ಭಾರತ ಫುಟ್ಬಾಲ್ ಟೀಂಗೆ ಗುರ್‌ಪ್ರೀತ್ ಸಿಂಗ್ ಸಂಧು ನಾಯಕ

By Kannadaprabha News  |  First Published Jun 10, 2024, 4:55 PM IST

ಈ ಹಿಂದೆ ಚೆಟ್ರಿ ಅನುಪಸ್ಥಿತಿಯಲ್ಲಿ ಗುರ್ ಪ್ರೀತ್ ಕೆಲ ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು. ಅವರು, ಈ ವರೆಗೂ 71 ಪಂದ್ಯಗಳನ್ನು ಆಡಿದ್ದಾರೆ.


ದೋಹಾ: ಸುನಿಲ್ ಚೆಟ್ರಿ ನಿವೃತ್ತಿ ಬಳಿಕ ಭಾರತ ಫುಟ್ಬಾಲ್ ತಂಡದ ಹಂಗಾಮಿ ನಾಯಕರಾಗಿ ಗೋಲ್ ಕೀಪರ್ ಗುರ್‌ಪ್ರೀತ್‌ ಸಿಂಗ್ ಸಂಧು ನೇಮಕಗೊಂಡಿದ್ದಾರೆ. ಮಂಗಳವಾರ ಕತಾರ್ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಸಂಧು ತಂಡವನ್ನು ಮುನ್ನಡೆಸಲಿದ್ದಾರೆ. 

ಈ ಹಿಂದೆ ಚೆಟ್ರಿ ಅನುಪಸ್ಥಿತಿಯಲ್ಲಿ ಗುರ್ ಪ್ರೀತ್ ಕೆಲ ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು. ಅವರು, ಈ ವರೆಗೂ 71 ಪಂದ್ಯಗಳನ್ನು ಆಡಿದ್ದಾರೆ.

Latest Videos

undefined

ಜರ್ಮನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಟೆನಿಸಿಗ ನಗಾಲ್‌

ಹ್ರೀಲ್‌ಬ್ರಾನ್(ಜರ್ಮನಿ): ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಎಟಿಪಿ 100 ಹ್ರೀಲ್‌ಬ್ರಾನ್ ಚಾಲೆಂಜರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಗಾಲ್‌ ಫೈನಲ್‌ನಲ್ಲಿ ಸ್ವಿಜರ್‌ಲೆಂಡ್‌ನ ಅಲೆಕ್ಸಾಂಡರ್‌ ರಿಟ್ಸ್‌ಚರ್ಡ್‌ ವಿರುದ್ಧ 6-1, 6-7, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಸ್ಪಷ್ಟ ಬಹುಮತ ಬಾರದಿದ್ದರೂ ಮೋದಿಯದ್ದೇ ಸರ್ಕಾರ: ಕಡಿಮೆ ಸ್ಕೋರ್ ಇದ್ರೂ ಪಾಕ್ ಬಗ್ಗು ಬಡಿದ ಭಾರತ

ಇದು ಸುಮಿತ್‌ಗೆ ಈ ವರ್ಷದ 2ನೇ, ಒಟ್ಟಾರೆ ವೃತ್ತಿಬದುಕಿನ 6ನೇ ಎಟಿಪಿ ಚಾಲೆಂಜರ್ ಟ್ರೋಫಿ. ಫೆಬ್ರವರಿಯಲ್ಲಿ ಅವರು ಚೆನ್ನೈ ಓಪನ್‌ ಚಾಲೆಂಜರ್‌ ಟೂರ್ನಿಯಲ್ಲಿ ಗೆದ್ದಿದ್ದರು. ಭಾನುವಾರದ ಗೆಲುವಿನೊಂದಿಗೆ ನಗಾಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದ್ದು, ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 77ನೇ ಸ್ಥಾನಕ್ಕೇರಲಿದ್ದಾರೆ.

ಅಮೆರಿಕ ಅಥ್ಲೆಟಿಕ್ಸ್‌ ಕೂಟ: ಬಂಗಾರ ಗೆದ್ದ ಸಂಜೀವನಿ

ಪೋರ್ಟ್‌ಲೆಂಡ್: ಆಮೆರಿಕದ ಪೋರ್ಟ್‌ಂಡ್ ಅಥ್ಲೆಟಿಕ್ಸ್‌ ಕೂಟದಲ್ಲಿ ಭಾರತದ ಸಂಜೀವನಿ ಜಾಧವ್ ಮಹಿಳೆಯರ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್ ಕಂಚು ವಿಜೇತ 27 ವರ್ಷದ ಸಂಜೀವನಿ, ಭಾನುವಾರ ನಡೆದ ಸ್ಪರ್ಧೆಯಲ್ಲಿ 32 ನಿಮಿಷ 22.77 ಸೆಕೆಂಡ್ ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. 

