* ಎಎಫ್‌ಸಿ ಫುಟ್ಬಾಲ್ ಕ್ರೀಡಾಕೂಟದಲ್ಲಿ ಬಿಎಫ್‌ಸಿ-ಎಟಿಕೆ ಮುಖಾಮುಖಿ
* ಕಳೆದ 2 ವರ್ಷಗಳಿಂದ ಎಟಿಕೆ ವಿರುದ್ಧ ಬಿಎಫ್‌ಸಿ ಐಎಸ್‌ಎಲ್‌ನಲ್ಲಿ ಗೆಲುವು ಸಾಧಿಸಿಲ್ಲ
* ಸುನಿಲ್ ಚೆಟ್ರಿ ಪಡೆಗೆ ಕಠಿಣ ಸವಾಲು ನಿರೀಕ್ಷಿಸಲಾಗಿದೆ.
ಮಾಲೆ(ಆ.18): 2021ರ ಎಎಫ್‌ಸಿ ಕಪ್ ಗುಂಪು ಹಂತಕ್ಕೆ ಪ್ರವೇಶಿಸಿರುವ ಬೆಂಗಳೂರು ಎಫ್‌ಸಿ, ಬುಧವಾರ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತದ್ದೇ ತಂಡ ಎಟಿಕೆ ಮೋಹನ್ ಬಗಾನ್ ವಿರುದ್ಧ ಸೆಣಸಲಿದೆ.
ಕಳೆದ 2 ವರ್ಷಗಳಿಂದ ಎಟಿಕೆ ವಿರುದ್ಧ ಬಿಎಫ್‌ಸಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಸುನಿಲ್ ಚೆಟ್ರಿ ಪಡೆಗೆ ಕಠಿಣ ಸವಾಲು ನಿರೀಕ್ಷಿಸಲಾಗಿದೆ. ‘ಡಿ’ ಗುಂಪಿನಲ್ಲಿ ಒಟ್ಟು 4 ತಂಡಗಳಿಗದ್ದು, ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ-ವಲಯ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.
undefined
ಫುಟ್ಬಾಲ್ ಎಎಫ್‌ಸಿ ಕಪ್: ಗುಂಪು ಹಂತಕ್ಕೆ ಲಗ್ಗೆಯಿಟ್ಟ ಬಿಎಫ್‌ಸಿ
IT'S MATCHDAY IN MALE! ⚡
The Blues begin their Asian conquest with a Group D opener against ATK Mohun Bagan at the National Stadium, in the Maldives. 🔥
Catch all the action live on the STAR Sports Network, Hotstar or JioTV. 📱🖥 🔵 pic.twitter.com/dUexQL9HTi
ಎಎಫ್‌ಸಿ ಫ್ಲೇ ಆಫ್ ಹಂತದ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಈಗಲ್ಸ್ ಎಫ್‌ಸಿ ಎದುರು ಬಿಎಫ್‌ಸಿ 1-0 ಗೋಲಿನ ಗೆಲುವು ದಾಖಲಿಸಿ ಗ್ರೂಪ್ ಹಂತಕ್ಕೆ ಲಗ್ಗೆಯಿಟ್ಟಿತ್ತು. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ, ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ.