Published : May 17, 2025, 10:15 AM ISTUpdated : May 19, 2025, 01:36 PM IST
ಭಾರತದ ಶ್ರೀಮಂತ ಆಧ್ಯಾತ್ಮಿಕ ಭೂಪ್ರದೇಶವು ಕೇವಲ ಪೂಜಾ ಸ್ಥಳಗಳಾಗಿಲ್ಲ, ಬದಲಾಗಿ ಇಲ್ಲಿ ಆಳವಾದ ಪುರಾಣಗಳು, ದಂತಕಥೆಗಳು ಮತ್ತು ಕೆಲವೊಮ್ಮೆ ಭಯಾನಕ ಶಾಪಗಳ ಕೇಂದ್ರಗಳು ಇವೆ. ಈ ಶಾಪದ ಜಾಗದಲ್ಲಿ ದೇವಸ್ಥಾನಗಳು ಕೂಡ ಸ್ಥಾಪಿತವಾಗಿವೆ. ಸ್ಥಳೀಯರ ಪ್ರಕಾರ ಶಾಪಿತ ಭೂಮಿಯ ಮೇಲೆ ಈ ದೇಗಲುಗಳು ನಿಂತಿವೆ.
ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಕೆಲ ದೇವಾಲಯಗಳು ಶಾಪದ ಜಾಗದ ಮೇಲೆ ಸ್ಥಾಪಿತವಾಗಿದೆ ಎನ್ನುತ್ತಾರೆ. ಹಾಗಾದರೆ ಯಾವ ದೇವಾಲಯ? ಏನು ಶಾಪ ಇದೆ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
27
ಕರ್ನಾಟಕ ತಲಕಾಡು ದೇವಾಲಯಗಳು
ಕರ್ನಾಟಕದ ಕಾವೇರಿ ನದಿಯ ದಡದಲ್ಲಿರುವ ತಲಕಾಡು, ಭಯಾನಕ ಶಾಪ ಕೂಡ ಇದೆ. ಸ್ಥಳೀಯರು ಹೇಳುವ ಪ್ರಕಾರ, 17ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಮೈಸೂರಿನ ರಾಣಿಯಾದ ಅಲಮೇಲಮ್ಮಳು ಈ ಶಾಪವನ್ನು ಹಾಕಿದ್ದಳಂತೆ.
37
ತಲಕಾಡು ದೇವಾಲಯಗಳ ಮೇಲೆ ಏನು ಶಾಪವಿದೆ?
ಮೈಸೂರು ರಾಜನು ಅಲಮೇಲಮ್ಮಳ ಆಭರಣಗಳನ್ನು ಬಲವಂತವಾಗಿ ತೆಗೆದುಕೊಳ್ಳಲು ಪ್ರಯತ್ನಪಟ್ಟಾಗ, ಆಕೆ ತಲಕಾಡಿನಿಂದ ಓಡಿಹೋಗಿ ಇಡೀ ಪಟ್ಟಣವು ಮರಳಿನಡಿ ಮುಳುಗಿಹೋಗಬೇಕು, ರಾಜಕುಟುಂಬವು ಉತ್ತರಾಧಿಕಾರಿಗಳಿಲ್ಲದೆ ಮರೆಯಾಗುತ್ತದೆ, ಭೂಮಿಯು ಶಾಶ್ವತವಾಗಿ ಬಂಜರಾಗಿರುತ್ತದೆ ಎಂದು ಶಾಪ ಹಾಕಿದ್ದಳು. ತಲಕಾಡಿನಲ್ಲಿ ನಿಜಕ್ಕೂ ಮರಳಿನಡಿ ಮುಳುಗಿರುವ ಪ್ರಾಚೀನ ದೇವಾಲಯಗಳಿವೆ. ಈ ಪ್ರದೇಶವು ಮರಳಿನ ದಿಬ್ಬಗಳಿಂದ ಆವೃತವಾಗಿದೆ. ಶತಮಾನದ ದೇವಾಲಯಗಳನ್ನು ಉತ್ಖನನ ಮಾಡಲಾಗುತ್ತದೆ, ಆಗ ಮರಳಿನಿಂದ ಮುಚ್ಚಲ್ಪಟ್ಟ ಅವಶೇಷಗಳು ಹೊರಬರುತ್ತವೆ. ಸ್ಥಳೀಯರು ಈ ಶಾಪವು ಸತ್ಯ, ಸದ್ಯ ನಡೆಯುವ ಘಟನೆಗಳಿಗೆ ಇದೇ ಕಾರಣ ಎನ್ನುತ್ತಾರೆ.
"ರಾಜಸ್ಥಾನದ ಖಜುರಾಹೋ" ಎಂದು ಕರೆಯಲ್ಪಡುವ ಕಿರಾಡು, ಬರ್ಮರ್ ಜಿಲ್ಲೆಯಲ್ಲಿ ಸಂಕೀರ್ಣವಾಗಿ ಕೆತ್ತನೆ ಮಾಡಲಾದ ದೇವಾಲಯಗಳ ಸಮೂಹವೇ ಇದೆ. ಈ ಸ್ಥಳವು ಒಂದು ಕಾಲದಲ್ಲಿ ಚೌಹಾಣ ಆಡಳಿತಗಾರರ ಅಡಿಯಲ್ಲಿ ಸಮೃದ್ಧವಾಗಿತ್ತು. ಸ್ಥಳೀಯ ಜಾನಪದ ಕತೆಗಳು ಇದನ್ನು ಒಂದು ಶಾಪ ಎನ್ನುತ್ತವೆ.
