ಇನ್ನೂ ಈ Food Combinations ತಿಂದಿಲ್ಲ ಅಂದ್ರೆ ಈಗ್ಲೇ ಟ್ರೈ ಮಾಡಿ

Published : Nov 25, 2022, 12:56 PM IST
ಇನ್ನೂ ಈ Food Combinations ತಿಂದಿಲ್ಲ ಅಂದ್ರೆ ಈಗ್ಲೇ ಟ್ರೈ ಮಾಡಿ

ಸಾರಾಂಶ

ಆಹಾರ ಪ್ರಿಯರು ಅಡುಗೆಯಲ್ಲಿ ಹೊಸ ಹೊಸ ಪ್ರಯೋಗ ಮಾಡ್ತಿರುತ್ತಾರೆ. ಹಾಗೆ ಬೇರೆ ಬೇರೆ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಕೂಡ ಮಾಡ್ತಾರೆ. ರುಚಿ ಚೆನ್ನಾಗಿರಲಿ ಬಿಡಲಿ ಸಾಮಾಜಿಕ ಜಾಲತಾಣದಲ್ಲಂತೂ ಅದು ವೈರಲ್ ಆಗೇ ಆಗುತ್ತೆ.  

ಇತ್ತೀಚಿನ ದಿನಗಳಲ್ಲಿ ಆಡ್ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಮಾಡೋದು ಸಾಮಾನ್ಯವಾಗಿದೆ.  ಆಹಾರ ಪ್ರಿಯರು ಹೊಸ ಹೊಸ ಕಾಂಬಿನೇಷನ್ ನಲ್ಲಿ ಆಹಾರ ಟೆಸ್ಟ್ ಮಾಡ್ತಿದ್ದಾರೆ. ಕೆಲವೊಂದು ಆಹಾರ ಕಾಂಬಿನೇಷನ್ ಕೇಳಿದ್ರೆ ವಿಚಿತ್ರವೆನ್ನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಇಂಥ ಕಾಂಬಿನೇಷನ್ ಫುಡ್ ಗಳು ಸಾಕಷ್ಟು ಹರಿದಾಡ್ತಿವೆ. ನೀವೂ ಆಹಾರ ಪ್ರೇಮಿಗಳಾಗಿದ್ದು, ಇಂಥ ಕ್ರೇಜಿ ತಿಂಡಿ ತಿನ್ನಲು ಇಷ್ಟಪಡ್ತಿದ್ದರೆ ಒಂದಿಷ್ಟು ಪ್ರಯತ್ನ ಮಾಡಬಹುದು. ನಾವಿಂದು ವಿಚಿತ್ರ ಎನ್ನಿಸುವ ಕೆಲ ಫುಡ್ ಕಾಂಬಿನೇಷನ್ ಬಗ್ಗೆ ನಿಮಗೆ ಹೇಳ್ತೆವೆ.

ವಿಚಿತ್ರವಾಗಿದೆ ಈ ಫುಡ್ (Food) ಕಾಂಬಿನೇಷನ್ (Combination) : 
ಮ್ಯಾಗಿ ಬಿಯರ್ (Maggi Beer) :
ಫಟಾ ಫಟ್ ಆಗುವ ತಿಂಡಿ ಅಂದ್ರೆ ಮ್ಯಾಗಿ. ಬಹುತೇಕ ಎಲ್ಲರೂ ಇದನ್ನು ಇಷ್ಟಪಡ್ತಾರೆ. ಮ್ಯಾಗಿ ಜೊತೆ ಜನರು ಬಿಯರ್ ಕುಡಿದಿರಬಹುದು. ಆದ್ರೆ ಮ್ಯಾಗಿ ಮತ್ತೆ ಬಿಯರ್ ಒಟ್ಟಿಗೆ ಸೇವನೆ ಮಾಡಿರೋ ಛಾನ್ಸ್ ಇಲ್ಲ. ಈ ಬಾರಿ ನೀವು ಇದನ್ನು ಟ್ರೈ ಮಾಡಬಹುದು. ಮ್ಯಾಗಿ ತಯಾರಿಸುವಾಗ ನೀವು ಮ್ಯಾಗಿ ಮಸಾಲೆ ಹಾಕ್ತಿರಿ. ಸ್ಪೆಷಲ್ ಬೇಕು ಎನ್ನಿಸಿದ್ರೆ ಅದಕ್ಕೆ ಬಿಯರ್ ಸೇರಿಸಿ ಮ್ಯಾಗಿ ತಯಾರಿಸಿ. 

ಸ್ಟ್ರಾಬೆರಿ ಬಿರಿಯಾನಿ (Strawberry Biriyani) : ಬಿರಿಯಾನಿ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರೂರುತ್ತೆ. ಬಿರಿಯಾನಿ ಪ್ರಿಯರು, ವೆರೈಟಿ ಬಿರಿಯಾನಿ ಸೇವನೆ ಮಾಡಲು ಆಸಕ್ತಿ ಹೊಂದಿರುತ್ತಾರೆ. ಮುಂದಿನ  ಬಾರಿ ಬಿರಿಯಾನಿ ಜೊತೆ ಸ್ಟ್ರಾಬೆರಿ ಟಾಪಿಂಗ್ ಪ್ರಯತ್ನಿಸಿ. ಮನೆಯಲ್ಲಿ ಬಿರಿಯಾನಿ ಮಾಡುವ ಪ್ಲಾನ್ ಇದ್ದರೆ ಈ ಬಾರಿ ಎಲ್ಲ ಮಸಾಲೆ ಜೊತೆ ಸ್ಟ್ರಾಬೆರಿ ಸೇರಿದಿ. ಯುಟ್ಯೂಬ್ ನಲ್ಲಿ ಇದ್ರ ರೆಸಿಪಿ ಲಭ್ಯವಿದೆ. ಅದನ್ನು ನೋಡಿ ನೀವು ಟ್ರೈ ಮಾಡಬಹುದು. 

