Vastu Tips for Home Windows: ಮನೆಯ ಕಿಟಕಿಗಳನ್ನು ಯಾವಾಗಲೂ ಮುಚ್ಚಿಟ್ಟರೆ ಗಾಳಿ ಮತ್ತು ನೈಸರ್ಗಿಕ ಬೆಳಕಿನ ಸಂಚಾರ ಕಡಿಮೆಯಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿಗಳ ಸ್ವಚ್ಛತೆ, ಪರದೆಗಳ ಆಯ್ಕೆ ಮತ್ತು ಅವುಗಳ ನಿರ್ವಹಣೆ ಏಕೆ ಮುಖ್ಯ? ಇಲ್ಲಿದೆ ಮಾಹಿತಿ.
ಮನೆಯ ವಿನ್ಯಾಸ ಮತ್ತು ಅಲಂಕಾರಕ್ಕೆ ಸಂಬಂಧಿಸಿದ ಹಲವು ಸಣ್ಣ ವಿಷಯಗಳಿಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವ ನೀಡಲಾಗಿದೆ. ಅವುಗಳಲ್ಲಿ ಕಿಟಕಿಗಳ ಸ್ಥಾನ ಮತ್ತು ಅವುಗಳನ್ನು ಬಳಸುವ ವಿಧಾನವೂ ಸೇರಿವೆ. ವಾಸ್ತು ಶಾಸ್ತ್ರದ ಪ್ರಕಾರ, ಕಿಟಕಿಗಳು ಮನೆಯೊಳಗೆ ಗಾಳಿ, ಬೆಳಕು ಮತ್ತು ಶಕ್ತಿಯ ಸಂಚಾರಕ್ಕೆ ದಾರಿಯಾಗಿವೆ. ಆದ್ದರಿಂದ ಕಿಟಕಿಗಳನ್ನು ದೀರ್ಘಕಾಲದವರೆಗೆ ಮುಚ್ಚಿಡುವುದು ಶುಭವಲ್ಲ. ಅದರಲ್ಲೂ ಹಗಲಿನಲ್ಲಿ ಮನೆಯೊಳಗೆ ನ್ಯಾಚುರಲ್ ಗಾಳಿ-ಬೆಳಕು ಪ್ರವೇಶಿಸುವುದು ಮುಖ್ಯ.
27
ಕಿಟಕಿಗಳನ್ನು ಯಾವಾಗಲೂ ಮುಚ್ಚಿಟ್ಟರೆ ಏನಾಗುತ್ತದೆ?
ನಕಾರಾತ್ಮಕ ಶಕ್ತಿಯ ಪ್ರಭಾವ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಕ್ತಿಯ ಸಮತೋಲಿತ ಸಂಚಾರವು ಸಕಾರಾತ್ಮಕ ವಾತಾವರಣವನ್ನು ಕಾಪಾಡಲು ಅಗತ್ಯವಾಗಿದೆ. ಬಾಗಿಲು ಮತ್ತು ಕಿಟಕಿಗಳನ್ನು ದೀರ್ಘಕಾಲ ಮುಚ್ಚಿಟ್ಟರೆ ಗಾಳಿ ಹಾಗೂ ಬೆಳಕಿನ ಸಂಚಾರಕ್ಕೆ ಅಡ್ಡಿಯಾಗಬಹುದು. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಹೆಚ್ಚುತ್ತದೆ. ಇದರಿಂದ ಕುಟುಂಬದ ಸಾಮರಸ್ಯ, ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಉಂಟಾಗುತ್ತದೆ.
37
ಶಕ್ತಿಯ ಸಂಚಾರಕ್ಕೆ ಅಡ್ಡಿ
ವಾಸ್ತು ಶಾಸ್ತ್ರದಲ್ಲಿ ಮನೆಯ ವಿವಿಧ ಭಾಗಗಳಲ್ಲಿ ಶಕ್ತಿಯ ಸಂಚಾರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಕಿಟಕಿಗಳನ್ನು ಮುಚ್ಚಿಟ್ಟಾಗ ಕೋಣೆಯೊಳಗೆ ನೈಸರ್ಗಿಕ ಗಾಳಿ ಮತ್ತು ಬೆಳಕು ಪ್ರವೇಶಿಸುವುದು ಕಡಿಮೆಯಾಗಬಹುದು. ಹೀಗಾಗಿ ಹಗಲಿನ ಸಮಯದಲ್ಲಿ ಸ್ವಲ್ಪ ಹೊತ್ತಾದರೂ ಕಿಟಕಿಗಳನ್ನು ತೆರೆದಿಡಲು ಸಲಹೆ ನೀಡಲಾಗುತ್ತದೆ.
