ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು ವಿವರಿಸಲಾಗಿದೆ.
ತಮಿಳುನಾಡಿನಲ್ಲಿ ಇತಿಹಾಸ ಬರೆದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ನಟ ದಳಪತಿ (ಜೋಸೆಫ್) ವಿಜಯ್. ಪ್ರಮಾಣ ವಚನ ಸ್ವೀಕರಿಸುತ್ತಲೇ ಭರ್ಜರಿ ಭಾಷಣವನ್ನೂ ಮಾಡಿದ್ದಾರೆ. ಜನರ ಹಣವನ್ನು ಮುಟ್ಟುವುದಿಲ್ಲ ಎನ್ನುವ ಮೂಲಕ ರಾಜಾರೋಷವಾಗಿ ಭಾಷಣ ಮಾಡಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
26
ತಮಿಳುನಾಡಿನ ಅಮ್ಮಾ-2
ಇದರ ನಡುವೆಯೇ ಎಲ್ಲರ ಗಮನ ಸೆಳೆದಿರುವುದು ವಿಜಯ್ ಗರ್ಲ್ಫ್ರೆಂಡ್, ನಟಿ ತ್ರಿಷಾ ಕೃಷ್ಣನ್ (Trisha Krishnan). ನೀಲಿ ಬಣ್ಣದ ಸೀರೆಯುಟ್ಟು, ಮಲ್ಲಿಗೆ ಹೂವು ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಕಂಡುಬಂದರು ತ್ರಿಷಾ. ಇವರ ಲುಕ್ ನೋಡಿವರು ಜಯಲಲಿತಾ ಅವರನ್ನು ಹೋಲಿಸುತ್ತಿದ್ದಾರೆ. ಈಕೆ ಮುಖ್ಯಮಂತ್ರಿಯಾಗಬಹುದು ಎನ್ನುವಷ್ಟರ ಮಟ್ಟಿಗೆ ಪ್ರಚಾರ ಆಗುತ್ತಿದೆ.
36
ತ್ರಿಷಾ ಟ್ಯಾಟೂ
ಆದರೆ, ಇದರ ನಡುವೆಯೇ ಗಮನ ಸೆಳೆದದ್ದು ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ. ಏನಿದು ಟ್ಯಾಟೂ, ಇದಕ್ಕೂ ವಿಜಯ್ಗೂ ಸಂಬಂಧದ ಇದ್ಯಾ ಎಂದೆಲ್ಲಾ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಅದರ ಅಸಲಿಯತ್ತೇ ಬೇರೆ.
ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ ವೃಷಭ ರಾಶಿಯ ಗುರುತು. ತ್ರಿಷಾ ಅವರದ್ದು ವೃಷಭ ರಾಶಿ. ಈ ಹಿನ್ನೆಲೆಯಲ್ಲಿ ತಮ್ಮ ರಾಶಿ ಅದೃಷ್ಟ ತಂದುಕೊಡಲಿ ಎನ್ನುವ ಕಾರಣಕ್ಕೆ ಅದನ್ನು ಆಕೆ ಕೈಮೇಲೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಇದೇನು ಹೊಸತಾಗಿ ಹಾಕಿಕೊಂಡದಲ್ಲ.ಬದಲಿಗೆ ವಿಜಯ್ ಅವರು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತ್ರಿಷಾ ಅವರ ಟ್ಯಾಟೂ ಕೂಡ ಸದ್ದು ಮಾಡುತ್ತಿದೆ.
56
ವಿಜಯ್ದು ಕಟಕ ರಾಶಿ
ಅಷ್ಟಕ್ಕೂ ವಿಜಯ್ ಅವರದ್ದು ಕಟಕ ರಾಶಿಯಾಗಿದೆ. ಜ್ಯೋತಿಷದ ಪ್ರಕಾರ ಹೋದರೆ, ವೃಷಭ ರಾಶಿ ಮತ್ತು ಕರ್ಕಾಟಕ ರಾಶಿಯವರು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಿರುತ್ತಾರೆ. ಇದು ರಾಶಿಚಕ್ರದಲ್ಲಿ ಅತ್ಯಂತ ಸಾಮರಸ್ಯ, ಸ್ಥಿರ ಮತ್ತು ಪೋಷಿಸುವ ಜೋಡಿಗಳಲ್ಲಿ ಒಂದಾಗಿದೆ.
66
ಅದೃಷ್ಟ ತಂದ್ರಾ ತ್ರಿಷಾ?
ಅವರು ಸೌಮ್ಯವಾದ, ಆಳವಾದ ಭಾವನಾತ್ಮಕ ಸಂಪರ್ಕವನ್ನು ಹಂಚಿಕೊಳ್ಳುತ್ತಾರೆ. ವೃಷಭ ರಾಶಿಯವರು ಆಧಾರವಾಗಿರುವ ವಿಶ್ವಾಸಾರ್ಹತೆಯನ್ನು ಒದಗಿಸಿದರೆ, ಕರ್ಕ ರಾಶಿಯವರು ಅರ್ಥಗರ್ಭಿತ ಪೋಷಣೆಯನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ರಿಷಾ ಅವರೇ ವಿಜಯ್ ಪಾಲಿಗೆ ಅದೃಷ್ಟ ತಂದಿರುವುದಾಗಿ ಹೇಳಲಾಗುತ್ತಿದೆ.