ಗೋಧಿ ಹಿಟ್ಟು ಕಲಸುವಾಗ ಈ ಟ್ರಿಕ್ ಫಾಲೋ ಮಾಡ್ರಿ, ಒಂದು ಹನಿ ಎಣ್ಣೆ ಕುಡಿಯದೆ ಬಲೂನ್ ತರ ಉಬ್ಬುತ್ತೆ ಪೂರಿ

Published : Nov 15, 2026, 11:30 AM IST
Poori

ಸಾರಾಂಶ

Wheat poori recipe: ಬೆಳಗಿನ ತಿಂಡಿಗೆ ಬಿಸಿಬಿಸಿ, ಬಲೂನ್ ತರ ಉಬ್ಬುವ ಸಾಫ್ಟ್ ಗೋಧಿ ಪೂರಿ ಜೊತೆ ಹೋಟೆಲ್ ಶೈಲಿಯ ಮಿಕ್ಸ್ ವೆಜ್ ಸಾಗು ಇದ್ರೆ ಆ ಮಜಾನೇ ಬೇರೆ! ಅಂದಹಾಗೆ ಎಣ್ಣೆ ಕುಡಿಯದ, ಪರ್ಫೆಕ್ಟ್ ಪೂರಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ.

ಅನೇಕರಿಗೆ ಮನೆಯಲ್ಲಿ ಗೋಧಿ ಪೂರಿ ಮಾಡಿದರೆ ಗಟ್ಟಿಯಾಗುವುದು, ಎಣ್ಣೆ ಕುಡಿಯುವುದು ಅಥವಾ ಬಲೂನಿನಂತೆ ಉಬ್ಬದೆ ಚಪ್ಪಟೆಯಾಗುವ ಸಮಸ್ಯೆ ಇರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಹೋಟೆಲ್‌ನಲ್ಲಿ ಮಾಡುವಂತೆ ಪೂರಿ ಮೆತ್ತಗೆ ಉಬ್ಬಿ ಬರಲು ಮತ್ತು ಅದಕ್ಕೆ ಹೇಳಿಮಾಡಿಸಿದ ಹೋಟೆಲ್ ಸ್ಟೈಲ್ ಸಾಗು ಮಾಡುವ ಸೀಕ್ರೆಟ್ ವಿಧಾನ ಕೊಡಲಾಗಿದೆ.

ಬೇಕಾಗುವ ಸಾಮಗ್ರಿಗಳು

ಪೂರಿ ಹಿಟ್ಟಿಗೆ
ಗೋಧಿ ಹಿಟ್ಟು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1 ರಿಂದ 2 ಚಮಚ (ಹಿಟ್ಟಿಗೆ ಹಾಕಲು)
ನೀರು – ಹಿಟ್ಟು ಕಲಸಲು ಬೇಕಾದಷ್ಟು

ಕರಿಯಲು ಎಣ್ಣೆ
ಸಾಗು / ಮಸಾಲಾಗೆ
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ – 2 (ಪೇಸ್ಟ್ ಅಥವಾ ಸಣ್ಣಗೆ ಹೆಚ್ಚಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 4 ರಿಂದ 5
ಕಾಯಿತುರಿ – 1/2 ಕಪ್
ತರಕಾರಿಗಳು (ಆಲೂಗಡ್ಡೆ, ಬೀನ್ಸ್, ಕ್ಯಾರೆಟ್) – 1 ಕಪ್
ಅರಿಶಿನ ಪುಡಿ – 1/2 ಚಮಚ
ಧನಿಯಾ (ಕೊತ್ತಂಬರಿ) ಪುಡಿ – 1 ಚಮಚ
ಗರಂ ಮಸಾಲಾ – 1/2 ಚಮಚ

ಎಣ್ಣೆ – ಒಗ್ಗರಣೆಗೆ
ಜೀರಿಗೆ, ಸಾಸಿವೆ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಹಂತ 1: ಪೂರಿ ಹಿಟ್ಟು ಕಲಸುವುದು
ಒಂದು ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 1-2 ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹಿಟ್ಟನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ (ಹದವಾಗಿ) ಕಲಸಿಕೊಳ್ಳಿ (ತುಂಬಾ ಮೆತ್ತಗಿದ್ದರೆ ಪೂರಿ ಎಣ್ಣೆ ಕುಡಿಯುತ್ತದೆ). ಹಿಟ್ಟನ್ನು ಚೆನ್ನಾಗಿ ನಾದಿ, 15 ರಿಂದ 20 ನಿಮಿಷಗಳ ಕಾಲ ಮುಚ್ಚಿ ನೆನೆಯಲು ಬಿಡಿ.

