ಗೋವಾ ವಿರುದ್ಧ ಅಬ್ಬರ - ಅಗ್ರ ಸ್ಥಾನಕ್ಕೆ ಬೆಂಗಳೂರು ಎಫ್‌ಸಿ

By Web DeskFirst Published Feb 21, 2019, 9:58 PM IST
Highlights

ಗೋವಾ ವಿರುದ್ಧ ತವರಿನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೆಲುವು ಸಾಧಿಸಿದೆ. ಈ ಮೂಲಕ ಮತ್ತೆ ಅಗ್ರಸ್ಥಾನ ಸಂಪಾದಿಸಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಫೆ.21): ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಎಫ್‌ಸಿ(BFC) ಹಾಗೂ ಎಫ್‌ಸಿ ಗೋವಾ ವಿರುದ್ಧ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯ ಅಭಿಮಾನಿಗಳು ಸಖತ್ ಮನರಂಜನೆ ನೀಡಿತು. ತವರಿನಲ್ಲಿ ಅಬ್ಬರಿಸಿದ  BFC 3-0 ಅಂತರದ ಗೋಲುಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.ದ್ವಿತೀಯಾರ್ಧದಲ್ಲಿ ಕೇವಲ ಹತ್ತು ಆಟಗಾರರನ್ನು ಹೊಂದಿದ್ದರೂ ಆತ್ಮ ಸ್ಥೈರ್ಯ ಕಳೆದುಕೊಳ್ಳದ ಬೆಂಗಳೂರು ತಂಡ , ಗೋವಾ ವಿರುದ್ಧ ಗೆಲುವಿನ ನಗೆ ಬೀರಿತು.  BFC ಪರ  ಜುವಾನನ್ (50ನೇ ನಿಮಿಷ), ಉದಾಂತ್ ಸಿಂಗ್ (58ನೇ ನಿಮಿಷ) ಹಾಗೂ ಮಿಕು  ( 69 ನೇ ನಿಮಿಷ ) ಗೋಲು ಗಳಿಸಿ ತಂಡ ಮತ್ತೆ ಅಗ್ರ ಸ್ಥಾನ ತಲಪುವಂತೆ ಮಾಡಿದರು.  

ಇದನ್ನೂ ಓದಿ: ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

ಗೋಲಿಲ್ಲದ ಮೊದಲಾರ್ಧ:
ಪ್ರಥಮಾರ್ಧದ ಕೊನೆಯಲ್ಲಿ ಎರಡು ಉತ್ತಮ ಗುಣಮಟ್ಟದ ತಂಡದ ಕಳಪೆ ಆಟಕ್ಕೆ ಮನ ಮಾಡಿತು. ಪರಿಣಾಮ ಬೆಂಗಳೂರು ತಂಡದ ನಿಶು ಕುಮಾರ್ ಎರಡು ಬಾರಿ ಯಲ್ಲೋ ಕಾರ್ಡ್ ಗಳಿಸಿ ಅಂಗಣದಿಂದ ಹೊರ ನಡೆದರು. ರೆಫರಿಯ ತೀರ್ಪಿಗೆ ಆತಿಥೇಯ ತಂಡದ ಆಟಗಾರರು ರೆಫರಿಯನ್ನು ಸುತ್ತುವರಿದರು. ಈ ಘಟನೆಯನ್ನು ಹೊರತುಪಡಿಸಿದರೆ ಇತ್ತಂಡಗಳು ಉತ್ತಮ ಫುಟ್ಬಾಲ್ ಆಟ ಪ್ರದರ್ಶಿಸಿದವು.  

ಇದನ್ನೂ ಓದಿ: ಬ್ರೆಜಿಲ್ ಫುಟ್ಬಾಲ್ ಕ್ಲಬ್’ನಲ್ಲಿ ಬೆಂಕಿ ಅವಘಡ: 10 ಮಂದಿ ದುರ್ಮರಣ

ಗೋಲು ಗಳಿಸಲು ಕೆಲವು ಅವಕಾಶಗಳು ಉತ್ತಮವಾಗಿದ್ದವು, ಆದರೆ ಅಂತಿಮ ರೂಪು ನೀಡುವಲ್ಲಿ ಉಭಯ ತಂಡಗಳ ಆಟಗಾರರು ವಿಫಲರಾದರು.  4ನೇ ನಿಮಿಷದಲ್ಲಿ  ಅಹಮ್ಮದ್ ಜಹೊವ್ ಅವರಿಗೆ ಗೋವಾದ ಪರ ಖಾತೆ ತೆರೆಯುವ ಅವಕಾಶವಿದ್ದಿತ್ತು, ಆದರೆ ಚೆಂಡು  ಗೋಲ್ ಬಾಕ್ಸ್‌ನ ಅಂಚಿಗೆ ತಗುಲಿದ ಕಾರಣ ಅದೃಷ್ಟ ಬೆಂಗಳೂರಿನ ಪಾಲಾಯಿತು. ಇದರೊಂದಿಗೆ ಮೊದಲಾರ್ಥ ಗೋಲಿಲ್ಲದೆ ಅಂತ್ಯಗೊಂಡಿತು. ಮುಂದಿನ 45 ನಿಮಿಷಗಳ ಆಟವನ್ನು ಬೆಂಗಳೂರು ತಂಡ ಕೇವಲ 10 ಆಟಗಾರರಲ್ಲೇ ಆಡಬೇಕಾಯಿತು. BFC ಹಾಗೂ ಗೋವಾ ತಂಡ ಈಗಾಗಲೇ ಪ್ಲೇ ಆಫ್  ಹಂತವನ್ನು ತಲುಪಿರುವುದರಿಂದ ಒತ್ತಡದಲ್ಲಿ ಆಡಬೇಕಾದ ಅನಿವಾರ್ಯತೆ ಇರಲಿಲ್ಲ.

click me!
Last Updated Feb 21, 2019, 9:58 PM IST
click me!