ರೋಸ್ ಡೇಗೆ ಚೆನ್ನಾಗಿರೋ ಗುಲಾಬಿ ಹೂ ಕೊಟ್ಟಾಯ್ತು. ಪ್ರಪೋಸ್ ಡೇ (Propose Day) ದಿನ ಹೇಗೂ ಭಯಪಟ್ಕೊಂಡೇ ಪ್ರಪೋಸ್ ಮಾಡಿದ್ದೇ ಆಯ್ತು. ಚಾಕೊಲೇಟ್ ಡೇ (Chocolate Day) ದಿನ ಕೂಡಾ ಪರ್ಫೆಕ್ಟ್ ಆಗ್ಬೇಕಲ್ಲಾ. ಹಾಗಿದ್ರೆ ನೀವ್ಯಾಕೆ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಕೈಯಾರೆ ತಯಾರಿಸಿದ ಚಾಕೋಲೇಟ್ ರೆಸಿಪಿ (Recipe) ಟೇಸ್ಟ್ ಮಾಡೋಕೆ ಕೊಡ್ಬಾರ್ದು. ಮಾಡೋದಂತೂ ತುಂಬಾ ಈಝಿ. ನಾವ್ ಹೇಳಿಕೊಡ್ತೀವಿ.
ಫೆಬ್ರವರಿ 14ನ್ನು ಪ್ರೇಮಿಗಳ ದಿನ (Valentines Day)ವೆಂದು ಆಚರಿಸಲಾಗುತ್ತದೆ. ವಾರಕ್ಕೆ ಮುಂಚಿತವಾಗಿ ರೋಸ್ ಡೇ, ಟೆಡ್ಡೀ ಡೇ, ಪ್ರಪೋಸ್ ಡೇ ಎಂದು ಹಲವು ಸೆಲಬ್ರೇಷನ್ ಮಾಡಲಾಗುತ್ತಿದೆ. ಪ್ರೇಮಿಗಳ ವಾರ ಫೆಬ್ರವರಿ 7ರಿಂದ ಪ್ರಾರಂಭವಾಗಿದೆ. ಮೊದಲ ದಿನ ರೋಸ್ ಡೇ (Rose Day)ಯಾಗಿರುವ ಕಾರಣ ಪ್ರೀತಿಸುವ ಜೋಡಿಗಳು ಪರಸ್ಪರ ರೋಸ್ ನೀಡಿ ಖುಷಿಪಟ್ಟಿದ್ದಾರೆ. ರೋಸ್ ಡೇಯಂದು ಪ್ರೀತಿ ಪಾತ್ರರಿಗೆ ಗುಲಾಬಿ ಹೂ ನೀಡಿ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ (Propose Day). ಫೆಬ್ರವರಿ 8ರಂದು ಪ್ರಪೋಸ್ ಡೇಯನ್ನು ಆಚರಿಸಲಾಗಿದೆ. ಇದು ಪ್ರೇಮ ನಿವೇದನ ಮಾಡಿಕೊಳ್ಳಲು ಮೀಸಲಾಗಿರುವ ದಿನವಾಗಿದೆ. ಕ್ರಶ್, ಅಟ್ರ್ಯಾಕ್ಷನ್ ಇದ್ದವರು ಈ ದಿನ ಪ್ರಪೋಸ್ ಮಾಡಿ ಖುಷಿಪಟ್ಟಿದ್ದಾರೆ.
ಪ್ರೇಮಿಗಳ ವಾರದ ಮೂರನೇ ದಿನ ಫೆಬ್ರವರಿ 9ರಂದು ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತದೆ. ಲವರ್ಸ್ ಪರಸ್ಪರ ಚಾಕೊಲೇಟ್‍ಗಳನ್ನು ನೀಡಿ ಖುಷಿಪಡುತ್ತಾರೆ. ನೀವು ಅಡುಗೆ ಇಷ್ಟಪಡುವವರಾಗಿದ್ದರೆ ಹೆಚ್ಚು ಆಸಕ್ತಿಯಿಂದ ಚಾಕೊಲೇಟ್ ಡೇ (Chocolate Day) ಮಾಡಬಹುದಾಗಿದೆ. ಒಂದು ವೇಳೆ, ನಿಮ್ಮ ಅಡುಗೆ ಅಥವಾ ಬೇಕಿಂಗ್ ಕೌಶಲ್ಯದಿಂದ ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಲು ನೀವು ಯೋಚನೆ ಮಾಡುತ್ತಿದ್ದರೆ ಇದು ಸೂಕ್ತ ದಿನ. ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾದ ಕೆಲವು ಪಾಕವಿಧಾನಗಳು ಇಲ್ಲಿವೆ.
