
ಮಾಲೆ(ಆ.16): 2021ರ ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಯ ಗುಂಪು ಹಂತಕ್ಕೆ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್‌ಸಿ) ತಂಡ ಅರ್ಹತೆ ಪಡೆದಿದೆ. ಭಾನುವಾರ ಇಲ್ಲಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಈಗಲ್ಸ್ ಎಫ್‌ಸಿ ತಂಡದ ವಿರುದ್ದ ಬೆಂಗಳೂರು ಎಫ್‌ಸಿ ತಂಡವು 1-0 ಗೋಲಿನ ಗೆಲುವು ದಾಖಲಿಸಿತು.
ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಪಡೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬುಧವಾರ ನಡೆಯಲಿರುವ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತದ ಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ. ಭಾರತದ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಅಭಿಮಾನಿಗಳಿಗೆ ಶಾಕ್; ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಲಿಯೋನೆಲ್ ಮೆಸ್ಸಿ ಗುಡ್ ಬೈ!
ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಬಿಎಫ್‌ಸಿ ಪರ 26ನೇ ನಿಮಿಷದಲ್ಲಿ ಜಯೇಶ್ ರಾಣೆ ಆಕರ್ಷಕ ಗೋಲು ಬಾರಿಸಿದರು. ಬಿಎಫ್‌ಸಿಯ ರಕ್ಷಣಾ ಪಡೆಯನ್ನು ದಾಟಿ ಗೋಲು ಗಳಿಸಲು ಈಗಲ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ ತಂಡಗಳ ಜತೆ ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.