ವಿಶ್ವದ ಶ್ರೇಷ್ಠ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಯುರೋ ಕ್ವಾಲಿಫೈಯರ್ ಪಂದ್ಯದಲ್ಲಿ 2 ಗೋಲು ಸಿಡಿಸಿರುವ ರೋನಾಲ್ಡೋ ಶೀಘ್ರದಲ್ಲೇ 700 ಗೋಲು ಬಾರಿಸಿ ದಾಖಲೆ ನಿರ್ಮಿಸಲಿದ್ದಾರೆ.
ಲಿಸ್ಬನ್(ಪೋರ್ಚುಗಲ್)ಅ.13: ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಶೀಘ್ರವೇ ವೃತ್ತಿಜೀವನದ 700ನೇ ಗೋಲಿನ ಮೈಲಿಗಲ್ಲು ಬರೆಯಲಿದ್ದಾರೆ. ಶುಕ್ರವಾರ ಯೂರೋ 2020 ಕ್ವಾಲಿಫೈಯರ್ ಪಂದ್ಯದಲ್ಲಿ ಲುಕ್ಸೆಮ್ಬರ್ಗ್ ತಂಡದ ವಿರುದ್ಧ ರೊನಾಲ್ಡೋ 2 ಗೋಲು ಹೊಡೆದಿದ್ದರು. ಇದರಿಂದ ರೊನಾಲ್ಡೋ ಅಂತಾರಾಷ್ಟ್ರೀಯ ಹಾಗೂ ಒಟ್ಟಾರೆ ವೃತ್ತಿಜೀವನದ ಗೋಲುಗಳ ಸಂಖ್ಯೆ ಕ್ರಮವಾಗಿ 94 ಹಾಗೂ 699ಕ್ಕೇರಿವೆ.
ಇದನ್ನೂ ಓದಿ: ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!
undefined
ಸಾರ್ವಕಾಲಿಕ ಅತಿಹೆಚ್ಚು ಗೋಲು ಹೊಡೆದ ಆಟಗಾರರಲ್ಲಿ 34ರ ಹರೆಯದ ರೊನಾಲ್ಡೋ 6ನೇ ಸ್ಥಾನದಲ್ಲಿದ್ದಾರೆ. ಅತಿಹೆಚ್ಚು ಗೋಲು ಹೊಡೆದ ಸಕ್ರಿಯ ಆಟಗಾರರಲ್ಲಿ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಪ್ರತಿಸ್ಪರ್ಧಿ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಈವರೆಗೆ 672 ಗೋಲುಗಳನ್ನಷ್ಟೇ ಹೊಡೆದಿದ್ದಾರೆ.
ಇದನ್ನೂ ಓದಿ: ಮೈದಾನದಲ್ಲಿಯೇ ಕಣ್ಣೀರಿಟ್ಟ ಕ್ರಿಸ್ಟಿಯಾನೋ ರೊನಾಲ್ಡೋ
34ರ ಹರೆಯದ ರೋನಾಲ್ಡೋ ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ. ಯುವೆಂಟಸ್ ಲೀಗ್ ತಂಡದ ಕೀ ಪ್ಲೇಯರ್ ಆಗಿರುವ ರೋನಾಲ್ಡೋ, ವಿಶ್ವದ ಅತ್ಯುತ್ತಮ ಫುಟ್ಬಾಲ್ ಪಟು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಫೆಬ್ರವರಿ 5, 1985ರಲ್ಲಿ ಹುಟ್ಟಿದ ರೋನಾಲ್ಡೋ, 15ನೇ ವಯಸ್ಸಿನಲ್ಲಿ ರೇಸಿಂಗ್ ಹಾರ್ಟ್(ಹೃದಯ ಸಂಬಂಧಿ) ಕಾಯಿಲೆಯಿಂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಮ್ಯಾಂಚೆಸ್ಟರ್ ತಂಡದ ಪರ ಕಣಕ್ಕಿಳಿಯೋ ಮೂಲಕ ದಾಖಲೆ ಬರೆದಿದ್ದರು.