ಹಂತ 2: ಮಸಾಲಾ ಸಾಗು ತಯಾರಿಕೆ
ಮಿಕ್ಸಿ ಜಾರ್‌ಗೆ ಕಾಯಿತುರಿ, ಹಸಿಮೆಣಸಿನಕಾಯಿ ಮತ್ತು ಗರಂ ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಸಾಸಿವೆ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೆ ಬಾಡಿಸಿ.
ಈಗ ರುಬ್ಬಿದ ಕಾಯಿ-ಮಸಾಲೆ ಪೇಸ್ಟ್, ಅರಿಶಿನ, ಧನಿಯಾ ಪುಡಿ ಸೇರಿಸಿ ಎಣ್ಣೆ ತೇಲುವವರೆಗೆ ಚೆನ್ನಾಗಿ ಫ್ರೈ ಮಾಡಿ.
ನಂತರ ಟೊಮೆಟೊ ಪ್ಯೂರಿ, ಹೆಚ್ಚಿದ ತರಕಾರಿಗಳು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಮುಚ್ಚಳ ಮುಚ್ಚಿ ತರಕಾರಿಗಳು ಮೆತ್ತಗಾಗುವವರೆಗೆ ಚೆನ್ನಾಗಿ ಕುದಿಸಿ (ಎಣ್ಣೆ ಮೇಲೆ ತೇಲುವಾಗ ಗ್ಯಾಸ್ ಆಫ್ ಮಾಡಿ).

ಹಂತ 3: ಪೂರಿ ಲಟ್ಟಿಸಿ ಕರಿಯುವುದು
ನೆನೆಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.
ಒಣ ಹಿಟ್ಟನ್ನು ಜಾಸ್ತಿ ಬಳಸದೆ, ಲಟ್ಟಣಿಗೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಮಧ್ಯಮ ಗಾತ್ರದಲ್ಲಿ (ತುಂಬಾ ತೆಳುವಾಗಿ ಅಲ್ಲದಂತೆ, ತುಂಬಾ ದಪ್ಪವೂ ಇಲ್ಲದಂತೆ) ಸಮನಾಗಿ ಲಟ್ಟಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ (ಹೊಗೆ ಬರುವಷ್ಟು ಬಿಸಿಯಾಗಿರಬೇಕು).
ಬಿಸಿ ಎಣ್ಣೆಗೆ ಲಟ್ಟಿಸಿದ ಪೂರಿ ಹಾಕಿ, ಸೌಟಿನಿಂದ ಮೇಲ್ಭಾಗದಲ್ಲಿ ಲಘುವಾಗಿ ಒತ್ತಿದರೆ ಪೂರಿ ಬಲೂನಿನಂತೆ ಉಬ್ಬಿ ಬರುತ್ತದೆ.
ತಕ್ಷಣ ಮಗುಚಿ ಹಾಕಿ, ಎರಡು ಕಡೆ ಬಂಗಾರದ ಬಣ್ಣ ಬರುವವರೆಗೆ ಬೇಯಿಸಿ ತೆಗೆಯಿರಿ.

ಸಾಫ್ಟ್ ಪೂರಿಗೆ ಪ್ರಮುಖ ಟಿಪ್ಸ್
ಎಣ್ಣೆಯ ಬಿಸಿ: ಎಣ್ಣೆ ಸರಿಯಾಗಿ ಕಾದಿರದಿದ್ದರೆ ಪೂರಿ ಉಬ್ಬುವುದಿಲ್ಲ ಮತ್ತು ಎಣ್ಣೆ ಕುಡಿಯುತ್ತದೆ.
ಹಿಟ್ಟಿನ ಹದ: ಹಿಟ್ಟು ಚಪಾತಿಗಿಂತ ಸ್ವಲ್ಪ ಗಟ್ಟಿಯಾಗಿದ್ದರೆ ಪೂರಿ ಗರಿಗರಿಯಾಗಿ ಮತ್ತು ಸಾಫ್ಟ್ ಆಗಿ ಉಬ್ಬಿ ನಿಲ್ಲುತ್ತದೆ.
ಲಟ್ಟಿಸುವಾಗ: ಅಂಚುಗಳು ಮತ್ತು ಮಧ್ಯಭಾಗ ಸಮನಾಗಿ ಲಟ್ಟಿಸಬೇಕು. ಇಲ್ಲವೆಂದರೆ ಮಧ್ಯದಲ್ಲಿ ಹೆಚ್ಚು ಒತ್ತಿದರೆ ಪೂರಿ ಉಬ್ಬುವುದಿಲ್ಲ.
ಬಿಸಿಬಿಸಿಯಾದ ಸಾಫ್ಟ್ ಗೋಧಿ ಪೂರಿಯನ್ನು ಘಮಘಮಿಸುವ ತರಕಾರಿ ಸಾಗು ಜೊತೆ ಬಡಿಸಿದರೆ ಹೋಟೆಲ್ ರುಚಿಯನ್ನೂ ಮೀರಿಸುತ್ತದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವಂಗ ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಚ್ಚು ತಿಂದ್ರೆ ಏನಾಗುತ್ತೆ? ದಿನಕ್ಕೆ ಎಷ್ಟು ತಿನ್ನಬಹುದು?
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿಂದರೆ ಏನಾಗುತ್ತೆ? ಯಾರು ತಿನ್ನಬಾರದು? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