
ದೋಹಾ(ಜೂ.08): ಭಾರತದ ಫುಟ್ಬಾಲ್ ಐಕಾನ್ ಸುನಿಲ್ ಚೆಟ್ರಿ ಬಾಂಗ್ಲಾದೇಶ ಎದುರು ಬಾರಿಸಿದ ಎರಡು ಅತ್ಯಾಕರ್ಷಕ ಗೋಲುಗಳ ನೆರವಿನಿಂದ ಫಿಫಾ ವಿಶ್ವಕಪ್ ಅರ್ಹಾತಾ ಸುತ್ತಿನಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ಮೊದಲ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ದ ಭಾರತ ಫುಟ್ಬಾಲ್ ತಂಡವು 2-0 ಅಂತರದಲ್ಲಿ ಗೆದ್ದು, ಅಂಕಗಳ ಖಾತೆ ತೆರೆದಿದೆ.
ಸುನಿಲ್ ಚೆಟ್ರಿ ಪಂದ್ಯದ 79ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಭಾರತ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇದರೊಂದಿಗೆ 2023ರ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಕನಸಿಗೆ ಬಲ ತುಂಬಿದರು. ಇನ್ನು ಪಂದ್ಯದ ಹೆಚ್ಚುವರಿ ಸಮಯದಲ್ಲಿ(90+2) ಸುನಿಲ್ ಚೆಟ್ರಿ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತ ಗೆಲುವಿನ ಹೊನಲಿನಲ್ಲಿ ತೇಲುವಂತೆ ಮಾಡಿದರು.
ಫುಟ್ಬಾಲ್: ಭಾರತಕ್ಕಿಂದು ಬಾಂಗ್ಲಾದೇಶ ಸವಾಲು
ಈ ಗೆಲುವು ಕಳೆದ ಕೆಲ ವರ್ಷಗಳಿಂದಲೂ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅನುಭವಿಸುತ್ತಿದ್ದ ನೀರಸ ಪ್ರದರ್ಶನಕ್ಕೆ ಬ್ರೇಕ್ ಬೀಳುವಂತೆ ಮಾಡಿದೆ. ಅಂದಹಾಗೆ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ತವರಿನಾಚೆ ಭಾರತ ದಾಖಲಿಸಿದ ಮೊದಲ ಗೆಲುವು ಎನಿಸಿದೆ.
ದೋಹಾದಲ್ಲೇ ನಡೆದ ಮೊದಲ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡವು ಬಲಿಷ್ಠ ಕತಾರ್ ವಿರುದ್ದ 1-0 ಗೋಲುಗಳಿದ ಸೋಲು ಅನುಭವಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.