ಭಾರತ ಫುಟ್ಬಾಲ್ ದಿಗ್ಗಜ ಸುನಿಲ್ ಚೆಟ್ರಿಗಿಲ್ಲ ಜಯದ ವಿದಾಯ!

By Kannadaprabha News  |  First Published Jun 7, 2024, 8:29 AM IST

39 ವರ್ಷದ ಚೆಟ್ರಿ, ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಬದುಕನ್ನು ಗುರುವಾರ ಕೊನೆಗೊಳಿಸಿದರು. ಭಾರತ ಪರ 151 ಪಂದ್ಯಗಳನ್ನಾಡಿರುವ ಚೆಟ್ರಿ 94 ಗೋಲುಗಳನ್ನು ಬಾರಿಸಿದ್ದು, ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಅಧಿಕ ಗೋಲು ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.


ಕೋಲ್ಕತಾ: ಭಾರತದ ದಿಗ್ಗಜ ಫುಟ್ಬಾಲಿಗ ಸುನಿಲ್‌ ಚೆಟ್ರಿಗೆ ಗೆಲುವಿನ ವಿದಾಯ ಸಿಗಲಿಲ್ಲ. ಗುರುವಾರ ಕುವೈತ್‌ ವಿರುದ್ಧ ನಡೆದ 2026ರ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು.

ಈ ಫಲಿತಾಂಶದೊಂದಿಗೆ ಭಾರತ 3ನೇ ಸುತ್ತು ಪ್ರವೇಶಿಸುವುದು ಕಷ್ಟ ಎನಿಸಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಜೂ.11ರಂದು ಏಷ್ಯಾ ಚಾಂಪಿಯನ್‌ ಕತಾರ್‌ ವಿರುದ್ಧ ಆಡಲಿದೆ. ಕುವೈತ್‌ಗೆ ಅಫ್ಘಾನಿಸ್ತಾನ ಎದುರಾಗಲಿದೆ.

Tap to resize

Latest Videos

undefined

39 ವರ್ಷದ ಚೆಟ್ರಿ, ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಬದುಕನ್ನು ಗುರುವಾರ ಕೊನೆಗೊಳಿಸಿದರು. ಭಾರತ ಪರ 151 ಪಂದ್ಯಗಳನ್ನಾಡಿರುವ ಚೆಟ್ರಿ 94 ಗೋಲುಗಳನ್ನು ಬಾರಿಸಿದ್ದು, ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಅಧಿಕ ಗೋಲು ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಚೆಟ್ರಿ ಈ ವರೆಗೂ 151 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 94 ಗೋಲು ಬಾರಿಸಿದ್ದಾರೆ. ವಿಶ್ವದ ಗರಿಷ್ಠ ಗೋಲು ಸರದಾರರ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡ್ (128), ಇರಾನ್ ಅಲಿ ಡೇಮ್ (108) ಹಾಗೂ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ(106) ಬಳಿಕ 4ನೇ ಸ್ಥಾನದಲ್ಲಿದ್ದಾರೆ. 

ಇಂದು ಭಾರತ vs ಕುವೈತ್ ಫಿಫಾ ಅರ್ಹತಾ ಪಂದ್ಯ; ಚೆಟ್ರಿ ಪಾಲಿಗಿಂದು ವಿದಾಯದ ಪಂದ್ಯ

ಕುವೈತ್‌ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಹಲವು ಗೋಲು ಬಾರಿಸುವ ಅವಕಾಶ ಸಿಕ್ಕರೂ, ಅದರ ಸದ್ಬಳಕೆ ಮಾಡಿಕೊಳ್ಳಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಚೆಟ್ರಿಯ ವಿದಾಯದ ಪಂದ್ಯಕ್ಕೆ ಕೋಲ್ಕತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. 68,000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 59,000 ಪ್ರೇಕ್ಷಕರಿದ್ದರು.

ಚೆಟ್ರಿ 2005ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪಾಕಿಸ್ತಾನ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಚೆಟ್ರಿ, ಅದೇ ಪಂದ್ಯದಲ್ಲಿ ತಮ್ಮ ಮೊದಲ ಗೋಲು ಬಾರಿಸಿದ್ದರು.

ಚೆಟ್ರಿಗೆ ಸನ್ಮಾನಗಳ ಸುರಿಮಳೆ!

ಗುರುವಾರ ಪಂದ್ಯದ ಬಳಿಕ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್‌), ಹಲವು ರಾಜ್ಯಗಳ ಫುಟ್ಬಾಲ್‌ ಸಂಸ್ಥೆಗಳು, ಮೋಹನ್‌ ಬಗಾನ್‌ ಸೇರಿ ಹಲವು ಪ್ರಸಿದ್ಧ ಕ್ಲಬ್‌ಗಳು ಚೆಟ್ರಿಗೆ ಸನ್ಮಾನ ಮಾಡಿ ಸ್ಮರಣಿಕೆ ನೀಡಿದವು. ಚೆಟ್ರಿ ಕಣ್ಣೀರಿಡುತ್ತಾ, ಅಭಿಮಾನಿಗಳಿಗೆ ಕೈಮುಗಿದು ಧನ್ಯವಾದ ಹೇಳಿದರು.

ವಿಶ್ವಕಪ್ ಗೆದ್ದುಕೊಟ್ಟ ನಾಯಕ ಈಗ ವಾಟರ್‌ ಬಾಯ್..! ಆಸೀಸ್ ಸಕ್ಸಸ್‌ಗೆ ಇದೇ ರೀಸನ್ ಎಂದ ನೆಟ್ಟಿಗರು

ಚೆಟ್ರಿಗೆ ಶುಭ ಕೋರಿದ ಮೋಡ್ರಿಚ್‌!

ಚೆಟ್ರಿಗೆ ಕ್ರೋವೇಷಿಯಾದ ದಿಗ್ಗಜ ಫುಟ್ಬಾಲಿಗ, ರಿಯಲ್‌ ಮ್ಯಾಡ್ರಿಡ್‌ನ ತಾರೆ ಲೂಕಾ ಮೊಡ್ರಿಚ್‌ ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ್ದಾರೆ. ಗುರುವಾರದ ಪಂದ್ಯಕ್ಕೂ ಮುನ್ನ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಮೊಡ್ರಿಚ್‌, ಚೆಟ್ರಿಯ ಮುಂದಿನ ಬದುಕು ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.

click me!