ಒಂದೊಂದು ಸಂಸ್ಕೃತಿಯಲ್ಲಿ ಹಾವಿನ ಬಗ್ಗೆ ಒಂದೊಂದು ನಂಬಿಕೆ ಇದೆ. ಕೆಲವು ಭವಿಷ್ಯದ ಸೂಚಕವೆಂದು ಭಾವಿಸಿದರೆ, ಮತ್ತೆ ಕೆಲವರು ಜಗತ್ತಿನ ಏಳ್ಗೆಯ ಚಿಹ್ನೆ ಎನ್ನುತ್ತಾರೆ. ಪದೆ ಪದೇ ಹಾವಿನ ಕನಸು ಬಿದ್ದರೆ ಏನರ್ಥ?
ಹಾವು ಸಮೃದ್ಧತೆ, ಫಲವತ್ತತೆಯ ಸಂಕೇತ. ಇಂಥ ಸರಿಸೃಪವನ್ನು ಕೊಂದ ಹಾಗೆ, ಇಲ್ಲವೇ ಕಚ್ಚಿದ ಹಾಗೆ, ಇಲ್ಲವೇ ಬೇರೆ ಬೇರೆ ಬಣ್ಣದ ಸರ್ಪಗಳು ಕನಸಲ್ಲಿ ಕಾಣೋದು ಸಹಜ. ಅಷ್ಟಕ್ಕೂ ಇಂಥ ಕನಸು ಬಿದ್ದರೆ ವ್ಯಾಖ್ಯಾನಿಸುವುದು ಹೇಗೆ? ಯಾವ ರೀತಿಯ ಹಾವಿನ ಕನಸು ಬಿದ್ದರೆ ಶುಭ, ಮತ್ತು ಯಾವ ರೀತಿಯ ಕನಸು ನಿಮಗೆ ಶುಭವನ್ನುಂಟು ಮಾಡುತ್ತದೆ?
26
ಶತ್ರುವಿನ ಸಂಕೇತವೂ ಹೌದು!
ಬಹುತೇಕ ಸಂಸ್ಕೃತಿಯ ಪ್ರಕಾರ ಸ್ವಪ್ನದಲ್ಲಿ ಸರ್ಪ ಕಂಡರೆ ವಿಶ್ವದ ಬದಲಾವಣೆಯ ಸಂಕೇತ. ಒಳಗಿರುವ ಭಯದ ಸೂಚನೆ. ಅಲ್ಲದೇ ಆಂತರ್ಯದಲ್ಲಿರುವ ಅರಿವನ್ನು ಎಬ್ಬಿಸುವ ಸಂಕೇತ. ಈ ಕನಸುಗಳು ಬಗೆಹರಿಯದ ಭಾವನೆಗಳ ದ್ವಂದ್ವ, ಕರ್ಮಗಳ ಫಲ ಹಾಗೂ ನಿದ್ರಾ ಸ್ಥಿತಿಯನ್ನು ಸೂಚಿಸುತ್ತದೆ.
ಶತ್ರುವಿನ ಸಂಕೇತವೂ ಆಗಿರುವ ಹಾವಿನ ಪೊರೆ ಕಳಚೋದು ಕನಸಲ್ಲಿ ಕಂಡರೆ ಪಾಶ್ಚಾತ್ಯರ ಪ್ರಕಾರ ಮರು ಹುಟ್ಟುವಿನ ಸಂಕೇತ. ಅಂದ್ರೆ ಜೀವನದಲ್ಲಿ ಬದಲಾವಣೆಯ ಸೂಚಕ, ಉದ್ಯೋಗದಲ್ಲಿ ಪ್ರಗತಿ ಹಾಗೂ ಮನಸ್ಸಿನ ನೋವಿಗೆ ಮದ್ದು ಸಿಗುವ ಸೂಚನೆಯೂ ಹೌದು.
ಹಳೇ ಅಭ್ಯಾಸವನ್ನು ತೊರೆದು, ಹೊಸತನಕ್ಕೆ ಮುಖ ಮಾಡುವ, ಹೊಸ ಜೀವನ ಆರಂಭಿಸುವ ಪ್ರತೀಕವಾಗಿ ಸಪ್ನದಲ್ಲಿ ಹಾವು ತನ್ನ ಪೊರೆಯನ್ನು ಕಳಚಿಕೊಳ್ಳುವುದು ಕಾಣುತ್ತದೆ ಎಂಬುವದು ಮತ್ತೊಂದು ನಂಬಿಕೆ.
