
ಗುವಾಹಟಿ(ಅ.13): ಕರ್ನಾಟಕ ಮೂಲದ ಫುಟ್ಬಾಲ್ ಆಟಗಾರ ನಿಖಿಲ್ ಪೂಜಾರಿ, ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅ.15ರಂದು ಕೋಲ್ಕತಾದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕಾಗಿ 23 ಸದಸ್ಯರ ಭಾರತ ಫುಟ್ಬಾಲ್ ತಂಡವನ್ನು ಪ್ರಧಾನ ಕೋಚ್ ಇಗೊರ್ ಸ್ಟಿಮ್ಯಾಕ್ ಶನಿವಾರ ಘೋಷಿಸಿದರು.
ಇದನ್ನೂ ಓದಿ: ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್ ತರಬೇತಿ
ಕತಾರ್ ಆತಿಥ್ಯದಲ್ಲಿ ನಡೆಯಲಿರುವ 2022ರ ಫಿಫಾ ವಿಶ್ವಕಪ್ನ 2ನೇ ಸುತ್ತಿನ ಕ್ವಾಲಿಫೈಯರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ ತವರಿನಲ್ಲಿ ಎದುರಿಸಲಿದೆ.
ಇದನ್ನೂ ಓದಿ: ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್
ತಂಡ: ಗುರುಪ್ರೀತ್ ಸಿಂಗ್, ಅಮರೀಂದರ್, ಕಮಲ್‌ಜಿತ್, ಪ್ರೀತಮ್, ರಾಹುಲ್, ಆದಿಲ್, ನರೇಂದರ್, ಸಾರ್ಥಕ್, ಅನಾಸ್, ಮಂಧಾರ್, ಸುಭಾಶಿಶ್, ಉದಾಂತ, ನಿಖಿಲ್, ವಿನಿತ್, ಅನಿರುದ್‌್ಧ, ಅಬ್ದುಲ್, ರಯನೀರ್, ಬ್ರಂಡನ್, ಚಾಂಗ್ಟೆ, ಆಶಿಕ್, ಸುನಿಲ್ ಚೆಟ್ರಿ, ಬಲ್ವಂತ್, ಮಾನ್ವೀರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.