ಜ್ಯೋತಿಷ, ಸಂಖ್ಯಾಶಾಸ್ತ್ರ, ಜಾತಕ... ಇವೆಲ್ಲವನ್ನೂ ನಂಬುವ ಎಷ್ಟು ದೊಡ್ಡ ವರ್ಗ ಇದೆಯೋ, ನಂಬದ ವರ್ಗವೂ ಇದೆ. ಆದರೆ, ಸಿನಿಮಾ, ರಾಜಕಾರಣ ಕ್ಷೇತ್ರದ ಸೆಲೆಬ್ರಿಟಿಗಳ ವಿಷಯಕ್ಕೆ ಬಂದಾಗ ಅದೊಂದು ಘಟ್ಟದಲ್ಲಿ ಎಂಥ ಸ್ಟಾರ್ಗಳೇ ಆಗಿದ್ದರೂ ಇದನ್ನು ನಂಬಿಯೇ ನಂಬುತ್ತಾರೆ. ಇದೇ ಕಾರಣಕ್ಕೆ ಇಂಗ್ಲಿಷ್ನಲ್ಲಿ ಎಷ್ಟೋ ನಟ-ನಟಿಯರ ಸ್ಪೆಲ್ಲಿಂಗ್ಗಳು ವಿಚಿತ್ರ ಆಗಿ ಕಾಣುವುದು ಉಂಟು. ಅವರ ಇಂಗ್ಲಿಷ್ ಹೆಸರುಗಳನ್ನು ಕನ್ನಡಕ್ಕೆ ಮಾಡಿದರೆ ಅದು ಬೇರೆಯದ್ದೇ ಹೆಸರು ಎನ್ನಿಸುವುದೂ ಉಂಟು. ಎಕ್ಸ್ಟ್ರಾ ಯಾವುದೋ ಒಂದು ಆಲ್ಫಬೆಟ್ ಸೇರಿಸಿಕೊಂಡಿವುದನ್ನು ನೋಡಬಹುದು. ಇನ್ನು ಕೆಲವರು ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿರುವುದು ಇದೆ. ಕೆಲವು ಚಿತ್ರನಟರು ಇನಿಷಿಯಲ್ಗಳನ್ನು ಸೇರಿಸಿಕೊಳ್ಳುವುದನ್ನು ನೋಡಬಹುದು. ಕುತೂಹಲದ ವಿಷಯ ಏನೆಂದರೆ, ಹೀಗೆ ಅಕ್ಷರನೋ, ಹೆಸರೋ ಏನೋ ಒಂದು ಬದಲಾವಣೆ ಮಾಡಿದಾಗ ಅವರ ಸಂಪೂರ್ಣ ಜೀವನವೇ ಬದಲಾಗಿ ಅದೃಷ್ಟ ಅವರ ಕೈಹಿಡಿದಿರುವ ಸಾಕಷ್ಟು ಉದಾಹರಣೆಗಳು ಇವೆ. ಅದಕ್ಕೇ ತಾನೇ ಸರಿಯಾದ ಜ್ಯೋತಿಷ ಶಾಸ್ತ್ರ ಎನ್ನುವುದನ್ನು ಸೈನ್ಸ್ ಎನ್ನುವುದು.