
ಕೋಲ್ಕತಾ(ಅ.13): ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫಿಟ್ನೆಸ್ ಸುಧಾರಣೆಗಾಗಿ ವೀಗನ್ ಆಹಾರ ಪದ್ಧತಿ ಅಳವಡಿಸಿದ್ದಾರೆ. ಕಳೆದ ವರ್ಷ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ವೀಗನ್ ಆಗಿದ್ದು, ಈ ಸಾಲಿಗೆ ಚೆಟ್ರಿ ಸೇರಿದ್ದಾರೆ.
ಇದನ್ನೂ ಓದಿ: ಮೆಸ್ಸಿ ದಾಖಲೆ ಮುರಿದ ನಾಯಕ ಸುನಿಲ್ ಚೆಟ್ರಿ!
‘ನಾನು ವೀಗನ್ ಆಗಿದ್ದೇನೆ. ಮಾಂಸ, ಹಾಲಿನ ಉತ್ಪನ್ನಗಳನ್ನು ತಿನ್ನುವುದಿಲ್ಲ. ಇದು ಪಚನಕ್ರಿಯೆ ಹೆಚ್ಚಿಸಲು ನೆರವಾಗಿದೆ’ ಎಂದು ಚೆಟ್ರಿ ತಿಳಿಸಿದರು. ‘2010ರಲ್ಲಿ ಅಮೆರಿಕದ ಕಾನ್ಸಾಸ್ ಕ್ಲಬ್ನಲ್ಲಿ ವೀಗನ್ ಬಗ್ಗೆ ತಿಳಿಯಿತು. ಆದರೆ 2013ರಲ್ಲಿ ಸ್ಪೋರ್ಟಿಂಗ್ ಲಿಸ್ಬನ್ ಸೇರಿದ್ದಾಗ ಯುರೋಪ್ನಲ್ಲಿ ಒಂದೇ ಆಹಾರ ಪದ್ಧತಿ ಗಮನಿಸಿದೆ. ಆ ಬಳಿಕ ವೀಗನ್ ಗಂಭೀರವಾಗಿ ಪರಿಗಣಿಸಿದೆ’ ಎಂದರು.
ಇದನ್ನೂ ಓದಿ: ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮುಂದುವರಿಸಿದ ಸುನಿಲ್ ಚೆಟ್ರಿ
ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಮಟ್ಟ ಹೆಚ್ಚಿಸಿದ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲಲಿದೆ. ಇತರ ಕ್ರಿಕೆಟ್ ತಂಡಕ್ಕೆ ಹೋಲಿಸಿದರೆ ಭಾರತೀಯ ಕ್ರಿಕೆಟಿಗರ ಫಿಟ್ನೆಸ್ ಅತ್ಯುತ್ತಮವಾಗಿದೆ. ಯೋಯೋ ಟೆಸ್ಟ್ ಕಡ್ಡಾಯ ಸೇರಿದಂತೆ ಹಲವು ಸುಧಾರಣೆಗಳ ಜಾರಿಗೆ ಕೊಹ್ಲಿ ಕಾರಣರಾಗಿದ್ದಾರೆ. ಕೊಹ್ಲಿ ಫಿಟ್ನೆಸ್ ಕ್ರಾಂತಿಯನ್ನು ಇದೀಗ ಇತರ ಕ್ರೀಡಾಪಟುಗಳು ಅನುಸರಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.