ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಆಮದು ನಿಷೇಧ ಇಲ್ಲ; ಐಟಿ ಸಚಿವಾಲಯ ಸ್ಪಷ್ಟನೆ: ಪರವಾನಗಿ ನಿರ್ಬಂಧ ಆದೇಶ ಮುಂದೂಡಿಕೆ

By BK Ashwin  |  First Published Aug 5, 2023, 11:45 AM IST

ಕಂಪನಿಗಳು ಅಥವಾ ವ್ಯಾಪಾರಿಗಳು ಪರವಾನಗಿ ಪಡೆದ ನಂತರ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ (ಐಟಿ ಸಾಧನಗಳು) ಐಟಿ ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಆಗಸ್ಟ್ 3 ರಂದು ಅಧಿಸೂಚನೆ ಹೊರಡಿಸಿದೆ.

no ban on import of laptops tablets bringing in new licensing system it ministry officials ash

ನವದೆಹಲಿ (ಆಗಸ್ಟ್‌ 5, 2023): ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳ ಆಮದು ಮೇಲೆ ಯಾವುದೇ ನಿಷೇಧ ಅಥವಾ ನಿರ್ಬಂಧವಿಲ್ಲ, ಬದಲಿಗೆ ಪರವಾನಗಿ ಕಾರ್ಯವಿಧಾನವನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಕಂಪನಿಗಳು ಅಥವಾ ವ್ಯಾಪಾರಿಗಳು ಪರವಾನಗಿ ಪಡೆದ ನಂತರ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ (ಐಟಿ ಸಾಧನಗಳು) ಐಟಿ ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಆಗಸ್ಟ್ 3 ರಂದು ಅಧಿಸೂಚನೆ ಹೊರಡಿಸಿದೆ.

Tap to resize

Latest Videos

ಇದನ್ನು ಓದಿ: ಆ್ಯಪಲ್‌ ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ: iPhone 15 ರಿಲೀಸ್‌ ಡೇಟ್‌ ಬಹಿರಂಗ; ಹೊಸ ಫೋನ್‌ನಲ್ಲಿರಲಿದೆ ಈ ಫೀಚರ್ಸ್‌!

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಪೋರ್ಟಲ್ ಅನ್ನು ಸಿದ್ಧಪಡಿಸಿದೆ ಮತ್ತು ಕಂಪನಿಗಳು ಪರವಾನಗಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕಂಪನಿಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಒಂದು ತಿಂಗಳು ಸಮಯ ಇರುತ್ತದೆ. ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದರೆ 1 - 2 ದಿನಗಳಲ್ಲಿ ಅಥವಾ 5-10 ನಿಮಿಷಗಳ ಮೊದಲು ಪರವಾನಗಿ ನೀಡಲಾಗುವುದು ಎಂದು DGFT ಅಧಿಕಾರಿಗಳು ಹೇಳಿದ್ದಾರೆ. ಈಗಿನಂತೆ, ಪೂರ್ಣ-ವರ್ಷದ ಪರವಾನಗಿ ಕಾರ್ಯವಿಧಾನ ಜಾರಿಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಅಲ್ಲದೆ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದುಗಳಿಗೆ ಪರವಾನಗಿ ಅಗತ್ಯತೆಯ ಅನುಷ್ಠಾನವನ್ನು ಅಕ್ಟೋಬರ್ 31, 2023 ರವರೆಗೆ ವಿಳಂಬಗೊಳಿಸುವುದಾಗಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಶುಕ್ರವಾರ ಹೇಳಿದೆ. ಅದರೂ, ನಿರ್ಬಂಧಿತ ಆಮದುಗಳಿಗೆ ಮಾನ್ಯವಾದ ಪರವಾನಗಿಯು "ನವೆಂಬರ್ 1 ರಿಂದ ಜಾರಿಗೆ ಬರುವಂತೆ" ಅಗತ್ಯವಿದೆ ಎಂದೂ DGFT ಹೇಳಿದೆ.

ಇದನ್ನೂ ಓದಿ: 18ಕ್ಕಿಂತ ಕಡಿಮೆ ವಯಸ್ಕರಿಗೆ ಇನ್ಮುಂದೆ ದಿನಕ್ಕೆ 2 ಗಂಟೆ ಮಾತ್ರ ಸ್ಮಾರ್ಟ್‌ಫೋನ್‌ ಬಳಕೆಗೆ ಅವಕಾಶ!

