ಕೇರಳ ಉದ್ಯಮಿಯಿಂದ ಮರಡೋನಾ ಮ್ಯೂಸಿಯಂ..!

Suvarna News   | Asianet News
Published : Dec 08, 2020, 02:37 PM IST
ಕೇರಳ ಉದ್ಯಮಿಯಿಂದ ಮರಡೋನಾ ಮ್ಯೂಸಿಯಂ..!

ಸಾರಾಂಶ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಮ್ಯೂಸಿಯಂ ಭಾರತದಲ್ಲಿ ತಲೆ ಎತ್ತಲಿದೆ. ಕೇರಳ ಉದ್ಯಮಿ ಬಾಬಿ ಚೆಮ್ಮನೂರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ

ಕೊಚ್ಚಿ(ಡಿ.08) ಇತ್ತೀಚೆಗೆ ನಿಧನರಾದ ಅರ್ಜೇಂಟೀನಾದ ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ನೆನಪಿನಲ್ಲಿ ವಸ್ತು ಸಂಗ್ರಹಾಲಯ(ಮ್ಯೂಸಿಯಂ) ಒಂದನ್ನು ನಿರ್ಮಾಣ ಮಾಡುವುದಾಗಿ ಕೇರಳ ಉದ್ಯಮಿ ಬಾಬಿ ಚೆಮ್ಮನೂರ್ ಘೋಷಿಸಿದ್ದಾರೆ.

ಮ್ಯೂಸಿಯಂನಲ್ಲಿ ಮರಡೀನಾ ಅವರ ಚಿನ್ನದ ಪ್ರತಿಮೆ ಸ್ಥಾಪಿಸಲಾಗುವುದು, ಪ್ರತಿಮೆ 1986ರ ವಿಶ್ವಕಪ್‌ನ ಅತ್ಯಂತ ಜನಪ್ರಿಯ 'ಹ್ಯಾಂಡ್ ಆಫ್‌ ಗಾಡ್' ಮಾದರಿಯಲ್ಲಿ ಇರಲಿದೆ. ಅವರ ವೈಯುಕ್ತಿಕ ಹಾಗೂ ವೃತ್ತಿಜೀವನಕ್ಕೆ ಸಂಬಂಧಿಸಿದ ಫೋಟೋಗಳು, ಅವರು ಬಳಸಿದ ಹಲವು ವಸ್ತುಗಳು, ಗೆದ್ದ ಟ್ರೋಫಿಗಳು, ಪ್ರಶಸ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಡಿಯಾಗೋ ಮರಡೋನಾ ಅವರ ಮ್ಯೂಸಿಯಂನ್ನು ಕೇರಳ ಇಲ್ಲವೇ ಕೋಲ್ಕತಾದಲ್ಲಿ ನಿರ್ಮಿಸಲಾಗುವುದು ಎಂದು ಬಾಬಿ ಚೆಮ್ಮನೂರ್ ಘೋಷಿಸಿದ್ದಾರೆ.

ಮರಡೋನಾ ಎಂಬ ಮೋಹಕ ವ್ಯಸನ

ಸ್ಕಾಟಿಶ್‌ ಲೀಗಲ್ಲಿ ಗೋಲು: ಬಾಲಾ ದೇವಿ ದಾಖಲೆ

ಗ್ಲಾಸ್ಗೋ: ಭಾರತದ ತಾರಾ ಫುಟ್ಬಾಲ್ ಆಟಗಾರ್ತಿ ಬಾಲಾ ದೇವಿ ಸ್ಕಾಟ್ಲೆಂಡ್‌ನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಗೋಲು ಬಾರಿಸಿದ್ದಾರೆ. ರೇಂಜರ್ಸ್‌ ಎಫ್‌ಸಿ ಪರ ಆಡುತ್ತಿರುವ ಬಾಲಾ ದೇವಿ, ಭಾನುವಾರ ನಡೆದ ಮದರ್‌ವೆಲ್ ಎಫ್‌ಸಿ ತಂಡದ ವಿರುದ್ದ ನಡೆದ ಪಂದ್ಯದ 85ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇದರೊಂದಿಗೆ ಯೂರೋಪ್‌ನ ಅಗ್ರ ವೃತ್ತಿಪರ ಲೀಗ್‌ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?