undefined
Winter Drinks: ಚಳಿಗಾಲಕ್ಕೆ ಹೇಳಿ ಮಾಡಿಸಿದ ಹಾಟ್ ಚಾಕೊಲೇಟ್ ಡ್ರಿಂಕ್ಸ್
ಚಾಕೊಲೇಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು
ಚಾಕೊಲೇಟ್ ಸಿರಪ್ 3 ಟೀ ಸ್ಪೂನ್
1 ಕಪ್ ಹಾಲು
1 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್
2 ಸ್ಪೂಪ್ ವೆನಿಲ್ಲಾ ಐಸ್ ಕ್ರೀಂ
1 ಕಿಟ್‌ಕ್ಯಾಟ್ ಬಾರ್
4-6 ದೊಡ್ಡ ಐಸ್ ಕ್ಯೂಬ್‍ಗಳು
ಮಾಡುವ ವಿಧಾನ
2 ಚಮಚ ಚಾಕೊಲೇಟ್ ಸಿರಪ್, 1 ಸ್ಕೂಪ್ ಐಸ್ ಕ್ರೀಮ್, ವೆನಿಲ್ಲಾ ಎಸೆನ್ಸ್ ಮತ್ತು ಐಸ್ ಕ್ಯೂಬ್‌ಗಳನ್ನು ಬ್ಲೆಂಡರ್‌ನಲ್ಲಿ ಸೇರಿಸಿ. ಐಸ್ ಕ್ಯೂಬ್‌ಗಳು ನುಣ್ಣಗೆ ನಜ್ಜುಗುಜ್ಜಾಗುವವರೆಗೆ ಮಿಶ್ರಣ ಮಾಡಿ. ನಂತರ ಹಾಲು ಸೇರಿಸಿ ಮತ್ತು ಎಲ್ಲವನ್ನೂ ಮತ್ತೆ ಮಿಶ್ರಣ ಮಾಡಿ. ಇದಕ್ಕೆ ಒಂದು ದೊಡ್ಡ ಚಮಚ ಚಾಕೊಲೇಟ್ ಸಿರಪ್ ಹಾಕಿ. ಮಿಲ್ಕ್‌ಶೇಕ್ ಅನ್ನು ಗ್ಲಾಸ್‌ಗೆ ಸುರಿಯಿರಿ ಮತ್ತು ಅದರ ಮೇಲೆ ಒಂದು ಸ್ಕೂಪ್ ಐಸ್ ಕ್ರೀಂ ಹಾಕಿ. ಅಲಂಕಾರಕ್ಕಾಗಿ ಐಸ್ ಕ್ರೀಮ್ ಮೇಲೆ ಕಿಟ್ ಕಾಟ್ ತುಂಡುಗಳನ್ನು ಇರಿಸಿ.
ಮೊಟ್ಟೆಯಿಲ್ಲದ ಚಾಕೊಲೇಟ್ ಕೇಕ್
ಬೇಕಾಗುವ ಸಾಮಗ್ರಿಗಳು
1 ಕಪ್ ಹಿಟ್ಟು
1/4 ಕಪ್ ಕೋಕೋ ಪೌಡರ್
1 ಟೀ ಸ್ಪೂನ್ ಅಡುಗೆ ಸೋಡಾ
1/2 ಟೀ ಸ್ಪೂನ್ ಉಪ್ಪು
ವಿನೇಗರ್ ಸ್ಪಲ್ಪ
1 ಟೀ ಸ್ಪೂನ್ ಕಾಫಿ ಪೌಡರ್
3/4 ಕಪ್ ಹಾಲು
1/2 ಟೀ ಸ್ಪೂನ್ ವಿನೇಗರ್
3/4 ಕಪ್ ಸಕ್ಕರೆ
1/4 ಕಪ್ ಎಣ್ಣೆ
ಮಾಡುವ ವಿಧಾನ
ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ. ಇದಕ್ಕೆ ಹಾಲು ಮತ್ತು ವಿನೇಗರ್ ಮಿಶ್ರಣ ಮಾಡಿ ಮತ್ತು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಹಿಟ್ಟನ್ನು ಜರಡಿ ಹಿಡಿದುಕೊಳ್ಳಿ. ಅಡುಗೆ ಸೋಡಾ, ಕೋಕೋ ಪೌಡರ್ ಮತ್ತು ಉಪ್ಪು ಸೇರಿಸಿ ಪಕ್ಕಕ್ಕೆ ಇರಿಸಿ. ದೊಡ್ಡ ಬಟ್ಟಲಿನಲ್ಲಿ ಎಣ್ಣೆ ಸುರಿದುಕೊಂಡು ಇದಕ್ಕೆ ಸಕ್ಕರೆ, ಹಾಲು, ವಿನೇಗರ್ ಮಿಶ್ರಣ ಸೇರಿಸಿ. ಮಿಶ್ರಣಕ್ಕೆ ಜರಡಿ ಹಿಟ್ಟನ್ನು ಸೇರಿಸಿ. ನಯವಾದ ಹಿಟ್ಟನ್ನು ರೂಪಿಸಲು ಮಿಶ್ರಣವನ್ನು ಸ್ಪಲ್ಪ ನೀರು, ಕಾಫಿ ಪೌಡರ್ ಸೇರಿಸಿ ಬ್ಯಾಟರ್ ಮಾಡಿ. ಈ ಮಿಶ್ರಣವನ್ನು ಗ್ರೀಸ್ ಮಾಡಿದ ಬೇಕಿಂಗ್ ಟಿನ್‌ಗೆ ವರ್ಗಾಯಿಸಿ ಬೇಯಿಸಿ .
Propose Day: ಪ್ರಪೋಸ್ ಮಾಡುವಾಗ 'ನೋ' ಹೇಳೋಕೆ ಹಿಂಜರಿಕೆಯಾ ? ಈ ಟ್ರಿಕ್ಸ್ ಯೂಸ್ ಮಾಡಿ
ಡಾರ್ಕ್ ಚಾಕೊಲೇಟ್ ಪುಡ್ಡಿಂಗ್
ಬೇಕಾಗುವ ಪದಾರ್ಥಗಳು
60 ಗ್ರಾಂ ಬೆಣ್ಣೆ
2 ಟೇಬಲ್ ಸ್ಪೂನ್ ಕೋಕೋ ಪೌಡರ್
100 ಗ್ರಾಂ ಡಾರ್ಕ್ ಚಾಕೊಲೇಟ್
2 ಮೊಟ್ಟೆಗಳು
100 ಗ್ರಾಂ ಸಕ್ಕರೆ
½ ಟೀಸ್ಪೂನ್ ಮಾಲ್ಟ್ ಪುಡಿ
100 ಮಿಲಿ ಡಬಲ್ ಕ್ರೀಮ್
ಸ್ಪಲ್ಪ ಚೆರಿ ಹಣ್ಣು
ಸ್ಪಲ್ಪ ಪಿಸ್ತಾ
ಮಾಡುವ ವಿಧಾನ
ಬೆಣ್ಣೆ ಮತ್ತು ಕೋಕೋ ಪೌಡರ್ ಮಿಕ್ಸ್ ಮಾಡಿ ಪಕ್ಕಕ್ಕೆ ಇರಿಸಿ. ಒಲೆಯಲ್ಲಿ 200 ಡಿಗ್ರಿಗಳಿಗೆ ಬಿಸಿ ಮಾಡಿ. ಕುದಿಯುವ ನೀರಿನ ಪ್ಯಾನ್ ಮೇಲೆ ಬಟ್ಟಲಿನಲ್ಲಿ ಬೆಣ್ಣೆ ಮತ್ತು ಚಾಕೊಲೇಟ್ ಕರಗಿಸಿ. ಪ್ರತ್ಯೇಕ ಬಟ್ಟಲಿನಲ್ಲಿ, ಮೊಟ್ಟೆ ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇರಿಸಿ, ನಂತರ ಮಾಲ್ಟ್ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಚಾಕೊಲೇಟ್ ಮಿಶ್ರಣ ಮಾಡಿಕೊಳ್ಳಿ. ಕ್ರೀಮ್, ಸಕ್ಕರೆ ಮತ್ತು ಮಾಲ್ಟ್ ಪುಡಿಯನ್ನು ಸೇರಿಸಿ. ಇದನ್ನು 14 ನಿಮಿಷ ಬೇಯಿಸಿ. ಪುಡಿಂಗ್‌ಗಳನ್ನು ಮೇಲಿನಿಂದ ಕ್ರೀಮ್, ಚೆರ್ರಿಗಳು ಮತ್ತು ಪಿಸ್ತಾಗಳಿಂದ ಅಲಂಕರಿಸಿ.