16 ಸಾವಿರ ರೂಗೆ ಜಿಯೋಬುಕ್ ಲ್ಯಾಪ್‌ಟಾಪ್, ಇದು ಕ್ರಾಂತಿಕಾರಕ ಡಿಜಿಟಲ್ ಬುಕ್!

By Suvarna News  |  First Published Aug 1, 2023, 4:18 PM IST

ಆನ್‌ಲೈನ್ ಕ್ಲಾಸ್, ಕೋಡ್ ಕಲಿಕೆ ಸೇರಿದಂತೆ ಮಲ್ಟಿ ಟಾಸ್ಕಿಂಗ್ ಜಿಯೋಬುಕ್ ಲ್ಯಾಪ್‌ಟಾಪ್ ಆಗಸ್ಟ್ 5ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೇವಲ 16,499 ರೂಪಾಯಿಗೆ ಈ ಜಿಯೋಬುಕ್ ಲಭ್ಯವಿದೆ. ಹಲವು ವಿಶೇಷತೆಹೊಂದಿರುವ ನೂತನ ಜಿಯೋಬುಕ್ ಹೆಚ್ಚಿನ ವಿವರ ಇಲ್ಲಿದೆ.


ಮುಂಬೈ(ಆ.01) ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ ಗ್ಯಾಜೆಟ್ ಅವಶ್ಯಕೆ ಹೆಚ್ಚಾಗಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳು ಅತ್ಯವಶ್ಯಕ. ವಿದ್ಯಾರ್ಥಿಗಳು, ಕಚೇರಿ ಕೆಲಸಕ್ಕೂ ಇದೀಗ ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್‌ಫೋನ್ ಅತ್ಯಂತ ಪ್ರಮುಖ ಗ್ಯಾಜೆಟ್ ಆಗಿದೆ. ಭಾರತದಲ್ಲಿನ ಅವಶ್ಯಕತೆ, ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿ ಜಿಯೋ ಇದೀಗ ಹೊಚ್ಚ ಹೊಸ ಜಿಯೋಬುಕ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.  ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ 'ಜಿಯೋಬುಕ್ ಇದಾಗಿದೆ.  ಜಿಯೋಒಎಸ್' ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ ಮತ್ತು ಕೆನೆಕ್ಟೆಟ್ ಫೀಚರ್ಸ್ ಇದರಲ್ಲಿದೆ.  ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು ಎಲ್ಲ ಸಾಧ್ಯತೆಗಳಿಗೂ ಜಿಯೋಬುಕ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.

ಜಿಯೋಬುಕ್ ಬೆಲೆ 16,499 ರೂಪಾಯಿ ಮಾತ್ರ. ಆಗಸ್ಟ್ 5 ರಿಂದ ಎಲ್ಲಾ ಜಿಯೋ ರಿಟೇಲ್, ರಿಲಯನ್ಸ್ ಡಿಜಿಟಲ್ ಹಾಗೂ ಇ ಕಾಮರ್ಸ್ ಶಾಪಿಂಗ್ ಮೂಲಕವೂ ಲಭ್ಯವಿದೆ. ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆ, Amazon.in ತಾಣದಿಂದ ಜಿಯೋಬುಕ್ ಖರೀದಿಸಬಹುದು. 

Tap to resize

Latest Videos

undefined

 

ಕೇವಲ 999ಕ್ಕೆ ಜಿಯೋ ಕಂಪನಿಯಿಂದ ಮೊಬೈಲ್‌: 400 ಮಂದಿಗೆ ಗಿಫ್ಟ್‌

ಕಲಿಕೆಯ ಹಾದಿಯಲ್ಲಿರುವ ಎಲ್ಲ ವಯೋಮಾನದವರಿಗೆ ಬಲ ನೀಡುವ ಬುಕ್ ಇದಾಗಿದೆ. ಜಿಯೋಬುಕ್ ನಮ್ಮ ಹೊಚ್ಚ ಹೊಸ ಉತ್ಪನ್ನವಾಗಿದ್ದು, ಅತ್ಯಾಧುನಿಕ ಗುಣವೈಶಿಷ್ಟ್ಯಗಳು ಹೊಂದಿದೆ. ಸಂಪರ್ಕ ಸಂವಹನದ ಆಯ್ಕೆಗಳೊಂದಿಗೆ ಎಲ್ಲ ವಯೋಮಾನದ ಬೇಡಿಕೆಗೆ ಇದು ಸ್ಪಂದಿಸುತ್ತದೆ. ಜನರು ಕಲಿಯುವ ವಿಧಾನವನ್ನೇ ಜಿಯೋಬುಕ್ ಬದಲಾಯಿಸುತ್ತದೆ.  ವೈಯಕ್ತಿಕ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನಮ್ಮದು ಎಂದು ರಿಲಯನ್ಸ್ ರೀಟೇಲ್ ವಕ್ತಾರರು ತಿಳಿಸಿದ್ದಾರೆ. ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ಜಿಯೋ ಒಎಸ್ (ಕಾರ್ಯಾಚರಣಾ ವ್ಯವಸ್ಥೆ)ಯ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

1.    4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ - ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಸಂಪರ್ಕಿತರಾಗಿರಲು ಅನುಕೂಲ.
2.    ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್
3.    75+ ಕೀಬೋರ್ಡ್ ಶಾರ್ಟ್‌ಕಟ್‌ಗಳು
4.    ಟ್ರ್ಯಾಕ್‌ಪ್ಯಾಡ್ ಸನ್ನೆಗಳು
5.    ಸ್ಕ್ರೀನ್ ವಿಸ್ತರಣೆ
6.    ವೈರ್‌ಲೆಸ್ ಪ್ರಿಂಟಿಂಗ್
7.    ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು
8.    ಏಕೀಕೃತ ಚಾಟ್‌ಬಾಟ್
9.    ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ
10.    ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳು
11.    JioBIAN ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದು.

 

ಈ ಸಲ ಐಪಿಎಲ್‌ನಲ್ಲಿ ಸ್ಟಾರ್‌ vs ಜಿಯೋ ಸಮರ..! ಟಿವಿ vs ಡಿಜಿಟಲ್‌: ಖರ್ಚೆಷ್ಟು?

ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ:
ಜಿಯೋ ಬುಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ  ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.). ಸ್ಲಿಮ್ ಆಗಿದ್ದರೂ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದು) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, ದೊಡ್ಡದಾದ, ಹಲವು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್-ನಿರ್ಮಿತ USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯನಿರ್ವಹಣೆಯನ್ನು ನೀಡುತ್ತದೆ. 

ಜಿಯೋಬುಕ್ ಹಾರ್ಡ್‌ವೇರ್ ವೈಶಿಷ್ಟ್ಯಗಳು:
1.    ನವೀನತಮ ಕಾರ್ಯಾಚರಣಾ ವ್ಯವಸ್ಥೆ - JioOS
2.    4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
3.    ಅಲ್ಟ್ರಾ ಸ್ಲಿಮ್, ಅತ್ಯಂತ ಹಗುರ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
4.    ಸುಲಲಿತ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್
5.    11.6” (29.46CM) ಆ್ಯಂಟಿ-ಗ್ಲೇರ್ HD ಡಿಸ್‌ಪ್ಲೇ
6.    ಇನ್ಫಿನಿಟಿ ಕೀಬೋರ್ಡ್ ಮತ್ತು ಅಗಲವಾದ, ಬಹು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್
7.    USB, HDMI ಮತ್ತು ಆಡಿಯೋ ಪೋರ್ಟ್‌ಗಳು

click me!