ಫುಟ್ಬಾಲ್‌: ಆಶಾಲತಾ ವರ್ಷದ ಆಟಗಾರ್ತಿ?

By Web Desk  |  First Published Nov 16, 2019, 10:40 AM IST

ಭಾರತ ಮಹಿಳಾ ತಂಡದ ಆಟಗಾರ್ತಿ ಆಶಾಲತಾ ದೇವಿ, ವರ್ಷದ ಆಟಗಾರ್ತಿ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದೇ ರೇಸ್‌ನಲ್ಲಿ  ಚೀನಾದ ಲಿ ಯಿಂಗ್‌, ಜಪಾನ್‌ ನಾಯಕಿ ಸಾಕಿ ಕುಮಗೈ ರೇಸ್‌ನಲ್ಲಿದ್ದಾರೆ. 


ಕೌಲಾಲಂಪುರ್‌ (ಸಿಂಗಾಪುರ)ನ.16 : 2019ನೇ ಸಾಲಿನ ಏಷ್ಯನ್‌ ಫುಟ್ಬಾಲ್‌ ಕಾನ್ಫೆ​ಡ್ರೇ​ಷನ್‌ (ಎಎಫ್‌ಸಿ) ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಯಕಿ ಲೊಯ್ಟೊಂಗ್ಬಮ್‌ ಆಶಾಲತಾ ದೇವಿ ಅವರನ್ನು ಅಖಿಲ ಭಾರತ ಫುಟ್ಬಾಲ್‌ ಸಂಸ್ಥೆ (ಎಐಎಫ್‌ಎಫ್‌) ಶುಕ್ರವಾರ ಶಿಫಾರಸು ಮಾಡಿದೆ. ಚೀನಾದ ಲಿ ಯಿಂಗ್‌, ಜಪಾನ್‌ ನಾಯಕಿ ಸಾಕಿ ಕುಮಗೈ ರೇಸ್‌ನಲ್ಲಿದ್ದಾರೆ.

ಇದನ್ನೂ ಓದಿ: ಭಾರತ-ಆಫ್ಘನ್‌ ಪಂದ್ಯ ಡ್ರಾನಲ್ಲಿ ಅಂತ್ಯ

Latest Videos

undefined

ಡಿ.2ಕ್ಕೆ ಹಾಂಕಾಂಗ್‌ನಲ್ಲಿ ಏಷ್ಯನ್‌ ಫುಟ್ಬಾಲ್‌ ವಾರ್ಷಿಕ ಪ್ರಶಸ್ತಿ ಸಮಾರಂಭ ನಡೆಯಲಿದೆ. ಆಶಾಲತಾ ನೇತೃತ್ವದಲ್ಲಿ 2019ರ ಸ್ಯಾಫ್‌ ಪ್ರಶಸ್ತಿ ಗೆದ್ದಿದ್ದ ಭಾರತ, 2020ರ ಒಲಿಂಪಿಕ್ಸ್‌ ಕ್ವಾಲಿಫೈಯ​ರ್ಸ್ 2ನೇ ಸುತ್ತನ್ನು ಪ್ರವೇಶಿಸಿದೆ. 

ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC

26 ವರ್ಷದ ಇಂಪಾಲ್ ಮೂಲದ ಆಶಾಲತಾ ದೇವಿ, ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದ್ದರು. ಇಷ್ಟೇ ಅಲ್ಲ, ಭಾರತ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. 

click me!