ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಆಫ್ಘಾನಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ತಜಿಕಿಸ್ತಾನ(ನ.15): ಆಫ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಸೋಲಿನ ದವಡೆಯಿಂದ ಪಾರಾಯಿತು. ಅರ್ಹತಾ ಸುತ್ತಿನ 2ನೇ ಹಂತದ ಪಂದ್ಯ 1-1 ಗೋಲುಗಳಲ್ಲಿ ಡ್ರಾಗೊಂಡಿತು.
90+3' GOOAAAL! climbs high and connects with 's corner, as the ball nestles into the net! 👊
🇦🇫 1-1 🇮🇳 ⚔ 💙 ⚽ 🐯 pic.twitter.com/Cz3AXGKL9d
ಫಿಫಾ ಫುಟ್ಬಾಲ್: ಭಾರತಕ್ಕಿಂದು ಆಫ್ಘನ್ ಚಾಲೆಂಜ್
undefined
ತನಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಆಫ್ಘಾನಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದು, ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿತು. ಭಾರತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು. ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಸೋತಿದ್ದು, ಇನ್ನುಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
84' crosses it in towards , who heads it over the bar.
🇦🇫 1-0 🇮🇳 ⚔ 💙 ⚽ 🐯 pic.twitter.com/ZJQGDg9UKX
ಸುನಿಲ್ ಚೆಟ್ರಿ ತಂಡ ಅರ್ಹತಾ ಸುತ್ತಿನ 3ನೇ ಹಂತಕ್ಕೇರುವುದು ಅನುಮಾನವೆನಿಸಿದೆ. ಭಾರತ ‘ಇ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದು, ಆಫ್ಘಾನಿಸ್ತಾನ 3ನೇ ಸ್ಥಾನ ಕಾಯ್ದುಕೊಂಡಿದೆ.
ಪಂದ್ಯದ ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿದ ಸೈಮಿನ್‌ಲೆನ್ ಡೌನ್ಜೆಲ್ (90+3ನೇ ನಿಮಿಷ) ಭಾರತದ ಮಾನ ಕಾಪಾಡಿದರು. ಜೆಲ್ಫಾಗರ್ ನಜಾರಿ 45+1ನೇ ನಿಮಿಷದಲ್ಲಿ ಗೋಲು ಬಾರಿಸಿ ಮೊದಲಾರ್ಧದ ಮುಕ್ತಾಯಕ್ಕೆ ಆಫ್ಘಾನಿಸ್ತಾನ 1-0 ಮುನ್ನಡೆ ಪಡೆಯಲು ನೆರವಾದರು.