ಸುತ್ತಿಗೆಯಲ್ಲಿ ಹೊಡೆದ್ರೂ ಒಡೀತಿಲ್ಲ ಈ ಮೊಟ್ಟೆ, ಏನಿದರ ಮರ್ಮ..?

By Suvarna News  |  First Published Oct 3, 2020, 7:08 PM IST

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಿತ್ರ ನಡೆಯುತ್ತಲೇ ಇರುತ್ತದೆ. ಈ ಬಾರಿ ಏನಾಗಿದೆ ನೋಡಿ


ಇತ್ತೀಚೆಗಂತೂ ಕ್ರಿಯೇಟಿವಿಟಿ ಹೆಚ್ಚಾಗ್ತಾನೇ ಇದೆ. ಸೂಪ್‌ನಂತಹ ಕೇಕ್‌ನಿಂದ, ಐಸ್‌ಕ್ರೀಂ ವಡಾಪಾವ್, ಚಾಕಲೇಟ್ ಪಾನಿಪೂರಿ.. ಅಬ್ಬಾ ಒಂದಾ ಎರಡಾ..! ಲಾಕ್‌ಡೌನ್ ಟೈಂನಲ್ಲಿ ಬರೀ ಪ್ರಯೋಗಗಳೇ ನಡೆದಿವೆ.

ಇಂತಹ ವಿಚಿತ್ರಗಳೆಲ್ಲ ನಡೆದಾಗ ಅವುಗಳನ್ನು ವೈರಲ್ ಮಾಡೋದು ಸೋಷಿಯಲ್ ಮೀಡಿಯಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಎಲ್ಲಿ ಏನು ವಿಶೇಷವಾದಾಗಲೂ ಅದು ಸೋಷಿಯಲ್ ಮೀಡಿಯಾ ಮೂಲಕ ಜನರನ್ನು ತಲುಪುತ್ತದೆ.

Tap to resize

Latest Videos

ತ್ವಚೆ ಸೌಂದರ್ಯ: ಖಾಲಿ ಹೊಟ್ಟೆಗೆ ಸಮಂತಾ ಕುಡಿಯೋ ಸೀಕ್ರೆಟ್ ಡ್ರಿಂಕ್ ಇದು

ಇತ್ತೀಚೆಗೆ ಒಡೆಯಲಾಗದ ಮೊಟ್ಟೆಯೊಂದು ಸೌಂಡ್ ಮಾಡ್ತಿದೆ. ಅಪಪ್ಇ ತಪ್ಪಿ ಜೋರಾಗಿ ತಳ್ಳಿದ್ರೇನೇ ಒಡೆಯೋ ಮೊಟ್ಟೆ ಸುತ್ತಿಗೇಲಿ ಹೊಡೆದರೂ ಒಡೆಯಲ್ಲ. ಅಯ್ಯೋ ಇದೇನ್ ವಿಚಿತ್ರಾ ಅಂತೀರಾ..? ಸ್ವಲ್ಪ ಗೊಂದಲವಾಗೋದು ನಿಜ.

 
 
 
 
 
 
 
 
 
 
 
 
 

Unbreakable egg🍳🍳🍳 🎥 @francomelanieh

A post shared by Satisfying Posts 💖 (@satisfyingxtimes) on Sep 23, 2020 at 8:05am PDT

ಈ ಅನಿಮೇಟೆಡ್ ವಿಡಿಯೋ ಆನ್‌ಲೈನ್ ಸಾಫ್ಟ್‌ವೇರ್‌ನಲ್ಲಿ ಎಡಿಟ್ ಮಾಡಿದಂತಿದೆ. ಹ್ಯಾಮರ್‌ನಿಂದ ಮೊಟ್ಟೆಗೆ ಜೋರಾಗಿ ಹೊಡೆದರೂ ಮೊಟ್ಟೆ ಮಾತ್ರ ಒಡೆಯುತ್ತಿಲ್ಲ. ಆದ್ರೆ ಮೊಟ್ಟೆಗೆ ಗುರಿ ಮಾಡಿ ಹೊಡೆದ ಹ್ಯಾಮರ್ ತುಂಡಾಗಿದೆ. ಎಂಥಾ ಮೊಟ್ಟೆಯಪ್ಪಾ ಇದು..!

ಮೆಮೊರಿ ಪವರ್ ಹೆಚ್ಚಿಸುತ್ತೆ ಬ್ಲೂ ಪೀ ಟೀ: ತಯಾರಿಸೋದು ಸುಲಭ

ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದ್ದು, ಇದಕ್ಕೆ 72 ಸಾವಿರ ಲೈಕ್ಸ್ ಬಂದಿದೆ. ಇದನ್ನು ಜರ್ಮನಿ ಮೂಲದ ಫ್ರಾಂಕೋ ಮೆಲಾನಿ ಅನಿಮೇಟ್ ಮಾಡಿದ್ದಾರೆ. ವಿಡಿಯೋ ಮೊದಲ ನೋಟಕ್ಕೆ ನೈಜ್ಯ ವಿಡಿಯೋದಂತೆಯೇ ಕಾಣಿಸುತ್ತದೆ. ಕೆಲವರು ಈ ಮೊಟ್ಟೆ ನೋಕಿಯಾ ಎಂದಿದ್ದರೆ, ಇದು ಬೇಯಿಸಿದ ಮೊಟ್ಟೆ ಎಂದಿದ್ದಾರೆ.

click me!