ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

By Naveen Kodase  |  First Published Mar 18, 2020, 12:40 PM IST

ಕೊರೋನಾ ವೈರಸ್‌ಗೆ ಯುವ ಫುಟ್ಬಾಲ್ ಕೋಚ್ ಬಲಿಯಾಗಿದ್ದಾರೆ. ಸ್ಪೇನ್ ಮೂಲದ 21 ವರ್ಷದ ಕೋಚ್ ಕೊನೆಯುಸಿರೆಳೆದ ದುರ್ದೈವಿ. ಈ ಕುರಿತಾದ ವಿವರ ಇಲ್ಲಿದೆ ನೋಡಿ.  


ಮ್ಯಾಡ್ರಿಡ್‌(ಮಾ.18): ಕೊರೋನಾ ವೈರಸ್‌ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಸ್ಪೇನ್‌ ಫುಟ್ಬಾಲ್‌ ಕೋಚ್‌ ಫ್ರಾನ್ಸಿಸ್ಕೋ ಗ್ರಾಸಿಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಕೊರೋನಾ ನಡುವೆಯೇ ಜರುಗಿದ ಕೆಎಸ್‌ಸಿಎ ಕ್ರಿಕೆಟ್‌!

Latest Videos

ಸ್ಪ್ಯಾನಿಶ್‌ ಲೀಗ್‌ನ 2ನೇ ಡಿವಿಷನ್‌ ಫುಟ್ಬಾಲ್‌ ಲೀಗ್‌ನ ಅಟ್ಲೆಟಿಕೊ ಪೊರ್ತಾಡ ಅಲ್ಟಾ ಕಿರಿಯರ ತಂಡದ ಕೋಚ್‌ ಆಗಿ ಗ್ರಾಸಿಯಾ ಕಾರ‍್ಯನಿರ್ವಹಿಸಿದ್ದರು. ಗ್ರಾಸಿಯಾ, ಲಾ ಲೀಗಾ 2 ಫುಟ್ಬಾಲ್‌ ಟೂರ್ನಿಯಲ್ಲಿ ಆಡಿದ್ದರು. ಗ್ರಾಸಿಯಾ ಅವರಲ್ಲಿ ಕಳೆದ ವಾರವಷ್ಟೇ ಕೊರೋನಾ ಸೋಂಕು ಪತ್ತೆಯಾಗಿತ್ತು. ಮಲಗಾ ಪ್ರದೇಶದಲ್ಲಿನ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಮಂಗಳೂರಿನ ಇಬ್ಬರು ಸೇರಿ 180 ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿ

ಸ್ಪೇನ್‌ನಲ್ಲಿ ಇದುವರೆಗೂ 8000 ಸಾವಿರಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 300 ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 147ಕ್ಕೇರಿದ್ದು ಈಗಾಗಲೇ ಮೂರು ಜನ ಕೊನೆಯುಸಿರೆಳೆದಿದ್ದಾರೆ.
 

click me!