ವಿವೋದಿಂದ ಬರ್ತಿದೆ ಮಿನಿ 5G ಸ್ಮಾರ್ಟ್‌ಫೋನ್; 250MP ಕ್ಯಾಮೆರಾ, 6000mAh ಬ್ಯಾಟರಿ

By Mahmad Rafik  |  First Published Nov 17, 2024, 4:40 PM IST

ವಿವೋ ಹೊಸ ವಿನ್ಯಾಸದ 5G ಸ್ಮಾರ್ಟ್‌ಫೋನ್, X200 Pro Miniಯನ್ನು ಬಿಡುಗಡೆ ಮಾಡಲಿದೆ. 250MP ಕ್ಯಾಮೆರಾ, 6000mAh ಬ್ಯಾಟರಿ, ಮತ್ತು ಸೂಪರ್ AMOLED ಡಿಸ್‌ಪ್ಲೇಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


ವಿವೋ ಹೊಸ ವಿನ್ಯಾಸವುಳ್ಳ 5G ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ  ಸೃಷ್ಟಿಸಲು ಮುಂದಾಗಿದೆ. ವಿವೋ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್ ಎಲ್ಲಾ ವರ್ಗದವರಿಗೆ ಇಷ್ಟವಾಗಲಿದೆ ಎಂದು ಹೇಳಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬೇಡಿಕೆಗೆ ಕಾರಣವಾಗಬಹುದು ಎಂದು ಊಹಿಸಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ನೋಡುತ್ತಿದ್ದರೆ ವಿವೋದ ಹೊಸ ವಿನ್ಯಾಸವುಳ್ಳ ಈ ಸೆಟ್ ಬಗ್ಗೆ ತಿಳಿದುಕೊಳ್ಳಿ. 5G ಜೊತೆಯಲ್ಲಿ ಸೂಪರ್ AMOLED ಡಿಸ್‌ಪ್ಲೇ ಸ್ಕ್ರೀನ್ ಜೊತೆ ಹಲವು ವಿಶೇಷ ಫೀಚರ್‌ಗಳನ್ನು ಒಳಗೊಂಡಿದೆ. 

Vivo X200 Pro Mini ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು

Tap to resize

Latest Videos

undefined

Display
ವಿವೋ ಈ 5ಜಿ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯನ್ನು ಅತ್ಯಂತ ಶಕ್ತಿಯುತ ಮತ್ತು ಸ್ಟ್ರಾಂಗ್ ಆಗಿ ಮಾಡಲಾಗಿದೆ. 6.31 ಇಂಚಿನ ಡಿಸ್‌ಪ್ಲೇ ನೀಡಲಾಗಿದ್ದು, 1216*2640 ಪಿಕ್ಸೆಲ್ ಸ್ಕ್ರೀನ್ ನೀಡಲಾಗಿದೆ. ಸೂಪರ್ AMOLED (Active-Matrix Organic Light-Emitting Diode)ಡಿಸ್‌ಪ್ಲೇ ಸ್ಕ್ರೀನ್ ಜೊತೆ 144Hz ರಿಫ್ರೆಶ್ ರೇಟ್ ನೀಡಲಾಗಿದೆ. 

Camera
ವಿವೋ ಕ್ಯಾಮೆರಾದಲ್ಲಿ ಹಲವು ವೈಶಿಷ್ಟ್ಯ ಫೀಚರ್‌ಗಳನ್ನು ನೀಡಲಾಗಿದೆ.  ಹೊಸ 5ಜಿ ಸ್ಮಾರ್ಟ್‌ಫೋನ್‌ನ  250MP, 50MP ಮತ್ತ 14MP ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ ಮೂಲಕ ನೀವು HD ಕ್ವಾಲಿಟಿಯಲ್ಲಿ ಪೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ವಿವೋ ಸೆಲ್ಫಿ ಪ್ರಿಯರಿಗೂ ಯಾವುದೇ ನಿರಾಸೆಯನ್ನುಂಟು ಮಾಡಿಲ್ಲ. ಇದು 80MP ಫ್ರಂಟ್ ಕ್ಯಾಮೆರಾ ಹೊಂದಿದ್ದು, ಸೆಲ್ಫಿ ವಿಡಿಯೋ ಸಹ ಉತ್ತಮ ಗುಣಮಟ್ಟ ಹೊಂದಿರಲಿದೆ.

Battery
ಈ 5G ಸ್ಮಾರ್ಟ್‌ಫೋನ್ ಪವರ್‌ಫುಲ್ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಒಮ್ಮೆ   ಚಾರ್ಜ್ ಮಾಡಿದ್ರೆ ಹಲವು ಗಂಟೆಗಳವರೆಗೆ ಬಾಳಿಕೆ ಬರಲಿದೆ. ಸದ್ಯದ ವರದಿಗಳ ಪ್ರಕಾರ, ವಿವೋ ಕಂಪನಿಯ ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರಲಿದೆ. 

ಇದನ್ನೂ ಓದಿ: 50MP ಕ್ಯಾಮೆರಾ, 4700 mAh ಬ್ಯಾಟರಿಯುಳ್ಳ AI ವೈಶಿಷ್ಟ್ಯದ 5G ಸ್ಮಾರ್ಟ್‌ಫೋನ್ ಮೇಲೆ 17 ಸಾವಿರ ರೂಪಾಯಿ ಡಿಸ್ಕೌಂಟ್

Memory
ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್ 512GB ಸ್ಟೋರೇಜ್, 12GB ರ‍್ಯಾಮ್ ನೀಡಲಾಗಿದೆ. ಇಷ್ಟು ಮಾತ್ರವಲ್ಲದೇ ಬೇರೆ ಸ್ಟೋರೇಜ್ ಸಾಮರ್ಥ್ಯಗಳಲ್ಲಿ ಲಭ್ಯವಿರಲಿದೆ. ಇದರ ಜೊತೆಗೆ ವಿಭಿನ್ನ ಹೊಸ ವೈಶಿಷ್ಟ್ಯಗಳನ್ನು ಈ 5G ಸ್ಮಾರ್ಟ್‌ಫೋನ್‌ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.

ಈವರೆಗೆ ಮೊಬೈಲ್‌ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಮಾರ್ಚ್ 2025 ಅಥವಾ  ಏಪ್ರಿಲ್ 2025 ರ ಅಂತ್ಯದ ವೇಳೆಗೆ Vivo X200 Pro Mini ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ವಿವೋ ಬಿಡುಗಡೆ ದಿನಾಂಕವನ್ನು ಸಹ ತಿಳಿಸಿಲ್ಲ. 

ಹಕ್ಕು ನಿರಾಕರಣೆ: ಈ ಪುಟದಲ್ಲಿ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ಸುದ್ದಿಯನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ದೃಢೀಕರಿಸುವದಿಲ್ಲ. 

ಇದನ್ನೂ  ಓದಿ: ನೋಕಿಯಾದಿಂದ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ 5G ಸ್ಮಾರ್ಟ್‌ಫೋನ್; 108MP ಕ್ಯಾಮೆರಾ, 6000mAh ಬ್ಯಾಟರಿ

click me!