
ಕೋಲ್ಕತಾ: 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ 2ನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಭಾರತಕ್ಕೆ ಗುರುವಾರ ಕುವೈತ್ ಸವಾಲು ಎದುರಾಗಲಿದೆ. ಈ ಪಂದ್ಯ ಭಾರತಕ್ಕೆ ನಿರ್ಣಾಯಕ ಎನಿಸಿದ್ದು, ಗೆದ್ದರೆ ಚೊಚ್ಚಲ ಬಾರಿ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತು ಪ್ರವೇಶಿಸಲಿದೆ.
ಸದ್ಯ ಟೂರ್ನಿಯಲ್ಲಿ ಭಾರತ 4 ಪಂದ್ಯಗಳನ್ನಾಡಿದ್ದು, 1 ಜಯ, 1 ಡ್ರಾ, 2 ಸೋಲಿನೊಂದಿಗೆ 4 ಅಂಕ ಸಂಪಾದಿಸಿ 'ಎ' ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕತಾರ್ (12 ಅಂಕ) ಅಗ್ರಸ್ಥಾನ, ಅಫ್ಘಾನಿ ಸ್ತಾನ(4 ಅಂಕ), ಕುವೈತ್ (3 ಅಂಕ) ಕ್ರಮವಾಗಿ 3, 4ನೇ ಸ್ಥಾನಗಳಲ್ಲಿವೆ. ಕಳೆದ ನವೆಂಬರ್‌ನಲ್ಲಿ ಕುವೈತ್ ವಿರುದ್ದ ಮೊದಲ ಮುಖಾ ಮುಖಿಯಲ್ಲಿ 1-0 ಗೋಲಿ ನಿಂದ ಗೆದ್ದಿದ್ದ ಭಾರತ ತವರಿ ನಲ್ಲಿ ಮತ್ತೊಂದು ಗೆಲು ವಿನ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಖಚಿತಪಡಿಸಿಕೊಳ್ಳಲಿದ್ದು, ಸೋತರೆ ಬಹುತೇಕ ಹೊರ ಬೀಳಲಿದೆ.
ಪಂದ್ಯ ಆರಂಭ: ಸಂಜೆ 7ಕ್ಕೆ,
ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18 ಚಾನೆಲ್.
ಚೆಟ್ರಿಗಿಂದು ವಿದಾಯದ ಪಂದ್ಯ
ಕೋಲ್ಕತಾ: ಭಾರತದ ದಿಗ್ಗಜ ಫುಟ್ಬಾಲಿಗ, ಗರಿಷ್ಠ ಗೋಲು ಗಳಿಕೆಯಲ್ಲಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರ ಸಾಲಿನಲ್ಲಿ ನಿಲ್ಲುವ ಸುನಿಲ್ ಚೆಟ್ರಿ ಗುರುವಾರ ಕೊನೆಯ ಬಾರಿ ಭಾರತದ ಜೆರ್ಸಿ ತೊಟ್ಟು ಆಡಲಿದ್ದಾರೆ. ಕುವೈತ್ ವಿರುದ್ಧ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಚೆಟ್ರಿ ಕಣಕ್ಕಿಳಿಯಲಿದ್ದು, ಇದು ಭಾರತದ ಪರ ಅವರಿಗೆ ಕೊನೆಯ ಪಂದ್ಯವಾಗಲಿದೆ.
39 ವರ್ಷ ಚೆಟ್ರಿ ಇತ್ತೀಚೆಗಷ್ಟೇ ಅಂ.ರಾ. ಫುಟ್ಬಾಲ್ ಗೆ ನಿವೃತ್ತಿ ಪ್ರಕಟಿಸಿದ್ದರು. 2005ರಲ್ಲಿ ತಮ್ಮ 20ನೇವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಚೆಟ್ರಿ ಈ ವರೆಗೂ 150 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 94 ಗೋಲು ಬಾರಿಸಿದ್ದಾರೆ. ವಿಶ್ವದ ಗರಿಷ್ಠಗೋಲುಸರದಾರರ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡ್ (128), ಇರಾನ್ ಅಲಿ ಡೇಮ್ (108) ಹಾಗೂ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ(106) ಬಳಿಕ 4ನೇ ಸ್ಥಾನದಲ್ಲಿದ್ದಾರೆ.
ಈ ವರೆಗೂ ಭಾರತಕ್ಕೆ ಹಲವು ಬಾರಿ ಸ್ಯಾಫ್ ಚಾಂಪಿಯನ್‌ಶಿಪ್, ನೆಹರೂ ಕಪ್ ಗೆಲ್ಲಿಸಿಕೊಟ್ಟಿರುವ ಚೆಟ್ರಿ, ಸದ್ಯ ಕುವೈತ್ ವಿರುದ್ದ ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತಿಗೇರಿಸುವ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.