ಸಿಡಿಲು ಬಡಿದು ಕೋಚ್‌ ಸಾವು!

By Kannadaprabha News  |  First Published Oct 20, 2019, 1:20 PM IST

ಸಿಡಿಲು ಬಡಿತಕ್ಕೆ ಮಾಜಿ ಫುಟ್ಬಾಲ್ ಆಟಗಾರ, ಹಾಲಿ ಕೋಚ್ ಸ್ಥಳದಲ್ಲೇ ಅಸುನೀಗಿದ ಹೃದಯವಿದ್ರಾವಕ ಘಟನೆ ಜಾರ್ಖಂಡ್’ನಲ್ಲಿ ನಡೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಜಾರ್ಖಂಡ್‌(ಅ.20): ಅಭ್ಯಾ​ಸದ ವೇಳೆ ಸಿಡಿಲು ಬಡಿದು ಫುಟ್ಬಾಲ್‌ ಕೋಚ್‌ ಒಬ್ಬರು ಮೈದಾ​ನ​ದಲ್ಲೇ ಸಾವ​ನ್ನಪ್ಪಿದ ಘಟನೆ ಇಲ್ಲಿ ನಡೆ​ದಿದೆ. ಮಾಜಿ ಸಂತೋಷ್‌ ಟ್ರೋಫಿ ಫುಟ್ಬಾ​ಲಿಗ ಅಭಿ​ಜಿತ್‌ ಗಂಗೂಲಿ (53) ಮೃತ ದುರ್ದೈವಿ. ಈ ಘಟ​ನೆ ವೇಳೆ ಇಬ್ಬ​ರು ಆಟ​ಗಾ​ರರಿಗೂ ಗಾಯ​ವಾ​ಗಿದ್ದು, ಪ್ರಾಣಾ​ಪಾ​ಯ​ದಿಂದ ಪಾರಾ​ಗಿ​ದ್ದಾರೆ.

ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

Tap to resize

Latest Videos

undefined

ಶನಿ​ವಾರ ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ಬೆಳಗ್ಗೆ 7.30ರ ವೇಳೆಗೆ ಧನ್ಬಾದ್‌ ರೈಲ್ವೆ ಡಿವಿಷನ್‌ ಫುಟ್ಬಾಲ್‌ ತಂಡ ಅಭ್ಯಾಸ ನಡೆಸುತ್ತಿತ್ತು. ಕೋಚ್‌ ಅಭಿಜಿತ್‌ ಆಟ​ಗಾ​ರ​ರಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಮಳೆ ಆರ​ಂಭ​ವಾಗಿ ಸಿಡಿಲು ಬಡಿದ ಕಾರಣ, ಗಂಗೂಲಿ ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ಕೊರೆ​ದೊ​ಯ್ಯ​ಲಾ​ಯಿತು. ಆದರೆ ಅವರು ಮಾರ್ಗ ಮಧ್ಯಯೇ ಪ್ರಾಣಬಿಟ್ಟಿ​ದ್ದಾರೆ ಎಂದು ವೈದ್ಯರು ತಿಳಿ​ಸಿ​ದರು. 

ರಾಂಚಿ ಟೆಸ್ಟ್: ರೋಹಿತ್ ಶರ್ಮಾ ಭರ್ಜರಿ ಡಬಲ್ ಸೆಂಚುರಿ

1993ರ ಸಂತೋಷ್‌ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಪ್ರತಿ​ನಿ​ಧಿ​ಸಿದ್ದ ಅಭಿಜಿತ್‌, 90ರ ದಶಕದ ಶ್ರೇಷ್ಠ ಡಿಫೆಂಡರ್‌ಗಳಲ್ಲಿ ಒಬ್ಬರೆನಿ​ಸಿ​ದ್ದರು. ರಾಷ್ಟ್ರೀಯ ತಂಡದ ಆಟಗಾರ ರವಿ ಲಾಲ್‌ ಹೆಂಬ್ರಮ್‌ ಹಾಗೂ ಉದಯೋನ್ಮುಖ ಆಟಗಾರ ಚಂದನ್‌ ಟುಡು ಗಾಯ​ಗೊಂಡ ಆಟ​ಗಾ​ರರು.

 

click me!