ಫುಟ್ಬಾಲ್ ದಿಗ್ಗಜ ಲಿಯೋನೆಲ್‌ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ

By Suvarna News  |  First Published Jun 10, 2021, 9:14 AM IST

* ನನ್ನನ್ನು ಮೆಸ್ಸಿ ಜತೆ ಹೋಲಿಸಬೇಡಿ ಎಂದ ಸುನಿಲ್ ಚೆಟ್ರಿ

* ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ನಾಯಕ

* ಮೆಸ್ಸಿ ಹಿಂದಿಕ್ಕಿ ಗರಿಷ್ಠ ಗೋಲು ಬಾರಿಸಿದ ಸಾಧನೆ ಮಾಡಿರುವ ಚೆಟ್ರಿ


ದೋಹಾ(ಜೂ.10): ಅರ್ಜೆಂಟೀನಾದ ದಿಗ್ಗಜ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ಜೊತೆ ತಮ್ಮ ಹೋಲಿಕೆ ಸರಿಯಲ್ಲ ಎಂದು ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ. 

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ 2 ಗೋಲು ಬಾರಿಸಿ, ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಚೆಟ್ರಿ, ಮೆಸ್ಸಿಯನ್ನು ಹಿಂದಿಕ್ಕಿದ್ದರು. ಆ ಬಳಿಕ ಸಾಮಾಜಿಕ ತಾಣಗಳಲ್ಲಿ ಮೆಸ್ಸಿಗಿಂತಲೂ ಚೆಟ್ರಿಯೇ ಶ್ರೇಷ್ಠ ಆಟಗಾರರ ಎನ್ನುವ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಸುನಿಲ್ ಚೆಟ್ರಿ, ‘ಮೆಸ್ಸಿಯೊಂದಿಗೆ ನನ್ನ ಹೋಲಿಕೆ ಸರಿಯಲ್ಲ. ಜಗತ್ತಿನಲ್ಲಿ ನನಗಿಂತ ಸಾವಿರಾರು ಉತ್ತಮ ಆಟಗಾರರಿದ್ದಾರೆ. ಆ ಸಾವಿರಾರು ಆಟಗಾರರೂ ನನ್ನಂತೆಯೇ ಮೆಸ್ಸಿಯ ಅಭಿಮಾನಿಗಳು’ ಎಂದಿದ್ದಾರೆ.

Tap to resize

Latest Videos

undefined

ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!

ಸದ್ಯ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಸದ್ಯ 74 ಅಂತಾರಾಷ್ಟ್ರೀಯ ಗೋಲು ಬಾರಿಸುವ ಮೂಲಕ ಅತಿ ಹೆಚ್ಚು ಗೋಲು ಬಾರಿಸಿದ ಸಕ್ರಿಯ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರರಲ್ಲಿ ಮೆಸ್ಸಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಅರ್ಜಿಂಟೀನಾದ ಫುಟ್ಬಾಲ್‌ ದಂತಕಥೆ ಲಿಯೋನೆಲ್ ಮೆಸ್ಸಿ 72 ಗೋಲು ಬಾರಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಸಕ್ರಿಯ ಆಟಗಾರ ಎನ್ನುವ ಹಿರಿಮೆ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ ಹೆಸರಿನಲ್ಲಿದೆ. ರೊನಾಲ್ಡೋ ಇದುವರೆಗೂ 103 ಅಂತರಾಷ್ಟ್ರೀಯ ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.

click me!