ಚೀನಾ ಮೂಲದ ಶಿಯೋಮಿ ತನ್ನ ಎಂಐ ವಾಚ್ ಲೈಟ್ ಸ್ಮಾರ್ಟ್ ವೀಯರೇಬಲ್ ಸಾಧನದ ಜಾಗತಿಕ ಬಿಡುಗಡೆಯನ್ನು ಘೋಷಿಸಿದೆ. ಈ ಸ್ಮಾರ್ಟ್ ವಾಚ್‌ನ ಬೆಲೆ ಎಷ್ಟಿದೆ ಎಂಬುದು ನಿಖವಾಗಿ ಗೊತ್ತಿಲ್ಲವಾದರೂ, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯುತ್ತಿರುವ ಚೀನಾ ಮೂಲದ ಶಿಯೋಮಿ ಇದೀಗ, ಜಾಗತಿಕವಾಗಿ ಎಂಐ ವಾಚ್ ಲೈಟ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಆದರೆ, ಯಾವಾಗ ಮಾರುಕಟ್ಟೆಗೆ ಬರಲಿದ ಮತ್ತು ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಈ ಸ್ಮಾರ್ಟ್ ವೀಯರೇಬಲ್ ಸಾಧನದ ಬಗ್ಗೆ ಕಂಪನಿ ಈಗಾಗಲೇ ತನ್ನ ಎಂಐ.ಕಾಮ್‌ನಲ್ಲಿ ಬರೆದುಕೊಂಡಿದೆ. ಜೊತೆಗೆ, ಎಂಐ ಲೈಟ್ ಸ್ಮಾರ್ಟ್‌ವಾಚ್ ಬೆಲೆ ಎಷ್ಟು ಎಂದು ನಿಖರವಾಗಿ ಗೊತ್ತಿಲ್ಲದಿದ್ದರೂ ಅಂದಾಜು 46 ಡಾಲರ್ ಎಂದು ಹೇಳಲಾಗುತ್ತಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಈ ಸ್ಮಾರ್ಟ್ ವಾಚ್ ಬೆಲೆ ಅಂದಾಜು 3,300 ರೂಪಾಯಿ ಆಗಬಹುದು.
undefined
ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಗೊತ್ತು, ರೋಲೆಬಲ್ ಫೋನ್?
ಮತ್ತೊಂದು ಗಮನಿಸಬೇಕಾಗಿರುವ ಸಂಗತಿ ಎಂದರೆ, ಜಾಗತಿಕವಾಗಿ ಬಿಡುಗಡೆ ಮಾಡಲು ಹೊರಟಿರುವ ಈ ಎಂಐ ವಾಚ್ ಲೈಟ್, ಈಗಾಗಲೇ ಕಂಪನಿ ಚೀನಾದಲ್ಲಿ ಬಿಡುಗಡೆ ಮಾಡಿರುವ ವಾಚ್‌ನ ರಿಬ್ರ್ಯಾಂಡ್ ಆಗಿರಬಹುದು ಎನ್ನಲಾಗುತ್ತಿದೆ. ಕಳೆದ ತಿಂಗಳು ಚೀನಾದಲ್ಲಿ ಈ ವಾಚ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಈ ವಾಚ್ 1.4 ಇಂಚ್ ಸ್ಕ್ವೇರ್ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ 232 ಪಿಪಿಐ ಪಿಕ್ಸೆಲ್ ಸಾಂದ್ರತೆ ಇದೆ. ಮತ್ತು 320x320 ರೆಸಲೂಷನ್ ಇದೆ. 11 ಸ್ಪೋರ್ಟ್ಸ್ ಮೋಡ್ ಇದರಲ್ಲಿವೆ. ವಾಟರ್ ಸ್ವಿಮ್ಮಿಂಗ್, ಪೂಲ್ ಸ್ಮಿಮ್ಮಿಂಗ್, ಹೊರಾಂಗಣ ಸೈಕ್ಲಿಂಗ್, ಒಳಾಂಗಣ ಸೈಕ್ಲಿಂಗ್, ಔಟ್‌ಡೋರ್ ರನ್ನಿಂಗ್, ಟ್ರೆಡ್‌ಮಿಲ್, ವಾಕಿಂಗ್ ಕ್ರಿಕೆಟ್, ಟ್ರೆಕ್ಕಿಂಗ್, ಟ್ರಯಲ್ ರನ್, ವಾಕಿಂಗ್, ಇಂಡೋರ್ ರನ್ನಿಂಗ್ ಈ ಪೈಕಿ ಪ್ರಮುಖವಾದ 11 ಸ್ಪೋರ್ಟ್ಸ್ ಮೋಡ್‌ಗಳು. ಇದಲ್ಲದೇ ಫ್ರೀ ಆಕ್ಟಿವಿಟಿಸ್ ಇದರಲ್ಲಿ ಸೇರಿಸಲಾಗಿದೆ.
ನೀವೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ‘ವಾಚ್ ಪಾರ್ಟಿ’ ಮಾಡಬಹುದು!
320 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದ್ದು, 2 ಗಂಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗುತ್ತದೆ ಮತ್ತು ಸತತ 10 ತಾಸು ಜಿಪಿಎಸ್ ಸ್ಪೋರ್ಟ್ಸ್ ಮೋಡ್ ಬಳಕೆಯೊಂದಿಗೆ 9 ಗಂಟೆಗಳವರೆಗೂ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜೊತೆಗೆ, ನೀವು ಕರಗಿಸಿದ ಕ್ಯಾಲೋರಿ, ಹೆಜ್ಜೆ ಲೆಕ್ಕಗಳನ್ನು ನಿತ್ಯ ಪಡೆದುಕೊಳ್ಳಬಹುದು. ಆ ಸೌಲಭ್ಯವನ್ನು ಇದು ಹೊಂದಿದೆ. ಸ್ಮಾರ್ಟ್ ವಾಚ್ ಡಿಸ್‌ಪ್ಲೇ ಮೂಲಕವೇ ಕರೆಗಳನ್ನು ತುಂಬ ಸುಲಭವಾಗ ನಿರ್ವಹಣೆ ಮಾಡಬಹುದು, ಮೆಸೆಜ್ ಮಾಡಬಹುದು, ಆಪ್ ನೋಟಿಫಿಕೇಷನ್ ನಿರ್ವಹಣೆ ಮಾಡಬಹುದು ಎನ್ನತ್ತದೆ ಕಂಪನಿ.
ಸೈಡ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್, ಇನ್ನಷ್ಟು ಹೊಸ ಫೀಚರ್‌ನೊಂದಿಗೆ ವಿವೋ ವೈ51 ಫೋನ್
ಈ ಎಂಐ ಲೈಟ್ ಸ್ಮಾರ್ಟ್ ವಾಚ್‌ನ ಮತ್ತೊಂದ ವಿಶೇಷ ಎಂದರೆ, ಡಿಫಾಲ್ಟ್ ಆಗಿಯೇ ವೈಫೈ ಸೌಲಭ್ಯವೂ ಇದೆ. ಜೊತೆಗೆ 120ಕ್ಕೂ ಹೆಚ್ಚು ವಾಚ್ ಫೇಸಸ್, 5ಎಟಿಎಂ ನೀರುನಿರೋಧಕ ಬಾಡಿ, ಫೈಂಡ್ ಫೋನ್ ಫೀಚರ್, ವೇದರ್ ರಿಪೋರ್ಟ್, ಅಲಾರಂ, ಫ್ಲ್ಯಾಶ್ ಲೈಟ್, ಸ್ಟಾಪ್ ವಾಚ್ ಮತ್ ಟೈಮರ್‌ನಂಥ ಅನೇಕ ಸೌಲಭ್ಯಗಳೂ ಈ ವಾಚ್‌ನಲ್ಲಿವೆ. ಐವೋರಿ, ಆಲೈವ್, ಪಿಂಕ್, ನ್ಯಾವಿ ಬ್ಲೂ, ಕಪ್ಪ ಬಣ್ಣದ ಸ್ಟ್ಯಾಪ್‌ಗಳಲ್ಲಿ ಈ ವಾಚ್ ಮಾರಾಟಕ್ಕೆ ಲಭ್ಯವಿದೆ.