Sun Signಗೂ ಹಲವರ ವ್ಯಕ್ತಿತ್ವಕ್ಕೂ ನೇರಾ ನೇರಾ ಸಂಬಂಧವಿರುತ್ತೆ. ಕೆಲವರು ಲೀಡರ್ಸ್ ಆಗಿರುತ್ತಾರೆ. ಯಾರು ಆ ಹುದ್ದೆಯನ್ನು ಸಮರ್ಪಕವಾಗಿ ಮ್ಯಾನೇಜ್ ಮಾಡುತ್ತಾರೋ ಅವರು ಇವೇ ನಾಲ್ಕು ರಾಶಿಯವರು.
ಬಹಳ ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಶ್ರಮ ಹಾಕಿ ಕೆಲಸ ಮಾಡಿದರೂ ಇದೀಗ ನಿಮ್ಮನ್ನು ಡೀಮೋಟಿವೇಟ್ ಮಾಡಲಾಗುತ್ತಿದೆ ಅನಿಸ್ತಾ ಇದ್ಯಾ? ಮಾಡಿದ ಒಳ್ಳೇ ಕೆಲಸಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಪ್ರತಿಫಲ ಸಿಕ್ತಾ ಇಲ್ಲವೆಂದರೆ ಕರ್ಮ ಫಲ ಎನ್ನುತ್ತಾರೆ. ಗ್ರಹಗತಿಗಳ ಚಲನೆಯೂ ಕೆಲವೊಮ್ಮೆ ಒಳ್ಳೇ ಪ್ರತಿಫಲ ಕೊಡುವಂತೆ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳವರು ಲೀಡರ್‌ಶಿಪ್ ನಿಭಾಯಿಸಲೆಂದೇ ಹುಟ್ಟಿರುತ್ತಾರೆ? ಅಂಥ ನಾಯಕತ್ವ ಗುಣಗಳಿರುವ ನಾಲ್ಕು ರಾಶಿಗಳಿವು.
26
ಲೀಡರ್‌ಶಿಪ್ ಬಗ್ಗೆ ಜ್ಯೋತಿಷ್ಯ ಹೇಳುವುದೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ತಮಗೆ ಕೊಟ್ಟ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವರು ಜನ್ಮಜಾತ ಲಕ್ಷಣಗಳೇ ಅವರನ್ನು ಅತ್ಯುತ್ತಮ ನಾಯಕರನ್ನಾಗಿ ಮಾಡುತ್ತದೆ. ಪರಿಸ್ಥಿತಿ ಹೇಗೆಯೇ ಇರಲಿ ಅಕ್ರಮಕಾರಿಯಾಗಿ ನಿಭಾಯಿಸಿ, ಸಂದರ್ಭಕ್ಕೆ ತಕ್ಕಂತೆ ತಂತ್ರ ರೂಪಿಸಿ ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಕೆಲವು ಗ್ರಹಗತಿಗಳ ಪ್ರಭಾವದಿಂದೆ ನಾಲ್ಕು ರಾಶಿಯವರು ಹುಟ್ಟಿನಿಂದಲೇ ಸಿಕ್ಕಾಪಟ್ಟೆ ಬೋಲ್ಡ್ ಆಗಿರುತ್ತಾರೆ. ಸೂರ್ಯನ ಕಾಂತಿ ಹಾಗೂ ಶನಿಯ ಶಿಸ್ತಿನಿಂದ ಅವರಿಗೆ ತಮ್ಮ ಟೀಂ ಅನ್ನು ನಿಭಾಯಿಸಿ, ಹೊಸತನದೊಂದಿಗೆಸ ಪ್ಲ್ಯಾನ್ ಮಾಡಿ ಯಶಸ್ಸು ಸಾಧಿಸುವಂತೆ ಸಹಕರಿಸುತ್ತದೆ. ಯಾವ ರಾಶಿಗಳು ಅವು?
36
ಮೇಷ (Aries)
ಮಂಗಳ ಗ್ರಹದಿಂದ ಮೇಷಕ್ಕೆ ಶಕ್ತಿ ಹೆಚ್ಚುತ್ತದೆ. ಧೈರ್ಯವಾಗಿ ಹೊಸ ಹೊಸ ಕಾರ್ಯಗಳಿಗೆ ನಾಂದಿ ಹಾಡುವುದಲ್ಲದೇ, ಬೋಲ್ಡ್ ಡಿಸಿಷನ್ಸ್ ಮೂಲಕ ಕೊಟ್ಟ ಗುರಿ ಸಾಧಿಸಲು ಈ ರಾಶಿಯವರು ಶ್ರಮಿಸುತ್ತಾರೆ. ಅವರ ಸ್ಪರ್ಧಾತ್ಮಕ ಮನೋಭಾವವೇ ತ್ವರಿತವಾಗಿ ಕಾರ್ಯಗತವಾಗುವಂತೆ ಮಾಡುತ್ತದೆ. ಇದರಿಂದ ಈ ರಾಶಿಯಲ್ಲಿ ಜನಿಸಿದವರು ತಮ್ಮ ತಂಡದ ಪ್ರತಿ ಸದಸ್ಯರನ್ನೂ ಮೋಟಿವೇಟ್ ಮಾಡುತ್ತಲೇ ಇರುತ್ತಾರೆ. ಮೇಷ ರಾಶಿಯವರನ್ನು ಸಹಜ ಕಮಾಂಡರ್ ಎನ್ನಬಹುದು.
