ನಿಮ್ಮ ಮನೆಯ ಸಬ್ಬಕ್ಕಿ ಪಾಯಸ 'ಮಾಸ್ಟರ್ ಚೆಫ್' ಶೈಲಿಯಲ್ಲಿ ಬರಬೇಕೆ? ಇಲ್ಲಿದೆ ಒಂದು ಸಿಂಪಲ್ & ಸೂಪರ್ ಸೀಕ್ರೆಟ್!

Published : Mar 19, 2026, 03:35 PM IST
Sago Kheer

ಸಾರಾಂಶ

ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಮತ್ತು ಸ್ವಲ್ಪ ಏಲಕ್ಕಿ ಪುಡಿ ಸೇರಿಸಿದರೆ ಆ ಘಮಕ್ಕೆ ಮನೆಯವರೆಲ್ಲ ಅಡುಗೆ ಮನೆಗೆ ಓಡಿ ಬರುವುದು ಖಚಿತ! ಈ ಬಾರಿ ಪಾಯಸ ಮಾಡುವಾಗ ಕೆಳಗೆ ಸ್ಟೋರಿಯಲ್ಲಿ ಹೇಳಿರುವ ಈ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಳ್ಳಿ ಮತ್ತು ಮನೆಯವರಿಂದ 'ವಾಹ್' ಎನಿಸಿಕೊಳ್ಳಿ..

ಸಬ್ಬಕ್ಕಿ ಪಾಯಸ ಹೀಗೆ ಮಾಡಿ

ಬೆಂಗಳೂರು: ಹಬ್ಬ ಹರಿದಿನಗಳಿರಲಿ ಅಥವಾ ಮನೆಯಲ್ಲಿ ಯಾವುದಾದರೊಂದು ಸಂಭ್ರಮವಿರಲಿ, ದಕ್ಷಿಣ ಭಾರತದ ಮನೆಗಳಲ್ಲಿ 'ಪಾಯಸ' ಇಲ್ಲದಿದ್ದರೆ ಆ ಹಬ್ಬ ಪೂರ್ಣವಾಗುವುದೇ ಇಲ್ಲ. ಅದರಲ್ಲಿಯೂ ಮುತ್ತಿನಂತಿರುವ 'ಸಬ್ಬಕ್ಕಿ ಪಾಯಸ' ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಕ್ಕಳು, ದೊಡ್ಡವರು ಎನ್ನದೇ ಎಲ್ಲರೂ ಇಷ್ಟಪಟ್ಟು ಸವಿಯುವ ಈ ಸಿಹಿ ಖಾದ್ಯವನ್ನು ಮಾಡುವುದು ಒಂದು ಕಲೆ. ಆದರೆ, ಹಲವು ಬಾರಿ ಸಬ್ಬಕ್ಕಿ ಸರಿಯಾಗಿ ಬೇಯದೆ ಅಂಟಂಟಾಗುವುದು ಅಥವಾ ಸರಿಯಾದ ರುಚಿ ಸಿಗದಿರುವುದು ಅಡುಗೆ ಮನೆಯಲ್ಲಿ ಕಾಡುವ ದೊಡ್ಡ ತಲೆನೋವು.

ಆದರೆ ಚಿಂತೆ ಬಿಡಿ! ನಿಮ್ಮ ಸಬ್ಬಕ್ಕಿ ಪಾಯಸವನ್ನು (Sago Kheer) ಹೋಟೆಲ್ ಶೈಲಿಯಲ್ಲಿ ಅಥವಾ ಅಜ್ಜಿಯ ಕೈರುಚಿಯಂತೆ ಮಾಡುವ ಒಂದು ಸಣ್ಣ ಟ್ವಿಸ್ಟ್ ಇಲ್ಲಿದೆ. ನಿಮ್ಮ ಅಡುಗೆಯ ಫ್ಲೇವರ್ ಅನ್ನೇ ಬದಲಿಸುವ ಆ ಮ್ಯಾಜಿಕ್ ಟಿಪ್ಸ್ ಏನು ಗೊತ್ತಾ? ಓದಿ...

ಹುರಿಯುವುದರಲ್ಲಿದೆ ಅಸಲಿ ಮ್ಯಾಜಿಕ್!

