ಅಭಿಮಾನಿಗಳಿಗೆ ಶಾಕ್; ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಲಿಯೋನೆಲ್ ಮೆಸ್ಸಿ ಗುಡ್ ಬೈ!

By Suvarna News  |  First Published Aug 6, 2021, 7:37 PM IST
  • ಬಾರ್ಸಿಲೋನಾ ಕ್ಲಬ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ
  • ಅಧಿಕೃತ ಪ್ರಕಟಣೆ ಹೊರಡಿಸಿದ ಬಾರ್ಸಿಲೋನಾ ಕ್ಲಬ್
  • ಕೆಲ ನಿಯಮಗಳು ಅಡ್ಡಿ, ಹೊಸ ಒಪ್ಪಂದ ಇಲ್ಲ

ಸ್ಪೇನ್(ಆ.06): ಫುಟ್ಬಾಲ್ ಅಭಿಮಾನಿಗಳಿಗೆ ದಿಢೀರ್ ಶಾಕ್ ಆಗಿದೆ. ಇಷ್ಟು ದಿನ ದಿಗ್ಗಜ ಲಿಯೋನೆಲ್ ಮೆಸ್ಸಿ ಕಾರಣಕ್ಕೆ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳಿಗೆ ನಿಜಕ್ಕೂ ಆಘಾತವಾಗಿದೆ. ಹೌದು ಲಿಯೋನೆಲ್ ಮೆಸ್ಸಿ ಸ್ಪೇನ್‌ನ ಖ್ಯಾತ ಫುಟ್ಬಾಲ್  ಕ್ಲಬ್ ಬಾರ್ಸಿಲೋನಾಗೆ ವಿದಾಯ ಹೇಳುತ್ತಿದ್ದಾರೆ.

ಮೆಸ್ಸಿಗೆ ಮೊದಲ ಟ್ರೋಫಿ: ಕೋಪಾ ಕಪ್‌ ಗೆದ್ದ ಅರ್ಜೆಂಟೀನಾ

Latest Videos

undefined

ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ನಿಯಮದ ಪ್ರಕಾರ ಹೊಸ ಒಪ್ಪಂದ ಸಹಿ ಹಾಕಬೇಕಿತ್ತು. ಆದರೆ ಸ್ಪಾನಿಶ್ ಲಾಲೀಗಾ ನಿಯಮಗಳು 34 ವರ್ಷ ಲಿಯೋನೆಲ್ ಮೆಸ್ಸಿ ಜೊತೆ ಒಪ್ಪಂದ ಮಾಡಿಕೊಳ್ಳಲು ಅಡ್ಡಿಯಾಗುತ್ತಿದೆ. ಆರ್ಥಿಕ ಹಾಗೂ ಇತರ ಅಡಚಣೆಗಳ ಕಾರಣವೂ ಒಪ್ಪಂದ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ಆವೃತ್ತಿಯಿಂದ ಮೆಸ್ಸಿ ಕ್ಲಬ್ ಜೊತೆ ಇರುವುದಿಲ್ಲ ಎಂದು ಬಾರ್ಸಿಲೋನಾ ಕ್ಲಬ್ ಹೇಳಿದೆ.

ಸ್ನೇಹಿತನ ತಂಗಿಯನ್ನೇ ಪ್ರೀತಿಸಿ, ಮದುವೆಗೂ ಮುನ್ನ 2 ಮಕ್ಕಳ ತಂದೆಯಾದ ಫುಟ್ಬಾಲ್ ದಿಗ್ಗಜ!

ಮೆಸ್ಸಿ ಜೊತೆಗಿನ ಒಪ್ಪಂದ ನವೀಕರಿಸಲು ಸಾಧ್ಯವಾಗುತ್ತಿಲ್ಲ ಅನ್ನೋ ನೋವು ಕ್ಲಬ್‌ಗಿದೆ. 2021ರ ಜೂನ್ ತಿಂಗಳಲ್ಲಿ ಲಿಯೋನೆಲ್ ಮೆಸ್ಸಿ ಕಾರಣಾಂತರಗಳಿಂದ ಬೇರೆ ಕ್ಲಬ್ ಪರ ಆಡಲು ನಿರ್ಧರಿಸಿದ್ದರು. ಆದರೆ ಬಾರ್ಸಿಲೋನಾ ಕ್ಲಬ್ ಮೆಸ್ಸಿ ಮನವೋಲಿ ಬಾರ್ಸಿಲೋನದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಾರ್ಸಿಲೋನಾ ಕ್ಲಬ್ ಪರ 672 ಗೋಲು ಸಿಡಿಸಿದ ಶ್ರೇಷ್ಠ ಫುಟ್ಬಾಲ್ ಪಟುವಿಗೆ ಕೃತಜ್ಞತೆ ಎಂದು ಬಾರ್ಸಿಲೋನಾ ಕ್ಲಬ್ ಹೇಳಿದೆ. 

ಬಾರ್ಸಿಲೋನಾ ಕ್ಲಬ್ ಪರ ಮೆಸ್ಸಿ ಸಾಧನೆ
672 ಗೋಲು
10 ಲೀಗ್ ಪ್ರಶಸ್ತಿ
4 ಚಾಂಪಿಯನ್ಸ್ ಲೀಗ್ ಪ್ರಶಸ್ತಿ
3 ಕ್ಲಬ್ ವಿಶ್ವಕಪ್ ಪ್ರಶಸ್ತಿ

ಲಿಯೋನೆಲ್ ಮೆಸ್ಸಿ ಒಂದು ವರ್ಷದ ಸಂಬಳ 1200 ಕೋಟಿ ರುಪಾಯಿ!

ಲಾಲಾಲೀಗಾ ಆರ್ಥಿಕ ನಿಯಮದಿಂದ ಮತ್ತೆ ಮೆಸ್ಸಿ ಜೊತೆ ಒಪ್ಪಂದ ಸಾಧ್ಯವಾಗುತ್ತಿಲ್ಲ 2013ರಲ್ಲಿ ಲಾಲೀಗಾ ಆರ್ಥಿಕ ನೀತಿಯಲ್ಲಿ ಫುಟ್ಬಾಲ್ ಪಟುಗಳಿಗೆ ಪಾವತಿ ಮಾಡುವ ಗರಿಷ್ಠ ಒಪ್ಪಂದ(ವೇತನ) ಮಿತಿಯನ್ನು ನಿಗದಿ ಪಡಿಸಿದೆ. ಈ ಕಾರಣಗಳಿಂದ ಮೆಸ್ಸಿ ಜೊತೆ ಒಪ್ಪಂದ ಮುಂದರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾರ್ಸಿಲೋನಾ ಕ್ಲಬ್ ಅಧ್ಯಕ್ಷ ಜ್ಯುಯಾನ್ ಲ್ಯಾಪೋರ್ಟೆ ಹೇಳಿದ್ದಾರೆ.

click me!