ಯಾವ ರಾಶಿಯವರಿಗೆ ಯಾವ ನಂಬರ್ ಲಕ್ ತರುತ್ತೆ? ಇಲ್ಲಿದೆ ಲಿಸ್ಟ್

Published : May 17, 2025, 01:12 PM ISTUpdated : May 19, 2025, 01:56 PM IST

ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಕೆಲವು ವಸ್ತು, ಬಣ್ಣ ಅಥವಾ  ನಿರ್ದಿಷ್ಟ ಸಂಖ್ಯೆ ಅದೃಷ್ಟ ತರುತ್ತದೆ ಎಂದು ಹಲವರು ನಂಬಿರುತ್ತಾರೆ. ಕೆಲವರಿಗೆ ಹುಟ್ಟಿದ ದಿನವೇ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಅದು ವಿಭಿನ್ನವಾಗಿರುತ್ತದೆ. ರಾಶಿ ಆಧಾರದ ಮೇಲೆ ಪ್ರತ್ಯೇಕ ರಾಶಿಯವರಿಗೆ ಅದೃಷ್ಟ ತರುವ ನಂಬರ್ ಇರುತ್ತದೆ. ಹಾಗಾದರೆ ಆಯಾ ರಾಶಿಯವರ ಅದೃಷ್ಟ ಸಂಖ್ಯೆ ಯಾವುದು?

PREV
112
ಯಾವ ರಾಶಿಯವರಿಗೆ ಯಾವ ನಂಬರ್ ಲಕ್ ತರುತ್ತೆ? ಇಲ್ಲಿದೆ ಲಿಸ್ಟ್
ಮೇಷ ರಾಶಿ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಇವರು ಪ್ರತಿ ಕೆಲಸದಲ್ಲೂ ದಿ ಬೆಸ್ಟ್ ಪರಿಣಾಮವನ್ನೇ ಅಪೇಕ್ಷಿಸುತ್ತಾರೆ. ಇವರಿಗೆ ಅದೃಷ್ಟ ಸಂಖ್ಯೆ 1. ಹಾಗಾಗಿ ಮೇಷ ರಾಶಿಯವರು ಉತ್ತಮ ಕೆಲಸಗಳನ್ನು ಆರಂಭಿಸುವಾಗ ಈ ಸಂಖ್ಯೆಗೆ ಆದ್ಯತೆ ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಂಖ್ಯೆ 1 ಬಿಟ್ಟರೆ 9, 36, 13, 69, 53, 67 ಈ ಸಂಖ್ಯೆಗಳನ್ನೂ ಲಕ್ಕಿ ಎಂದೇ ಪರಿಗಣಿಸಬಹುದು. 

212
ವೃಷಭ ರಾಶಿ

ಈ ರಾಶಿಯ ಅಧಿಪತಿ ಶುಕ್ರ. ಇವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ (Romantic), ತರ್ಕಿಸುತ್ತಾರೆ. ಆದರೂ ದಯೆಯೇ ಧರ್ಮದ ಮೂಲವಯ್ಯ ಎಂಬುದನ್ನು ನಂಬುತ್ತಾರೆ. ಈ ರಾಶಿಯವರ ಲಕ್ಕಿ ನಂಬರ್ 2. ವೃಷಭ ರಾಶಿಯವರಿಗೆ ಸಂಖ್ಯೆ 2 ಅದೃಷ್ಟ ತಂದು ಕೊಡುತ್ತದೆ. ಸಂಖ್ಯೆ 2ನ್ನು ಬಿಟ್ಟರೆ 6, 9, 11, 35, 50, 57, 82 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದು.

312
ಮಿಥುನ ರಾಶಿ


ಬುಧ ಗ್ರಹ ಈ ರಾಶಿಯ ಅಧಿಪತಿ. ಹಾಗಾಗಿ ಇವರು ಹೆಚ್ಚು ಬುದ್ಧಿವಂತರಲ್ಲದೇ, ಕ್ರಿಯಾಶೀಲರೂ ಹೌದು. ಸಂಖ್ಯೆ 8 ಇವರಿಗೆ ಅದೃಷ್ಟ ತರುತ್ತದೆ. ಅದು ಬಿಟ್ಟರೆ 3, 12, 18, 35, 43, 52, 86 ಈ ಸಂಖ್ಯೆಗಳು ಲಕ್ಕಿ.

412
ಕರ್ಕಾಟಕ ರಾಶಿ


ಈ ರಾಶಿಯ ಅಧಿಪತಿ ಚಂದ್ರ. ಸರಳ ಸ್ವಭಾವದ ಈ ರಾಶಿಯ ವ್ಯಕ್ತಿಗಳಿಗೆ ಸಂಖ್ಯೆ 7 ಲಕ್ಕಿ ನಂಬರ್. ಉತ್ತಮ ಕಾರ್ಯಗಳಲ್ಲಿ ಈ ಸಂಖ್ಯೆಯನ್ನು ಬಳಸಿದರೆ ಶುಭ ಫಲ ಕಟ್ಟಿಟ್ಟ ಬುತ್ತಿ. ಸಂಖ್ಯೆ 7ನ್ನು ಬಿಟ್ಟರೆ 2, 11, 58, 24, 66, 53 ಈ ಸಂಖ್ಯೆಗಳು ಶುಭ ತರುವುದರಲ್ಲಿ ಅನುಮಾನವೇ ಇಲ್ಲ. 

512
ಸಿಂಹ ರಾಶಿ

ಸೂರ್ಯ ಗ್ರಹ ಸಿಂಹ ರಾಶಿಯ ಅಧಿಪತಿ. ಹಠ ಸ್ವಭಾವದ ಈ ರಾಶಿಯವರು ಸೋತರೂ ಸೋಲೊಪ್ಪಿಕೊಳ್ಳುವುದಿಲ್ಲ. ಇವರ ಅದೃಷ್ಟ ತರುವ ಸಂಖ್ಯೆ 1. ಸಂಖ್ಯೆ 1ನ್ನು ಬಿಟ್ಟರೆ 4, 10, 34, 83, 59 ಈ ಸಂಖ್ಯೆಗಳು ಲಕ್ಕಿ ಎನ್ನಬಹುದು.
 

612
ಕನ್ಯಾ ರಾಶಿ

ಗ್ರಹ ಬುಧ ಅಧಿಪತಿ ಆಗಿರೋ ಕನ್ಯಾ ರಾಶಿಯ ವ್ಯಕ್ತಿಗಳು ಸೂಕ್ಷ್ಮ ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 5 ಅದೃಷ್ಟ  ತಂದು ಕೊಡುತ್ತದೆ. ಅದು ಬಿಟ್ಟರೆ 3, 16, 90, 29, 80 ಈ ಸಂಖ್ಯೆಗಳು ಲಕ್ಕಿ.

712
ತುಲಾ ರಾಶಿ

ಶುಕ್ರ ಗ್ರಹವೇ ಅಧಿಪತಿ ಆಗಿರೋ ಈ ರಾಶಿಯವರಿಗೆ ಆದರ್ಶ ವ್ಯಕ್ತಿತ್ವ ಇರುತ್ತದೆ. ಇವರಿಗೆ ಸಂಖ್ಯೆ 4 ಶುಭ. ಸಂಖ್ಯೆ 4ನ್ನು ಬಿಟ್ಟರೆ 6, 7, 20, 55, 35 ಈ ಸಂಖ್ಯೆಗಳು ಲಕ್ಕಿ.

812
ವೃಶ್ಚಿಕ ರಾಶಿ

ಮಂಗಳ ಗ್ರಹ ಅಧಿಪತಿ ಆಗಿರೋ ವೃಶ್ಚಿಕ ರಾಶಿಯವರಿಗೆ ಹೆಚ್ಚು ಕ್ರಿಯೇಟಿವಿಟಿ ಇರುತ್ತದೆ. ಹಕ್ಕಿಯಂತೆ ಸ್ವೇಚ್ಛೆಯಾಗಿ ಹಾರಾಡುವ ಹಂಬಲ ಇವರಿಗೆ ಹೆಚ್ಚು. ಸಂಖ್ಯೆ 9 ಇವರಿಗೆ ಅದೃಷ್ಟ ತರುತ್ತದೆ. ಇದು ಬಿಟ್ಟರೆ 11, 17, 27, 45, 53 ವೃಶ್ಛಿಕ ರಾಶಿಗೆ ಲಕ್ ತರೋ ನಂಬರ್ಸ್ ಎನ್ನಬಹುದು. 

912
ಧನು ರಾಶಿ


ಧನು ರಾಶಿಯ ಅಧಿಪತಿ ಗುರು ಗ್ರಹ. ಅಂದು ಕೊಂಡ ಗುರಿ ಸಾಧಿಸುವವರೆಗೂ ಛಲ ಬಿಡದ ಸ್ವಭಾವ ಇವರದ್ದು. ಇವರಿಗೆ ಸಂಖ್ಯೆ 3 ಅದೃಷ್ಟ ತರುತ್ತದೆ. ಸಂಖ್ಯೆ 3ನ್ನು ಬಿಟ್ಟರೆ 5, 15, 12, 21, 30 ಈ ಸಂಖ್ಯೆಗಳು ಲಕ್ಕಿ.

1012
ಮಕರ ರಾಶಿ


ಈ ರಾಶಿಯ ಅಧಿಪತಿ ಶನಿ ಗ್ರಹ. ಹೆಚ್ಚು ಆತ್ಮವಿಶ್ವಾಸವುಳ್ಳ ಈ ರಾಶಿಯವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು. ಇವರಿಗೆ ಸಂಖ್ಯೆ 4 ಅದೃಷ್ಟ ತಂದು ಕೊಡುತ್ತದೆ. ಸಂಖ್ಯೆ 4ನ್ನು ಬಿಟ್ಟರೆ 1, 10, 13, 17, 22, 25 ಅದೃಷ್ಟ ತರೋ ಸಂಖ್ಯೆಗಳು.

1112
ಕುಂಭ ರಾಶಿ


ಈ ರಾಶಿಯ ಅಧಿಪತಿ ಗ್ರಹ ಶನಿ ದೇವ. ಈ ರಾಶಿಯವರಿಗೆ ಕ್ರಿಯಾಶೀಲತೆ ಮತ್ತು ವಿದೇಯ ಗುಣ ಹೆಚ್ಚು. ಇವರಿಗೆ ಸಂಖ್ಯೆ 8 ಶುಭವನ್ನು ತರುತ್ತದೆ. ಸಂಖ್ಯೆ 8ನ್ನು ಬಿಟ್ಟರೆ 4, 13, 17, 40, 61 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

1212
ಮೀನ ರಾಶಿ


ಈ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ಸಮಸ್ಯೆಗಳನ್ನು ಬಹು ಬೇಗ ನಿವಾರಿಸಿಕೊಳ್ಳುವ ಚತುರತೆ ಹೊಂದಿರುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆ 3. ಸಂಖ್ಯೆ 3ನ್ನು ಬಿಟ್ಟರೆ 12, 27, 30, 34, 61 ಈ ಸಂಖ್ಯೆಗಳು ಲಕ್ಕಿ.

Read more Photos on
click me!

Recommended Stories