ಸಾಮಾನ್ಯವಾಗಿ ಎಲ್ಲರೂ ಸಬ್ಬಕ್ಕಿಯನ್ನು ನೇರವಾಗಿ ತೊಳೆದು ನೀರಿಗೆ ಹಾಕುತ್ತಾರೆ. ಆದರೆ ಈ ಬಾರಿ ಒಂದು ಸಣ್ಣ ಬದಲಾವಣೆ ಮಾಡಿ ನೋಡಿ. ಪಾಯಸ ಮಾಡಲು ಸಿದ್ಧತೆ ನಡೆಸುವ ಮೊದಲೇ, ಸಬ್ಬಕ್ಕಿಯನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಕಡಿಮೆ ಉರಿಯಲ್ಲಿ (Low Flame) ಚೆನ್ನಾಗಿ ಹುರಿದುಕೊಳ್ಳಿ. ಅದು ಸ್ವಲ್ಪ ಕೆಂಪಾಗಿ ಹದವಾಗಿ ಪರಿಮಳ ಬರಲು ಪ್ರಾರಂಭಿಸಿದಾಗ ಉರಿ ಆರಿಸಿ. ಹೀಗೆ ಮಾಡುವುದರಿಂದ ಸಬ್ಬಕ್ಕಿ ಪಾಯಸದಲ್ಲಿ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ ಮತ್ತು ತಿನ್ನುವಾಗ ವಿಶಿಷ್ಟವಾದ ಸ್ವಾದ ನೀಡುತ್ತದೆ.

ನೆನೆಸಿ ಮತ್ತು ಹದವಾಗಿ ಬೇಯಿಸಿ:

ಹುರಿದ ಸಬ್ಬಕ್ಕಿಯನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ. ಇದರಿಂದ ಸಬ್ಬಕ್ಕಿ ಮೃದುವಾಗುತ್ತದೆ ಮತ್ತು ಬೇಗನೆ ಬೇಯುತ್ತದೆ. ನಂತರ ಒಂದು ಕುಕ್ಕರ್ ಅಥವಾ ಅಗಲವಾದ ಪಾತ್ರೆಯಲ್ಲಿ ಸಬ್ಬಕ್ಕಿಯನ್ನು ಹದವಾಗಿ ಬೇಯಿಸಿಕೊಳ್ಳಿ. ಸಬ್ಬಕ್ಕಿ ಮುತ್ತಿನಂತೆ ಪಾರದರ್ಶಕವಾಗಿ ಕಂಡಾಗ ಅದು ಬೆಂದಿದೆ ಎಂದರ್ಥ.

ಸಕ್ಕರೆಗೆ ಗುಡ್ ಬೈ ಹೇಳಿ, ಬೆಲ್ಲಕ್ಕೆ ಜೈ ಅನ್ನಿ!

ಈ ಪಾಯಸದ ಹೈಲೈಟ್ ಅಂದರೆ ಅದು 'ಬೆಲ್ಲ'. ಹೌದು, ಪಾಯಸದ ರುಚಿಯನ್ನು ದುಪ್ಪಟ್ಟು ಮಾಡಬೇಕೆಂದರೆ ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇರಿಸಿ. ಬೆಲ್ಲವು ಪಾಯಸಕ್ಕೆ ಕೇವಲ ಸಿಹಿ ನೀಡುವುದಲ್ಲದೆ, ಒಂದು ಸುಂದರವಾದ ಕಂದು ಬಣ್ಣ ಮತ್ತು ಸಾಂಪ್ರದಾಯಿಕ ಸ್ವಾದವನ್ನು ನೀಡುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಬೆಲ್ಲವೇ ಶ್ರೇಷ್ಠ.

ಕೊನೆಯದಾಗಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಮತ್ತು ಸ್ವಲ್ಪ ಏಲಕ್ಕಿ ಪುಡಿ ಸೇರಿಸಿದರೆ ಆ ಘಮಕ್ಕೆ ಮನೆಯವರೆಲ್ಲ ಅಡುಗೆ ಮನೆಗೆ ಓಡಿ ಬರುವುದು ಖಚಿತ! ಈ ಬಾರಿ ಪಾಯಸ ಮಾಡುವಾಗ ಈ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಳ್ಳಿ ಮತ್ತು ಮನೆಯವರಿಂದ 'ವಾಹ್' ಎನಿಸಿಕೊಳ್ಳಿ. ಅಡುಗೆ ಎಂಬುದು ಬರೀ ಕೆಲಸವಲ್ಲ, ಅದು ಪ್ರೀತಿಯ ಕಲೆ ಎಂಬುದು ಈ ಪಾಯಸದ ಸವಿಯಲ್ಲೇ ಅಡಗಿದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಪರಿಚಿತರ ತಿನಿಸಿಗೆ ಕೈಚಾಚಿದ ಮುದ್ದು ಕಂದ: ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ
ಬೇಸಿಗೆಯಲ್ಲಿ ಬೆಂಡೆಕಾಯಿ, ತೊಂಡೆಕಾಯಿ ಫ್ರೆಶ್ ಆಗಿರಲು ಈ 2 ಟಿಪ್ಸ್ ಬಳಸಿ