57
ದಂತಕಥೆ ಹೇಳುವಂತೆ, ಸ್ಥಳೀಯ ಆಡಳಿತಗಾರ ಅಥವಾ ಪುರೋಹಿತನು ಆಕ್ರಮಣಕಾರಿ ಪಡೆಗಳಿಂದ ಅಥವಾ ದೇವಾಲಯಗಳ ಅಪವಿತ್ರತೆಯಿಂದ ಕೋಪಗೊಳ್ಳುತ್ತಾನೆ, ಆಮೇಲೆ ನಗರವು ಶಾಶ್ವತವಾಗಿ ಜನರಿಲ್ಲದಿರಲಿ ಎಂದು ಶಾಪ ಹಾಕ್ತಾನೆ ಎಂದು ಹೇಳುವುದು. ಈ ಶಾಪವು ರಾತ್ರಿಯಿಡೀ ನಗರವನ್ನು ಶಿಥಿಲಗೊಳಿಸುವುದು. ನಿವಾಸಿಗಳು ಓಡಿಹೋಗುವಂತೆ ಮಾಡಿತು. ಅಂದಿನಿಂದ, ದೇವಾಲಯಗಳು, ನಗರವು ಮರಳಿನಡಿ ಮರೆತುಹೋಗಿ, ಒಂಟಿಯಾಗಿವೆ ಎನ್ನಲಾಗಿದೆ.
ಆಕ್ರಮಣ, ಬರ, ಅಥವಾ ವಾಣಿಜ್ಯ ಮಾರ್ಗಗಳ ಬದಲಾವಣೆಗಳಿಂದ ಈ ರೀತಿ ಆಗಿವೆ ಎಂದು ಪುರಾತತ್ವ ಶಾಸ್ತ್ರದ ಸಾಕ್ಷ್ಯಗಳು ತೋರಿಸುತ್ತವೆ. ಆದರೂ, ಸ್ಥಳೀಯರು ಈ ಶಾಪವೇ ನಗರವು ದಿಢೀರನೆ ಮಾಯವಾಗಲು ಮತ್ತು ದೇವಾಲಯಗಳು ಜನರೇ ಇಲ್ಲದಿರಲು ಕಾರಣವೆಂದು ನಂಬುತ್ತಾರೆ.
67
ಪದ್ಮನಾಭಸ್ವಾಮಿ ದೇವಾಲಯ, ಕೇರಳ
ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಾಲಯವು ಅಪಾರ ಸಂಪತ್ತಿದ್ದು, ಗುಪ್ತ ಭಂಡಾರಗಳಿಗೆ ಹೆಸರುವಾಸಿಯಾಗಿದೆ. ಆರು ಭೂಗತ ಭಂಡಾರಗಳಲ್ಲಿ, ಈ ಭಂಡಾರವು ಪ್ರಾಚೀನ ಶಾಪದಿಂದಾಗಿ ತೆರೆಯದೆ ಉಳಿದಿದೆ. ಸ್ಥಳೀಯ ನಂಬಿಕೆ, ದೇವಾಲಯದ ಸಂಪ್ರದಾಯದ ಪ್ರಕಾರ, ಈ ಭಂಡಾರವನ್ನು ತೆರೆಯಲು ಯತ್ನಿಸಿದರೆ ಮಾರಕ ಶಾಪ ಆಗುವುದು. ಇದರಿಂದ ವಿಪತ್ತು ಅಥವಾ ಮರಣ ಆಗುವುದು.
77
ಸಂಪತ್ತು ಮುಟ್ಟಿದರೆ ಏನಾಗುವುದು?
ದೇವಾಲಯದ ಕಥೆಯ ಪ್ರಕಾರ ಈ ಭಂಡಾರವನ್ನು ದೈವಿಕ ಶಕ್ತಿಗಳು, ಪ್ರಾಚೀನ ಮಂತ್ರಗಳಿಂದ ಸಂರಕ್ಷಿಸಲಾಗಿದೆ ಎಂದು ಹೇಳುತ್ತದೆ, ರಾಜಕುಟುಂಬವೂ ಸಹ ಈ ಮುಚ್ಚಿದ ಕೊಠಡಿಯ ಪವಿತ್ರತೆಯನ್ನು ಗೌರವಿಸಬೇಕೆಂದು ಎಚ್ಚರಿಸುತ್ತದೆ. ಈ ಭಂಡಾರವು ಮುಚ್ಚಿದ್ದರೂ ಕೂಡ, ಅತೀಂದ್ರಿಯ ಶಾಪವನ್ನು ಖಚಿತಪಡಿಸುವ ಯಾವುದೇ ವೈಜ್ಞಾನಿಕ ಅಥವಾ ಪುರಾತತ್ವ ಶಾಸ್ತ್ರದ ಸಾಕ್ಷ್ಯವಿಲ್ಲ. ಆದರೆ, ರಾಜಕುಟುಂಬ ಮತ್ತು ದೇವಾಲಯದ ಅಧಿಕಾರಿಗಳು ಇದನ್ನು ನಂಬುತ್ತಾರೆ. ಸ್ಥಳೀಯರು ಇದನ್ನು ಗೌರವಿಸುತ್ತಾರೆ.