"ಈತನಿಗೆ ಆಡೋಕ್ಕೆ ಬರಲ್ಲ, ಇಡೀ ತಂಡವನ್ನೇ ಕಿತ್ತೊಗೆಯಲು ಇದು ಸರಿಯಾದ ಸಮಯ": ಭಾರತ ಎದುರು ಸೋಲುಂಡ ಪಾಕ್ ಮೇಲೆ ಅಕ್ರಂ ಕಿಡಿ

ಭಾರತದ ಮತ್ತೋರ್ವ ಸ್ಪರ್ಧಿ ಸೀಮಾ(32 ನಿಮಿಷ 46.88 ಸೆಕೆಂಡ್) 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದೇ ವೇಳೆ ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಪದಕ ವಿಜೇತ ಅವಿ ನಾಶ್ ಸಾಬ್ಳೆ ಪುರುಷರ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ 8 ನಿಮಿಷ 21.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸಾನಿಯಾದರು. ಮಹಿಳೆಯರ ವಿಭಾಗದಲ್ಲಿ ಪಾರುಲ್ ಚೌಧರಿ(9 ನಿ. 31.38 ಸೆ.) 3ನೇ ಸ್ಥಾನ ಪಡೆದರು.

ಬೆಂಗೂರು ಕಾರ್ಟಿಂಗ್: 9ರ ಅತಿಕಾಗೆ 3ನೇ ಸ್ಥಾನ

ಬೆಂಗಳೂರು: ಭಾರತದ ಯುವ ಕಾರ್ಟಿಂಗ್ ತಾರೆ, ಕಾಶ್ಮೀರದ 9 ವರ್ಷದ ಅತಿಕಾ ಮೀ‌ ಭಾನುವಾರ ನಗರದಲ್ಲಿ ನಡೆದ ಮೀರೊ ಎಫ್‌ಎಂಎಸ್‌ಸಿಐ ರೋಟಾಕ್ ರಾಷ್ಟ್ರೀಯ ಕಾರ್ಟಿಂಗ್‌ಶಿಪ್‌ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

ಕಾರ್ಟೋಪಿಯಾ ಟ್ರ್ಯಾಕ್‌ನಲ್ಲಿ ನಡೆದ ರೇಸ್‌ನಲ್ಲಿ ಅತಿಕಾ, ಮೈಕ್ರೋ ಮ್ಯಾಕ್ಸ್ ವಿಭಾಗ(7ರಿಂದ 12 ವರ್ಷ)ದ ಅಂತಿಮ ರೇಸ್‌ನ ಮೊದಲ ಸುತ್ತಿನಲ್ಲಿ 12 ನಿಮಿಷ 21.39 ಸೆಕೆಂಡ್‌ಗಳಲ್ಲಿ ರೇಸ್ ಪೂರ್ತಿಗೊಳಿಸಿದರು. ಚೆನ್ನೈನ ರಿವಾನ್ ಪ್ರೀತಮ್ (12:16.790), ರೆಹಾನ್ ಖಾನ್ (12:19.920) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.

ಪ್ರೊ ಲೀಗ್: ಭಾರತ ತಂಡಗಳಿಗೆ ಸೋಲು

ಲಂಡನ್‌: ಭಾರತ ಪುರುಷ ಹಾಗೂ ಮಹಿಳಾ ತಂಡಗಳು 2023-24ರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿವೆ. ಎರಡು ತಂಡಕ್ಕೂ ಭಾನುವಾರ ಬ್ರಿಟನ್ ತಂಡಗಳ ವಿರುದ್ಧ ತಲಾ 2-3 ಗೋಲುಗಳ ಅಂತರದಲ್ಲಿ ಸೋಲು ಎದುರಾಯಿತು. ಇದರೊಂದಿಗೆ ಪುರುಷರ ತಂಡ 16 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 24 ಅಂಕ ಸಂಪಾದಿಸಿ ಪಟ್ಟಿಯಲ್ಲಿ4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯಲ್ಲಿ ಸತತ 8 ಸೋಲಿನ ಮುಖಭಂಗಕ್ಕೊಳಗಾದ ಮಹಿಳಾ ತಂಡ 16 ಪಂದ್ಯಗಳಲ್ಲಿ ಕೇವಲ 8 ಅಂಕದೊಂದಿಗೆ 8ನೇ ಸ್ಥಾನಿಯಾಯಿತು.

click me!