ಭದ್ರತಾ ಕಾರಣಕ್ಕೆ ಲ್ಯಾಪ್‌ಟಾಪ್‌ ಆಮದು ಪರವಾನಗಿ ನಿರ್ಬಂಧ: ಐಟಿ ಸಚಿವಾಲಯ ಮೂಲಗಳ ಮಾಹಿತಿ

ವಿದೇಶಗಳಿಂದ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್‌ ವಸ್ತುಗಳ ಆಮದು ಮಾಡಿಕೊಳ್ಳಲು ಬೇಕಿರುವ ಪರವಾನಗಿಗೆ ನಿರ್ಬಂಧ ವಿಧಿಸಿರುವುದರಕ್ಕೆ ಭದ್ರತಾ ಸಮಸ್ಯೆಗಳು ಕಾರಣವಾಗಿವೆ ಎಂದು ಐಟಿ ಸಚಿವಾಲಯ ಹೇಳಿದೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌, ‘ವಿಶ್ವಾಸಾರ್ಹ ಹಾರ್ಡ್‌ವೇರ್‌ ಮತ್ತು ಸಿಸ್ಟಮ್‌ಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಇವುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

ಇನ್ನು ಸಚಿವಾಲಯದ ಮೂಲಗಳು ಹೇಳಿಕೆ ನೀಡಿ, ‘ದೇಶದಲ್ಲಿ ಎಲ್ಲಾ ಜನರಿಗೆ ಸುರಕ್ಷಿತ ಇಂಟರ್ನೆಟ್‌ ಒದಗಿಸಲು ಸರ್ಕಾರ ಬದ್ಧವಾಗಿದೆ. ಇಂಟರ್ನೆಟ್‌ ವಿಸ್ತರಣೆ ಹಾಗೂ ಹೆಚ್ಚು ಹೆಚ್ಚು ಭಾರತೀಯರು ಆನ್ಲೈನ್‌ಗೆ ಬರುತ್ತಿರುವುದರಿಂದ ಬಳಕೆದಾರರು ಹಾನಿ ಮತ್ತು ಅಪರಾಧಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಅಲ್ಲದೇ ಹಲವು ಸೈಬರ್‌ ಸುರಕ್ಷತೆಯ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಐಟಿ ಹಾರ್ಡ್‌ವೇರ್‌ನಲ್ಲಿ ಫರ್ಮ್‌ವೇರ್‌ ಮತ್ತು ಮಾಲ್ವೇರ್‌ಗಳು ಇರುವ ಸಾಧ್ಯತೆ ಇರುವುದರಿಂದ ಇವು ಅಪಾಯಕಾರಿಯಾಗಬಹುದು. ಸುರಕ್ಷಿತ ಹಾರ್ಡ್‌ವೇರ್‌ ಒದಗಿಸುವುದಕ್ಕಾಗಿ ನಿರ್ಬಂಧ ವಿಧಿಸಲಾಗಿದೆ’ ಎಂದಿವೆ.

ಸ್ಯಾಮ್ಸಂಗ್‌ನಿಂದ ಆಮದು ಸ್ಥಗಿತ:
ಈ ನಡುವೆ ಸ್ಯಾಮ್ಸಂಗ್‌ ಹಾಗೂ ಆ್ಯಪಲ್‌ ಕಂಪನಿಗಳು ವಿದೇಶದಿಂದ ಲ್ಯಾಪ್‌ಟಾಪ್‌ ಆಮದು ಸ್ಥಗಿತ ಮಾಡಿವೆ. ಇದರ ಬದಲು ಆಮದಿಗೆ ಹೇಗೆ ಬೇಗ ಲೈಸೆನ್ಸ್‌ ಪಡೆಯಬೇಕು ಎಂದು ಸರ್ಕಾರವನ್ನು ಸಂಪರ್ಕಿಸುತ್ತಿವೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಬಹಿರಂಗ: ಭಾರತಕ್ಕೂ ಇದಕ್ಕೂ ಸಂಬಂಧ!

vuukle one pixel image
click me!
vuukle one pixel image vuukle one pixel image