ಅರ್ಜೆಂಟೀನಾ ನೋಟಿನ ಮೇಲೆ ಮರಡೋನಾ ಚಿತ್ರ?

Suvarna News   | Asianet News
Published : Dec 09, 2020, 08:16 AM IST
ಅರ್ಜೆಂಟೀನಾ ನೋಟಿನ ಮೇಲೆ ಮರಡೋನಾ ಚಿತ್ರ?

ಸಾರಾಂಶ

ಕಳೆದ ತಿಂಗಳಷ್ಟೇ ಕೊನೆಯುಸಿರೆಳೆದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಚಿತ್ರವನ್ನು ಮುದ್ರಿಸಲು ಅರ್ಜಿಂಟೀನಾ ಚಿಂತನೆ ನಡೆಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬ್ಯೂನಸ್‌ ಐರಿಸ್(ಡಿ.09)‌: ಇತ್ತೀಚೆಗೆ ನಿಧನರಾದ ದಿಗ್ಗಜ ಫುಟ್ಬಾಲಿಗ ಡಿಯಾಗೋ ಮರಡೋನಾ ಅವರ ಚಿತ್ರವನ್ನು ಅರ್ಜೆಂಟೀನಾದ ನೋಟುಗಳ ಮೇಲೆ ಮುದ್ರಣ ಮಾಡಬೇಕು ಎಂದು ಸ್ಥಳೀಯ ಸೆನಟರ್‌ ನೊರ್ಮಾ ದುರಾಂಗೊ ಪ್ರಸ್ತಾಪ ವಿರಿಸಿದ್ದಾರೆ. 

1000 ಪೆಸೊ ನೋಟಿನ ಒಂದು ಕಡೆ ಮರಡೋನಾ ಅವರ ಮುಖ ಹಾಗೂ ಮತ್ತೊಂದು ಕಡೆ ಅವರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿನ ಚಿತ್ರವನ್ನು ಮುದ್ರಿಸಬೇಕು ಎಂದು ಪ್ರಸ್ತಾಪದಲ್ಲಿ ತಿಳಿಸಿದ್ದಾರೆ. ಮುಂದಿನ ತಿಂಗಳು ಈ ಪ್ರಸ್ತಾಪದ ಬಗ್ಗೆ ಅಲ್ಲಿನ ಆಡಳಿತ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ. ಅರ್ಜೆಂಟೀನಾಗೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಮರಡೋನಾ ಹಲವು ವರ್ಷಗಳ ಕಾಲ ತಂಡದ ಕೋಚ್‌ ಆಗಿಯೂ ಕಾರ‍್ಯನಿರ್ವಹಿಸಿದ್ದರು.

ತಮ್ಮ ಅದ್ಭುತ ಕಾಲ್ಚಳಕದ ಮೂಲಕ ಅರ್ಜೆಂಟೀನಾ ತಂಡಕ್ಕೆ ಫುಟ್ಬಾಲ್ ವಿಶ್ವಕಪ್ ಗೆದ್ದುಕೊಡುವಲ್ಲಿ ಡಿಯಾಗೋ ಮರಡೋನಾ ಪ್ರಮುಖ ಪಾತ್ರವಹಿಸಿದ್ದರು. ಮರಡೋಮಾ 60ನೇ ವಯಸ್ಸಿನಲ್ಲಿ ನವೆಂಬರ್ 25ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಕೇರಳ ಉದ್ಯಮಿಯಿಂದ ಮರಡೋನಾ ಮ್ಯೂಸಿಯಂ..!

ಸದ್ಯ 000 ಪೆಸೊ ನೋಟಿನ ಮೇಲೆ ಅರ್ಜೆಂಟೀನಾ ರಾಷ್ಟ್ರೀಯ ಪಕ್ಷಿಯಾದ ರೂಪೌಸ್ ಹಾರ್ನಿರೋ ಚಿತ್ರವಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಪಕ್ಷಿಯ ಬದಲಿಗೆ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಚಿತ್ರ ಕಂಗೊಳಿಸುವ ಸಾಧ್ಯತೆಯಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?