ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ!

By Kannadaprabha News  |  First Published Nov 19, 2019, 11:12 AM IST

ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವ​ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿಂದು ಬಲಿಷ್ಠ ಓಮನ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಮಸ್ಕಟ್‌[ನ.19]: ನಾಲ್ಕು ಪಂದ್ಯ​ಗ​ಳಲ್ಲಿ ಗೆಲು​ವನ್ನೇ ಕಾಣದ ಭಾರತ ಫುಟ್ಬಾಲ್‌ ತಂಡದ ಮೇಲೆ ಒತ್ತಡ ಹೆಚ್ಚಾ​ಗಿದ್ದು, ಮಂಗ​ಳ​ವಾರ ಇಲ್ಲಿ ನಡೆ​ಯ​ಲಿ​ರುವ ಫಿಫಾ ವಿಶ್ವ​ಕಪ್‌ ಅರ್ಹತಾ ಸುತ್ತಿನ ‘ಇ’ ಗುಂಪಿನ ಪಂದ್ಯ​ದಲ್ಲಿ ಭಾರತ, ಬಲಿಷ್ಠ ಒಮಾನ್‌ ವಿರುದ್ಧ ಸೆಣ​ಸ​ಲಿ​ದ್ದು ತಂಡದ ಪಾಲಿ​ಗಿದು ಮಾಡು ಇಲ್ಲವೇ ಮಡಿ ಪಂದ್ಯ​ವೆ​ನಿ​ಸಿದೆ.

💥 Matchday 💥 🐯 will challenge 🤜🏻🤛🏻 Oman 🇴🇲 in the 2022 qualifier tonight.

⏳ 8⃣ : 3⃣0⃣ PM IST

🏟 Sultan Qaboos Sports Complex, Muscat

📺 , , 💙 ⚽ ⚔️ pic.twitter.com/xjUSSZwfYr

— Indian Football Team (@IndianFootball)

ಕೊರಿಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟ​ನ್‌: ಶ್ರೀಕಾಂತ್ ಮೇಲೆ ಎಲ್ಲರ ಚಿತ್ತ

Latest Videos

undefined

ಆಡಿ​ರುವ 4 ಪಂದ್ಯ​ಗ​ಳಲ್ಲಿ 1 ಸೋಲು, 3 ಡ್ರಾಗಳನ್ನು ಕಂಡಿ​ರುವ ಭಾರ​ತ ಈ ಪಂದ್ಯ​ವನ್ನು ಗೆಲ್ಲ​ಲೇ​ಬೇ​ಕಿದೆ. ಒಂದೊಮ್ಮೆ ತಂಡ ಸೋಲುಂಡರೆ 2022ರ ವಿಶ್ವ​ಕಪ್‌ಗೆ ಅರ್ಹತೆ ಪಡೆ​ಯುವ ಕನಸು ಭಗ್ನ​ಗೊಳ್ಳಲಿದೆ. ಸುನಿಲ್‌ ಚೆಟ್ರಿ ನೇತೃ​ತ್ವದ ಭಾರತ ತಂಡಕ್ಕೆ ಈ ಪಂದ್ಯದ ಬಳಿಕ ಇನ್ನು 3 ಪಂದ್ಯ ಮಾತ್ರ ಉಳಿ​ದಿರುತ್ತದೆ. ಮೂರೂ ಪಂದ್ಯ​ಗಳು 2020ರಲ್ಲಿ ನಡೆ​ಯ​ಲಿವೆ. ಒಮಾನ್‌ ವಿರುದ್ಧ ಕನಿಷ್ಠ ಡ್ರಾ ಸಾಧಿಸಿ ಅಂಕ ಗಳಿ​ಸಿ​ದರೆ, ಭಾರತ ತಂಡಕ್ಕೆ 2023ರ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ 3ನೇ ಹಂತಕ್ಕೆ ನೇರ ಪ್ರವೇಶ ಪಡೆ​ಯ​ಲು ನೆರ​ವಾ​ಗ​ಲಿದೆ.

Here's how Oman 🇴🇲 and India 🇮🇳 stack up ahead of tomorrow's clash! 🤜🤛 💙 🐯 ⚽️ pic.twitter.com/DGZ5Jc01Qo

— Indian Football Team (@IndianFootball)

ಭಾರತ-ಆಫ್ಘನ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಈ ಟೂರ್ನಿ ವಿಶ್ವ​ಕಪ್‌ ಹಾಗೂ ಏಷ್ಯನ್‌ ಕಪ್‌ ಎರಡೂ ಟೂರ್ನಿ​ಗ​ಳಿಗೆ ಅರ್ಹತಾ ಸುತ್ತು ಎನಿ​ಸಿ​ಕೊಂಡಿದೆ. ಗುಂಪಿ​ನಲ್ಲಿ 3ನೇ ಸ್ಥಾನ ಪಡೆ​ಯುವ ಹಾಗೂ 4ನೇ ಸ್ಥಾನ ಗಳಿ​ಸುವ ಉತ್ತಮ ತಂಗಳು ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ 3ನೇ ಹಂತ​ಕ್ಕೆ ಪ್ರವೇ​ಶಿ​ಸ​ಲಿವೆ.

ಒಮಾನ್‌ ವಿರುದ್ಧ ಭಾರತ ಕಳಪೆ ದಾಖಲೆ ಹೊಂದಿದೆ. ಆಡಿ​ರುವ 11 ಪಂದ್ಯ​ಗ​ಳಲ್ಲಿ ಒಮ್ಮೆಯೂ ಗೆಲುವು ಸಾಧಿ​ಸಿಲ್ಲ. ಈ ಟೂರ್ನಿಯ ಮೊದಲ ಪಂದ್ಯ​ದಲ್ಲಿ ಭಾರತ ಆರಂಭಿಕ ಮುನ್ನಡೆ ಪಡೆ​ದರೂ, ಕೊನೆ 10 ನಿಮಿಷಗಳಲ್ಲಿ 2 ಗೋಲು ಬಿಟ್ಟು​ಕೊಟ್ಟು ಸೋಲು ಅನು​ಭ​ವಿ​ಸಿ​ತ್ತು.

ಪಂದ್ಯ ಆರಂಭ: ರಾತ್ರಿ 8.30ಕ್ಕೆ

click me!