ನವರಾತ್ರಿಯ 9 ದಿನಗಳ ರಹಸ್ಯ: ದೇವಿಯ ಕೃಪೆಗೆ 9 ದಿನ ಈ ನೈವೇದ್ಯ ಸಮರ್ಪಿಸಿ- ಯಾವ ದಿನ ಯಾವ ಪದಾರ್ಥ

Published : Oct 06, 2026, 06:44 PM IST

ಅಕ್ಟೋಬರ್ 11 ರಿಂದ 19ರವರೆಗೆ ನಡೆಯುವ ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳಿಗೆ ವಿಶೇಷ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಪ್ರತಿದಿನವೂ ಪಾಯಸ, ಸಕ್ಕರೆ, ಹಾಲಿನಂತಹ ನಿರ್ದಿಷ್ಟ ವಸ್ತುಗಳನ್ನು ಪೂಜೆಗೆ ಬಳಸುವುದರಿಂದ ರೋಗ ನಿವಾರಣೆ, ಸುಖ-ಶಾಂತಿ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.

PREV
110
ಅ.11ರಿಂದ 19 ನವರಾತ್ರಿ

ನವರಾತ್ರಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಕ್ಟೋಬರ್​ 11 ರಿಂದ 19ರವರೆಗೆ ನವರಾತ್ರಿ ಶುರುವಾಗಲಿದ್ದು, ಒಂದೊಂದು ದಿನ ಒಂದೊಂದು ನೈವೇದ್ಯವನ್ನು ಇಟ್ಟು ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರಲಿವೆ.

210
ಮೊದಲ ದಿನ ಪಾಯಸ

ಮೊದಲ ದಿನ ಶೈಲಪುತ್ರಿ ದೇವಿಗೆ ಪಾಯಸವನ್ನು ಸಮರ್ಪಿಸಬೇಕು. ಇದರಿಂದ ರೋಗಗಳು ನಿವಾರಣೆಯಾಗುತ್ತವೆ.

310
ಎರಡನೆಯ ದಿನ ಸಕ್ಕರೆ

ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಗೆ ಸಕ್ಕರೆಯನ್ನು ನೈವೇದ್ಯಕ್ಕೆ ಇಡಬೇಕು. ಹೀಗೆ ಮಾಡುವುದರಿಂದ ಪರಿವಾರದ ಆಯಸ್ಸು ಹೆಚ್ಚಾಗುತ್ತದೆ.

410
3ನೇ ದಿನ ಹಾಲು

3ನೇ ದಿನ ಚಂದ್ರಘಂಟಾ ದೇವಿಗೆ ಹಾಲನ್ನು ಅರ್ಪಿಸುವುದರಿಂದ ದುಃಖ ಮತ್ತು ಕ್ಷೇಶದ ನಾಶವಾಗುತ್ತದೆ.

510
4ನೇ ದಿನ ಮಾಲ್​ಪುವಾ

4ನೇ ದಿನ ಖುಷ್ಮಾಂಡಾ ದೇವಿಯ ಮಾಲ್​ಪುವಾ ಅರ್ಪಿಸುವುದರಿಂದ ಬುದ್ಧಿ ಮತ್ತು ಹಣದ ಹರಿವು ಬರುತ್ತದೆ.

610
5ನೇ ದಿನ ಬಾಳೆಹಣ್ಣು

5ನೇ ದಿನ ಬಾಳೆಹಣ್ಣು ಸ್ಕಂದಮಾತಾ ದೇವಿಗೆ ನೈವೇದ್ಯ ಮಾಡುವುದರಿಂದ ಸುಖ, ಶಾಂತಿ ಸಂಭವಿಸುತ್ತದೆ.

710
6ನೇ ದಿನ ಜೇನುತುಪ್ಪ

6ನೇ ದಿನ ಜೇನುತುಪ್ಪವನ್ನು ಮಾ ಕಾತ್ಯಾಯಿನಿಗೆ ಸಮರ್ಪಿಸುವುದರಿಂದ ನಿಂತುಹೋದ ಕೆಲಸವೆಲ್ಲಾ ಪುನಃ ಆರಂಭವಾಗುವುದು.

810
7ನೇ ದಿನ ಬೆಲ್ಲ

7ನೇ ದಿನ ಮಾ ಕಾಲರಾತ್ರಿಗೆ ಬೆಲ್ಲವನ್ನು ಸಮರ್ಪಿಸಬೇಕು. ಹೀಗೆ ಮಾಡಿದರೆ ಎಲ್ಲ ಸಂಕಟ ಮತ್ತು ಕೆಟ್ಟ ದೃಷ್ಟಿ ಹೋಗುತ್ತದೆ.

910
8ನೇ ದಿನ ತೆಂಗಿನಕಾಯಿ

8ನೇ ದಿನ ತೆಂಗಿನಕಾಯಿಯನ್ನು ದೇವಿ ಮಹಾಗೌರಿಗೆ ಇದನ್ನು ಅರ್ಪಿಸಿದರೆ ನಿಮ್ಮ ಮನೋಭಿಲಾಷ್ಟೆಗಳು ನೆರವೇರುವುದು.

1010
9ನೇ ದಿನ ಹಲ್ವಾಪೂರಿ

9ನೇ ದಿನ ಹಲ್ವಾಪೂರಿಯನ್ನು ಮಾ ಸಿದ್ಧಿಧಾತ್ರಿಗೆ ಸಮರ್ಪಿಸಿದರೆ ಇದರಿಂದ ಸಂಪೂರ್ಣ ನವರಾತ್ರಿ ಸಫಲವಾಗುತ್ತದೆ.

Read more Photos on
click me!

Recommended Stories