ಸಿಟಿಜನ್​ ಹಾಗೂ ಅಂಗಪ್ರದಕ್ಷಿಣೆಯು ಉಚಿತವಾಗಿದೆ. ಆನ್​ಲೈನ್​ ಮೂಲಕ ನೀವು ಹಣ ಕೊಟ್ಟು ಮೂರು ತಿಂಗಳ ಮುಂಚಿತವಾಗಿ ಬುಕ್​ ಮಾಡಿಕೊಳ್ಳಬೇಕು. ಟಿಕೆಟ್​ ಬುಕ್​ ಮಾಡಲು https://ttdevasthanams.ap.gov.in/home/dashboard ಇಲ್ಲಿ ಕ್ಲಿಕ್ ಮಾಡಿ.

Read more Photos on
click me!

Recommended Stories