ಚಳಿಗಾಲದಲ್ಲಿ ದೇಹ ಬೆಚ್ಚಗಿರಬೇಕು ಅಂದ್ರೆ ಈ ಸ್ಪೆಷಲ್ ಕಷಾಯ ಕುಡೀರಿ

ಚಾಕೊಲೇಟ್ ಬರ್ಗರ್ (Chocolate Burger) :  ಮಕ್ಕಳಿಗೆ ಇವೆರಡೂ ಇಷ್ಟ. ಚಾಕೋಲೇಟ್ ಹಾಗೂ ಬರ್ಗರ್ ಎರಡನ್ನೂ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ನಿಮ್ಮ ಮಗು ಕೂಡ ಬರ್ಗರ್‌ ಪ್ರೇಮಿಯಾಗಿದ್ದರೆ ನೀವು ಆಲೂಗಡ್ಡೆ ಟಿಕ್ಕಿ ಬದಲು ಚಾಕೊಲೇಟ್ ಬರ್ಗರ್ ನೀಡಿ. ಇದ್ರಲ್ಲಿ ಆಲೂಗಡ್ಡೆ ಟಿಕ್ಕಿ ಬದಲಿಗೆ ಚಾಕೊಲೇಟ್ ಕುಕೀಸ್ ಹಾಕ್ಬೇಕಾಗುತ್ತದೆ. ಇದು ಕೇಳಲು ಸ್ವಲ್ಪ ವಿಚಿತ್ರವಾಗಿದ್ರೂ ಮಕ್ಕಳಿಗೆ ಇಷ್ಟವಾಗುತ್ತೆ.
ಮಸ್ಟರ್ಡ್ ಓರಿಯೊ : ಈ ವರ್ಷ ಹೆಚ್ಚು ವೈರಲ್ ಆದ ಫುಡ್ ಕಾಂಬೀನೇಷನ್ ನಲ್ಲಿ ಇದು ಒಂದು. ಟೀ ಜೊತೆ ಬಿಸ್ಕತ್ ತಿನ್ನೋದು ಕಾಮನ್. ಆದ್ರೆ ಸಾಸಿವೆ ಜೊತೆ ಬಿಸ್ಕತ್ತು ಸೇವನೆ ಸ್ವಲ್ಪ ಡಿಫರೆಂಟ್ ಆಗಿದೆ. ನೀವು ಕೂಡ ಓರಿಯೋ ಬಿಸ್ಕತ್ ಗೆ ಕ್ಲಾಸಿಕ್ ಯಲ್ಲೋ ಮಸ್ಟರ್ಡ್ ಹಾಕಿ ಸೇವನೆ ಮಾಡ್ಬಹುದು.

ಗ್ರಿಲ್ ಚೀಸ್ (Grill Cheese) ಜೊತೆ ಆಪಲ್ : 2022ರಲ್ಲಿ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫುಡ್ ಕಾಂಬಿನೇಷನ್ ನಲ್ಲಿ ಇದೂ ಸೇರಿದೆ. ಸೇಬಿನ ಮೇಲೆ ಗ್ರಿಲ್ ಚೀಸ್ ಹಾಕಿ ಸೇವನೆ ಮಾಡಿದ್ದಾರೆ. ಇದನ್ನು ಅನೇಕರು ಇಷ್ಟಪಟ್ಟಿದ್ದಾರೆ. 

ಮ್ಯಾಗಿ ಮಿಲ್ಕ್ ಶೇಕ್ (Maggie Milk Shake) : ಮೇಲೆ ಮ್ಯಾಗಿ ಜೊತೆ ಬಿಯರ್ ಕಾಂಬಿನೇಷನ್ ನೋಡಿದ್ವಿ ಅದನ್ನ ಟ್ರೈ ಮಾಡಿದ್ಮೇಲೆ ನೀವು ಮ್ಯಾಗಿ ಮಿಕ್ ಶೇಕ್ ಪ್ರಯತ್ನಿಸಬಹುದು. ಮಿಲ್ಕ್ ಶೇಕ್ ತಯಾರಿಸಿ ಅದ್ರ ಮೇಲೆ ಮ್ಯಾಗಿ ಹಾಕಿ ಮಿಕ್ಸ್ ಮಾಡಿದ್ರೆ ಮುಗಿತು. 

Winter Drinks: ಚಳಿಯಲ್ಲಿ ನಡುಗ್ಬೇಡಿ , ದೇಹ ಬೆಚ್ಚಗಿಡೋ ಈ ಪಾನೀಯ ಕುಡೀರಿ

ಚೀಸ್ ಟೀ (Cheese Tea) : ಶುಂಠಿ, ಏಲಕ್ಕಿ ಸೇರಿದಂತೆ ಮಸಾಲಾ ಟೀ ಟ್ರೈ ಮಾಡಾಗಿದೆ ಎನ್ನುವವರು ಚೀಸ್ ಟೀ ಟ್ರೈ ಮಾಡಬಹುದು. ಟೀ ಗೆ ಚೀಸ್ ಹಾಕಿ ಬಿಸಿ ಮಾಡಿದ್ರೆ ಚೀಸ್ ಟೀ ಸಿದ್ಧವಾಗುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks