6ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಲೀಗ್‌ನಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಾಖಲೆಯ ಮೂರನೇ ಬಾರಿಗೆ ಕೋಲ್ಕತಾ ತಂಡವು ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಗೋವಾ(ಮಾ.15): 6ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಟಿಕೆ, ಚೆನ್ನೈಯಿನ್ ಫುಟ್ಬಾಲ್ ಕ್ಲಬ್ ವಿರುದ್ಧ 3-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. 3ನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಎಟಿಕೆ, ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.
In a closely fought-contest, pips to win the Maruti Suzuki Golden Boot for the 2019-20 season. pic.twitter.com/2ISqqYwFWj
— Indian Super League (@IndSuperLeague)ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲೇ ಸ್ಪೇನ್ ಆಟಗಾರ ಜಾವಿ ಹರ್ನಾಂಡೆಜ್ ಆಕರ್ಷಕ ಗೋಲು ಬಾರಿಸಿ ಖಾತೆ ತೆರೆದರು. ರಾಯ್ ಕೃಷ್ಣ ನೀಡಿದ ಪಾಸ್ ಅನ್ನು ಹರ್ನಾಂಡೆಜ್ ಗೋಲಾಗಿ ಪರಿವರ್ತಿಸಿದರು. ಇದು ಈ ಆವೃತ್ತಿಯಲ್ಲಿ ಅವರು ಬಾರಿಸಿದ ಮೊದಲ ಗೋಲು.
undefined
ಐಎಸ್‌ಎಲ್ ಟೂರ್ನಿ: ಬೆಂಗಳೂರು ಎಫ್‌ಸಿ ಫೈನಲ್ ಕನಸು ಭಗ್ನ
A moment of immense joy for Roy ❤
The skipper and his wife pose with the trophy 🏆 pic.twitter.com/tOIjqXBYrt
ಮೊದಲಾರ್ಧದ ಮುಕ್ತಾಯದ ವರೆಗೂ ಎಟಿಕೆ 1-0 ಮುನ್ನಡೆ ಕಾಯ್ದುಕೊಂಡಿತು. ಅಲ್ಲದೇ ದ್ವಿತೀಯಾರ್ಧ ಆರಂಭಗೊಳ್ಳುತ್ತಿದ್ದಂತೆ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. 48ನೇ ನಿಮಿಷದಲ್ಲಿ ಎಡು ಗಾರ್ಸಿಯಾ ಆಕರ್ಷಕ ಗೋಲು ಗಳಿಸಿದರು. 69ನೇ ನಿಮಿಷದಲ್ಲಿ ಚೆನ್ನೈ ಮೊದಲ ಗೋಲು ಬಾರಿಸಿತು. ನೆರಿಯಸ್ ವಾಲ್ಸ್‌ಕಿಸ್ ಅಂತರವನ್ನು ತಗ್ಗಿಸಿದರು. ನಿಗದಿತ 90 ನಿಮಿಷಗಳ ಮುಕ್ತಾಯದ ಬಳಿಕ ಹೆಚ್ಚುವರಿ 4 ನಿಮಿಷಗಳ ಆಟ ನಡೆಸಲಾಯಿತು. ಈ ಅವಧಿಯಲ್ಲಿ ಗೋಲು ಗಳಿಸಿ ಸಮಬಲ ಸಾಧಿಸುವ ವಿಶ್ವಾಸದಲ್ಲಿದ್ದ ಚೆನ್ನೈಗೆ ಹರ್ನಾಂಡೆಜ್ ಆಘಾತ ನೀಡಿದರು. 90+3ನೇ ನಿಮಿಷದಲ್ಲಿ ಗೋಲು ಬಾರಿಸಿ, ಎಟಿಕೆ ಗೆಲುವನ್ನು ಖಚಿತಪಡಿಸಿದರು.
ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಪಟು ರೊನಾಲ್ಡಿನೊ ಬಂಧನ!
ಲೀಗ್ ಹಂತದ ಮೊದಲ 5 ಪಂದ್ಯಗಳಲ್ಲಿ ಒಂದೂ ಗೋಲು ಬಾರಿಸದೆ ನಂತರ ಪುಟಿದೆದ್ದು ಫೈನಲ್ ತಲುಪಿದ್ದ ಚೆನ್ನೈ 3ನೇ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು. ಬೆಂಗಳೂರು ಎಫ್‌ಸಿ ವಿರುದ್ಧ ಸೆಮಿಫೈನಲ್‌ನಲ್ಲಿ ಜಯಿಸಿ ಫೈನಲ್ ಪ್ರವೇಶಿಸಿದ್ದ ಕೋಲ್ಕತಾ ತಂಡ, ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತು.
ಎಟಿಕೆಗೆ 8 ಕೋಟಿ ರುಪಾಯಿ ಬಹುಮಾನ!
6ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 8 ಕೋಟಿ ರುಪಾಯಿ ಬಹುಮಾನ ಪಡೆಯಿತು. ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ 4 ಕೋಟಿ ಬಹುಮಾನ ದೊರೆಯಿತು. ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ತಂಡಗಳಿಗೆ ತಲಾ 1.5 ಕೋಟಿ ರುಪಾಯಿ ಬಹುಮಾನ ವಿತರಿಸಲಾಯಿತು.