36
ಕುಂಡಲಿನಿಯ ಜಾಗೃತಿಗೊಳಿಸುವಿಕೆ
ಹಿಂದೂ ಧರ್ಮದ ಪ್ರಕಾರ ಹಾವು ಕುಂಡಲಿನಿ ಶಕ್ತಿಯ ಪ್ರತೀಕ. ಬೆನ್ನು ಹುರಿಯ ಬುಡದಿಂದ ಮೇಲೆ ಹೋಗುತ್ತಾ ಸಹಸ್ರಾರು ಚಕ್ರ (Crown Chakra)ದ ತನಕ ಕುಂಡಲಿಯನ್ನು ಜಾಗೃತಗೊಳಿಸುವ ಪ್ರತೀಕವೇ ಹಾವು. ಇದು ಜ್ಞಾನೋದಯ ಪಡೆಯಲು ನೆರವಾಗುತ್ತೆ ಎಂಬುವುದು ಭಾರತೀಯರ ನಂಬಿಕೆ. ಈ ಅರಿವು ಸುಪ್ತ ಮನಸ್ಸಿನಲ್ಲಿಯೇ ಜಾಗೃತಗೊಂಡು, ಉನ್ನತ ಮಟ್ಟದ ಅರಿವು ಪಡೆದುಕೊಳ್ಳಲು ನೆರವಾಗುತ್ತದೆ. ಧ್ಯಾನದ ಮೂಲಕ ಹೆಚ್ಚಿದ ಒತ್ತಡದಿಂದ ಮುಕ್ತರಾಗಬಹುದು. ಇದೇ ಕನಸಲ್ಲಿ ಹಾವು ಕಂಡಾಗಲೂ ಅನ್ವಯವಾಗುತ್ತದೆ.
ಮತ್ತೊಂದು ನಂಬಿಕೆಯ ಪ್ರಕಾರ ಹಾವು ಭಯ ಹಾಗೂ ಆತಂಕದ ಪ್ರತೀಕ. ಕನಸಲ್ಲಿ ಹಾವು ಕಂಡ್ರೆ ಹುದುಗಿಸಿಟ್ಟುಕೊಂಡ ಆತಂಕ, ಅನುಭವಿಸಿದ ವಂಚನೆ ಹಾಗೂ ವಿಷಯುಕ್ತ ಹಾಗೂ ನಂಜಿನ ಪ್ರಭಾವ ಎಚ್ಚೆತ್ತುಕೊಳ್ಳುವ ಪ್ರತೀಕ. ಪ್ರತಿ ದಿನದ ಆತಂಕಗಳು, ಅಪಾಯಗಳು ಸಪ್ನದಲ್ಲಿ ಕಾಣುವ ಸರ್ಪಗಳು ಪ್ರತಿನಿಧಿಸುತ್ತದೆ. ಹಾವು ನಮ್ಮನ್ನು ಅಟ್ಯಾಕ್ ಮಾಡಲು ಕನಸು ಕಂಡರೆ ಅದು ಮನಸ್ಸಿನ ತುಮುಲವನ್ನೇ ತೋರಿಸುತ್ತದೆ.
56
ಹಾವು ಸಾವಿನ ಸಂಕೇತವಾಗಿ ಕನಸಲ್ಲಿ ಬರಬಹುದು!
ಹಾವುಗಳನ್ನು ಕಂಡರೆ ಹಲವರ ಬೆನ್ನು ಮೂಳೆಯಲ್ಲಿ ನಡುಕ ಹುಟ್ಟುತ್ತದೆ. ಶೀತ-ರಕ್ತದ ಸರೀಸೃಪವು ಸಾವಿನ ಸಂಕೇತವಾಗಿ ಕನಸಲ್ಲಿ ಬರಬಹುದು. ಏಕೆಂದರೆ ಒಬ್ಬ ವ್ಯಕ್ತಿಯು ಹಾವಿನ ಕಡಿತದಿಂದ ಸಾಯಬಹುದು. ಅಂತಹ ವಿಷದ ಶಕ್ತಿ ಮತ್ತು ಮಾರಕತೆ ಹಾವಿನದು. ಆದಾಗ್ಯೂ, ಕನಸಿನಲ್ಲಿ ಹಾವುಗಳು ಸಂಪೂರ್ಣವಾಗಿ ವಿಭಿನ್ನ ಅರ್ಥವನ್ನು ಹೊಂದರಬಹುದು.
66
ಹಾವಿನ ಬಗ್ಗೆ ಒಬ್ಬೊಬ್ಬರ ನಂಬಿಕೆ ಒಂದೊಂದು ರೀತಿ
ಒಟ್ಟಾರೆ ಕನಸಿನಲ್ಲಿ ಹಾವು ಕಾಣುವುದು ಸಾಮಾನ್ಯ. ಕೆಲವರಿಗಂತೂ ಇದು ಸದಾ ಕಾಣಿಸುತ್ತಿರುತ್ತದೆ. ಈ ಸರಿಸೃಪವೆಂದರೆ ಮೈಯ್ಯಲ್ಲಿ ಚಳಿ ಹುಟ್ಟಿಸುತ್ತವೆ. ಕನಸಲ್ಲಿ ಬಂದ್ರೆ ಬೆವರುವುದೇ ಹೆಚ್ಚು. ದೇವರೆಂದು ಪೂಜಿಸುವ ಕೆಲವರಿಗೆ ಶುಭ ಸೂಚಕ. ಸಾಕ್ಷಾತ್ ಪರಮಾತ್ಮನೇ ನೀಡುತ್ತಿರುವ ಸೂಚನೆ ಎಂದೇ ಭಾವಿಸುತ್ತಾರೆ. ಎಲ್ಲವು ಅವರವರ ನಂಬಿಕೆ, ಸಂಸ್ಕೃತಿಗೆ ಅನುಗುಣವಾಗಿ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.