
ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಸ್ಪರ್ಧೆಯಲ್ಲಿ ವಿಜೇತರಾಗಿ ಮುನ್ನಡೆಯಬೇಕೆಂದ್ರೆ ಹೊಸ ಹೊಸ ಪ್ರಯೋಗ ಅಗತ್ಯ. ಮಾರುಕಟ್ಟೆಯಲ್ಲೀಗ ನಾನಾ ಬಗೆಯ ಆಹಾರವನ್ನು ನೋಡ್ಬಹುದು. ತಯಾರಕರು ಗ್ರಾಹಕರನ್ನು ಸೆಳೆಯಲು ಕಾಂಬಿನೇಷನ್ ಬದಲಿಸಿ ಆಹಾರ ನೀಡ್ತಾರೆ. ಟಾಯ್ಲೆಟ್ ಆಕಾರದ ಬೌಲ್ ನಲ್ಲಿ ಆಹಾರ ಸರ್ವ್ ಮಾಡೋದ್ರಿಂದ ಹಿಡಿದು ಗ್ರಾಹಕರನ್ನು ಸೆಳೆಯಲು ಹೊಟೇಲ್ ಚಿತ್ರಣವನ್ನೇ ಆಕರ್ಷಕವಾಗಿ ಮಾಡುವ ಅನೇಕರಿದ್ದಾರೆ. ಹೊಸ ಸ್ಟೈಲ್, ಹೊಸ ವಿನ್ಯಾಸ ಸಾಮಾನ್ಯವಾಗಿ ಗ್ರಾಹಕರನ್ನು ಸೆಳೆಯುತ್ತದೆ. ಐಸ್ ಕ್ರೀಂ ವ್ಯಾಪಾರವೂ ಹಾಗೆ. ಮಾರುಕಟ್ಟೆಯಲ್ಲಿ ನಾನಾ ಬಗೆಯ ಐಸ್ ಕ್ರೀಂಗಳಿವೆ. ಒಂದೇ ಫ್ಲೇವರ್, ಒಂದೇ ರುಚಿ ಇರುವ ಐಸ್ ಕ್ರೀಂ ತಿಂದು ಗ್ರಾಹಕರಿಗೆ ಬೋರ್ ಆಗಿರುತ್ತೆ. ಹೊಸ ರುಚಿ ಟೇಸ್ಟ್ ಮಾಡಲು ಅವರು ಬಯಸ್ತಾರೆ. ಇದೇ ಕಾರಣಕ್ಕೆ ಐಸ್ ಕ್ರೀಂ ತಯಾರಕರು ಕೂಡ ಬಗೆ ಬಗೆಯ ಪ್ರಯೋಗ ಮಾಡ್ತಿರುತ್ತಾರೆ.
ಬೇಸಿಗೆ ಶುರುವಾಗ್ತಿದ್ದಂತೆ ಐಸ್ ಕ್ರೀಂ (Ice Cream) ಗೆ ಎಲ್ಲಿಲ್ಲದ ಬೇಡಿಕೆ. ಈಗ ಜನರು ದಿನದಲ್ಲಿ ಒಮ್ಮೆಯಾದ್ರೂ ಐಸ್ ಕ್ರೀಂ ತಿಂದು ದೇಹ ತಂಪು ಮಾಡಿಕೊಳ್ಳಲು ಮುಂದಾಗ್ತಾರೆ. ದಿನಕ್ಕೊಂದು ಹೊಸ ಟೇಸ್ಟ್ (Taste) ತಿನ್ನಲು ಅವರು ಇಷ್ಟಪಡ್ತಾರೆ. ಐಸ್ ಕ್ರೀಂ ಟೇಸ್ಟ್ ಮಾತ್ರವಲ್ಲ ವಿನ್ಯಾಸ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ರುಚಿ ಹೇಗೆ ಇದ್ರೂ ಜನರು, ವಿನ್ಯಾಸ ಆಕರ್ಷಕವಾಗಿದ್ರೆ ಅದನ್ನು ತಿನ್ನಲು ಬಯಸ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಐಸ್ ಕ್ರೀಂ ವಿನ್ಯಾಸವೊಂದು ಎಲ್ಲರ ಗಮನ ಸೆಳೆದಿದೆ. ಅದನ್ನು ನೋಡಿ, ತಿನ್ನಬೇಕೋ ಬೇಡ್ವೋ ಎನ್ನುವ ಅನುಮಾನದಲ್ಲಿ ಜನರಿದ್ದಾರೆ.
ಕರ್ಬೂಜ ಬೀಜದಲ್ಲೂ ಇಷ್ಟೆಲ್ಲಾ ಪವರ್ ಇದ್ಯಾ? ಇನ್ನಾದ್ರೂ ಎಸೆಯೋ ಮುನ್ನ ಯೋಚಿಸಿ
ಐಸ್ ಕ್ರೀಂ ನೋಡಿದ ತಕ್ಷಣ ತಿನ್ನುವ ಆಸೆಯಾಗ್ಬೇಕು. ಆದ್ರೆ ಈ ಐಸ್ ಕ್ರೀಂ ನೋಡಿದ ತಕ್ಷಣ ತಿನ್ನುವ ಆಸೆಯಾಗುವ ಬದಲು ಭಯ ಹುಟ್ಟಿಕೊಳ್ಳುತ್ತದೆ. ಯಾಕೆಂದ್ರೆ ಈ ಐಸ್ ಕ್ರೀಂನಲ್ಲಿ ಮಗು (baby) ವಿನ ಭಯಾನಕ ಮುಖವಿದೆ. ಭೂತದ ಮುಖ ಅಂದ್ರೆ ತಪ್ಪಾಗೋದಿಲ್ಲ. ಇದನ್ನು ಜನರು ಭೂತದ ಐಸ್ ಕ್ರೀಂ ಎಂದು ಕರೆಯುತ್ತಿದ್ದಾರೆ.
@creepycum ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಐಸ್ ಕ್ರೀಮ ವಿಡಿಯಫೋ ಹಾಗೂ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದೊಂದು ಕೋನ್ ಐಸ್ ಕ್ರೀಂ ಆಗಿದ್ದು, ಅದ್ರ ಮೇಲೆ ಕ್ರೀಂ ಬದಲು ಮಕ್ಕಳ ಭಯಾನಕ ಮುಖವನ್ನು ನೋಡ್ಬಹುದು. ಬೋಳು ತಲೆಯ ಮಕ್ಕಳ ಕಣ್ಣು ದೊಡ್ಡದಾಗಿದ್ದು, ಭಯ ಹುಟ್ಟಿಸುವಂತಿದೆ. ಮಕ್ಕಳ ತಲೆಯ ಮೇಲೆ ಕೆಂಪು ಬಣ್ಣ ಮತ್ತು ಚೆರ್ರಿ ಇದೆ. ಇದು ತಿನ್ನಬಹುದಾದ ಐಸ್ ಕ್ರೀಂ ಹೌದೆ, ಇಲ್ಲವೇ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿಲ್ಲ. ಆದರೆ ಮಕ್ಕಳ ಕಣ್ಣುಗಳು ಮೇಲ್ಮುಖವಾಗಿ ನೋಡುತ್ತಿರುವುದನ್ನು ನೋಡಿದರೆ, ಇದನ್ನು ನೋಡಿದ ನಂತರ ಜನರಿಗೆ ಹಸಿವಾಗುವ ಬದಲು ಭಯವಾಗುತ್ತದೆ ಎಂಬುದು ಸ್ಪಷ್ಟ. ಈ ವಿಡಿಯೋಕ್ಕೆ ವುಡ್ಸ್ ಆಫ್ ಟೆರರ್ ಎಂದು ಶೀರ್ಷಿಕೆ ಹಾಕಲಾಗಿದೆ. ವುಡ್ಸ್ ಆಫ್ ಟೆರರ್, ಅಮೆರಿಕಾದ ಉತ್ತರ ಕೆರೊಲಿನಾದ ಗ್ರೀನ್ಸ್‌ಬೊರೊದಲ್ಲಿರುವ ದೆವ್ವದ ಮನೆಯಾಗಿದೆ.
ಬಾಯಲ್ಲಿ ನೀರೂರಿಸೋ ಈ ತಿಂಡಿಗಳಿಂದಲೇ ರಾಮೇಶ್ವರಂ ಕೆಫೆ ಇಷ್ಟೊಂದು ಫೇಮಸ್!
ಈ ವಿಡಿಯೋ ಟಿಕ್ ಟಾಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ 1.4 ಕೋಟಿಗೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ಇಂಥ ಐಸ್ ಕ್ರೀಂ ತಯಾರಿಸಿದ ಜನರು ಕ್ರೂರ ಹೃದಯವನ್ನು ಹೊಂದಿದವರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ತುಂಬಾ ಅಸಹ್ಯಕರವಾಗಿ ಕಾಣುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ಮಕ್ಕಳಲ್ಲಿ ಕೆಟ್ಟ ಭಾವನೆ ಮೂಡಿಸುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.