ಕಿಟಕಿಗಳನ್ನು ತೆರೆಯುವುದು ಮಾತ್ರವಲ್ಲ, ಅವುಗಳ ಗಾಜು, ಚೌಕಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದೂ ಮುಖ್ಯವಾಗಿದೆ. ಕಿಟಕಿಗಳ ಮೇಲೆ ಧೂಳು ಮತ್ತು ಕೊಳಕು ಸಂಗ್ರಹವಾದರೆ ನೈಸರ್ಗಿಕ ಬೆಳಕು ಕೋಣೆಯೊಳಗೆ ಪ್ರವೇಶಿಸುವುದು ಕಡಿಮೆಯಾಗಬಹುದು.
57
ಸರಿಯಾದ ಸ್ಕ್ರೀನ್ ಆಯ್ಕೆಮಾಡಿ
ಕಿಟಕಿಗಳಿಗೆ ಅತಿಯಾಗಿ ದಪ್ಪವಾದ ಅಥವಾ ಭಾರವಾದ ಸ್ಕ್ರೀನ್ ಹಾಕುವುದರಿಂದ ಕೋಣೆಯೊಳಗೆ ಸೂರ್ಯನ ಬೆಳಕು ಮತ್ತು ಗಾಳಿ ಪ್ರವೇಶಿಸುವುದು ಕಡಿಮೆಯಾಗಬಹುದು. ವಾಸ್ತು ಪ್ರಕಾರ, ನೈಸರ್ಗಿಕ ಬೆಳಕು ಸುಲಭವಾಗಿ ಒಳಬರುವಂತೆ ಮಾಡುವ ಪರದೆಗಳನ್ನು ಆಯ್ಕೆಮಾಡುವುದು ಉತ್ತಮ.
67
ಶಬ್ದ ಮಾಡುವ ಕಿಟಕಿಗಳನ್ನು ಸರಿಪಡಿಸಿ
ಕಿಟಕಿಗಳನ್ನು ತೆರೆಯುವಾಗ ಅಥವಾ ಮುಚ್ಚುವಾಗ ನಿರಂತರವಾಗಿ ಕಿರಿಕಿರಿ ಶಬ್ದ ಅಥವಾ ಘರ್ಷಣೆಯ ಸದ್ದು ಕೇಳಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ವಾಸ್ತು ಪ್ರಕಾರ, ಇಂತಹ ಶಬ್ದಗಳನ್ನು ಶುಭವಲ್ಲ. ಆದ್ದರಿಂದ ಕಿಟಕಿಗಳ ಕೀಲುಗಳು, ಚಿಲಕಗಳು ಅಥವಾ ಇತರ ಹಾಳಾದ ಭಾಗಗಳನ್ನು ಸಮಯಕ್ಕೆ ಸರಿಯಾಗಿ ದುರಸ್ತಿಪಡಿಸಬೇಕು.
77
ಆರೋಗ್ಯದ ದೃಷ್ಟಿಯಿಂದಲೂ ಗಾಳಿಯ ಸಂಚಾರ ಮುಖ್ಯ
ಕಿಟಕಿಗಳನ್ನು ಕಾಲಕಾಲಕ್ಕೆ ತೆರೆಯುವುದರಿಂದ ವಾಸ್ತು ಸಂಬಂಧಿತ ಪ್ರಯೋಜನಗಳಷ್ಟೇ ಅಲ್ಲ, ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದಲೂ ಅನುಕೂಲಗಳಿವೆ. ಮನೆಯೊಳಗೆ ಉತ್ತಮ ಗಾಳಿ ಬೆಳಕು ಇದ್ದರೆ ಉತ್ತಮ ಆರೋಗ್ಯವೂ ನಿಮ್ಮದಾಗುತ್ತದೆ.