ಹೆಸರೇ ಸೂಚಿಸುವಂತೆ ಈ ರಾಶಿಯವರು ಸಿಂಹದಂತೆಯೇ ಇರೋರು. ಸಹಜವಾಗಿಯೇ ಇವರಿಗೆ ನಾಯಕತ್ವ ಗುಣ ರಕ್ತದಲ್ಲಿಯೇ ಇರುತ್ತದೆ. ಸೂರ್ಯನ ಪ್ರಭಾವ ಹೆಚ್ಚಿರುವ ಈ ರಾಶಿಯವರು ತಮ್ಮ ಛರಿಶ್ಮಾ ಹಾಗೂ ಆಯಸ್ಕಾಂತದಂತೆ ಸೆಳೆಯುವ ವಿಶ್ವಾಸದಿಂದಲೇ ತಂಡವನ್ನು ಮುನ್ನಡೆಸುತ್ತಾರೆ. ತಮ್ಮ ಉತ್ಸಾಹ, ಉದಾರತೆಯಿಂದಲೇ ತಂಡವನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುವ ಶಕ್ತಿ ಸಿಂಹ ರಾಶಿಯವರಿಗೆ ಜನ್ಮದತ್ತವಾಗಿ ಬಂದಿರುತ್ತದೆ. ಅತ್ಯುತ್ತಮ ಕಾರ್ಯವೈಖರಿ ಇರೋ ಈ ರಾಶಿಯವರು ಸಿಇಒನಂಥ ದೊಡ್ಡ ಹುದ್ದೆಯನ್ನು ಅಲಂಕರಿಸಲು ಹೇಳಿ ಮಾಡಿಸಿದಂತಿರುತ್ತಾರೆ. ಟೀಂ ಶಕ್ತಿ ಏನೆಂದು ಕಂಡು ಹಿಡಿದು, ಪ್ರಾಮಾಣಿಕವಾಗಿ ತಂಡದ ಸದಸ್ಯರ ಸ್ಟ್ರೆಂಥ್ ಬಳಸಿಕೊಂಡು, ಕಂಪನಿಯನ್ನು ಮೇಲೆತ್ತುವಲ್ಲಿ ಸಿಂಹ ರಾಶಿಯವರು ಯಶಸ್ವಿಯಾಗುತ್ತಾರೆ.
56
ಮಕರ (Capricorn)
ಶನಿಯ ಪ್ರಭಾವ ಹೆಚ್ಚಿರುವ ಕುಂಭ ರಾಶಿಯವರು ಶಿಸ್ತಿನ ಸಿಪಾಯಿಗಳು. ಎಲ್ಲವನ್ನೂ ಮುಂಚಿತವಾಗಿಯೇ ಪ್ಲ್ಯಾನ್ ಮಾಡಿ, ಕಾರ್ಯಗತಗೊಳಿಸುವಲ್ಲಿ ನಿಸ್ಸೀಮರು. ಸರ್ಕಾರ ಅಧಿಕಾರಿಗಳಾಗಲಿ ಅಥವಾ ಕಾರ್ಪೋರೇಟ್ ಜಗತ್ತಿನಲ್ಲಿ ಇರುವ ದೊಡ್ಡ ಹುದ್ದೆಯನ್ನಾಗಲಿ ಇವರು ಸಮರ್ಥವಾಗಿ ನಿಭಾಯಿಸಿ ಯಶಸ್ಸು ಕಾಣುತ್ತಾರೆ.
66
ವೃಶ್ಚಿಕ (Scorpio)
ಮಂಗಳ ಹಾಗೂ ಕೇತುವಿನಿಂದ ಆಳುವ ವೃಶ್ಚಿಕ ರಾಶಿಯವರು ಅತೀವ ಏಕಾಗ್ರತೆ ಹಾಗೂ ಮಾನಸಿಕ ಒಳನೋಟದಿಂದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು. ಎದುರಿಸಿದ ಸವಾಲನ್ನೇ ಪ್ರಗತಿಯ ಮೆಟ್ಟಿಲುಗಳನ್ನಾಗಿಸುವಲ್ಲಿ ವೃಶ್ಚಿಕ ರಾಶಿಯವರು ನಿಸ್ಸೀಮರು. ಯಾರಿಗೂ ಗೊತ್ತಾಗದಂತೆ ಬುದ್ಧಿವಂತಿಕೆ ಇರೋ ಈ ಮಂದಿ ಪ್ರತಿಯೊಂದೂ ಕೆಲಸವನ್ನು ಸಮರ್ಪಕವಾಗಿ ನೆರವೇರುವಂತೆ ನೋಡಿಕೊಂಡು, ನೀಡಿದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ.