
Lunch Box Food Ideas: ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿದಿನ ಹೊಸ ರೀತಿಯ, ಆರೋಗ್ಯಕರ, ಸುಲಭವಾಗಿ ಮಾಡೋ ತಿಂಡಿಗಳನ್ನ ಟಿಫನ್ ಬಾಕ್ಸ್‌ನಲ್ಲಿ ಹಾಕಿ ಕಳಿಸೋದು ತುಂಬಾ ಅಮ್ಮಂದಿರಿಗೆ ಸವಾಲಿನ ಕೆಲಸ. ಕೊನೆ ನಿಮಿಷದಲ್ಲಿ ಏನ್ ಮಾಡೋದು ಅಂತ ಯೋಚಿಸ್ತಿದ್ದೀರಾ? ಚಿಂತೆ ಬೇಡ! ನಿಮ್ಮ ಮಕ್ಕಳಿಗೆ ಇಷ್ಟ ಆಗೋ, ಆರೋಗ್ಯಕರ ಟಿಫನ್ ಬಾಕ್ಸ್ ರೆಸಿಪಿಗಳನ್ನ ಇಲ್ಲಿವೆ. ಈ ತಿಂಡಿಗಳನ್ನು ಮಕ್ಕಳು ಫುಲ್ ಖುಷಿಯಾಗುತ್ತಾರೆ. ಹಾಗೆ ಡಬ್ಬವನ್ನು ಖಾಲಿ ಮಾಡಿಕೊಂಡು ಮನೆಗೆ ಬರುತ್ತಾರೆ. ಕಡಿಮೆ ಸಮಯದಲ್ಲಿಯೇ ಮಕ್ಕಳ ಬಾಕ್ಸ್ ರೆಡಿ ಮಾಡಬಹುದು.
ರಾಗಿ ಸೇಮಿಯಾ ಉಪ್ಪಿಟ್ಟು
ರಾಗಿ ಸೇಮಿಯಾ ಉಪ್ಪಿಟ್ಟು ಪೌಷ್ಟಿಕ ಮತ್ತು ಆರೋಗ್ಯಕರ ಬೆಳಗಿನ ತಿಂಡಿ ಅಥವಾ ಟಿಫನ್ ಬಾಕ್ಸ್ ರೆಸಿಪಿ. ರಾಗಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ನಾರಿನಂಶ ಹೇರಳವಾಗಿದೆ. ಇದು ಮಕ್ಕಳ ಬೆಳವಣಿಗೆಗೆ, ಮೂಳೆಗಳ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ರಾಗಿ ಒಂದು ಸಂಪೂರ್ಣ ಧಾನ್ಯ ಆಗಿರೋದ್ರಿಂದ, ಇದು ಹೊಟ್ಟೆ ಹಸಿವನ್ನ ಹೆಚ್ಚು ಹೊತ್ತು ಕಂಟ್ರೋಲ್ ಮಾಡಿ ಮಕ್ಕಳಿಗೆ ಶಕ್ತಿ ಕೊಡುತ್ತೆ.
ಕ್ಯಾರೆಟ್ ಹಲ್ವಾ
ಕ್ಯಾರೆಟ್ ಹಲ್ವಾ ಮಕ್ಕಳಿಗೆ ತರಕಾರಿಗಳನ್ನ ತಿನ್ನಿಸೋ ಒಳ್ಳೆಯ ಮಾರ್ಗ. ಕ್ಯಾರೆಟ್‌ನಲ್ಲಿ ವಿಟಮಿನ್ A ಹೇರಳವಾಗಿದೆ. ಇದು ಮಕ್ಕಳ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ಇದು ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ಕೂಡಿದೆ. ಹಲ್ವಾ ಜೊತೆಗೆ ಪಪಡ ಅಥವಾ ಸಕ್ಕರೆ ಹಾಕಿ ಕೊಟ್ಟರೆ ಮಕ್ಕಳಿಗೆ ಇಷ್ಟ ಆಗುತ್ತೆ.
ಗೋಧಿ ದೋಸೆ
ಗೋಧಿ ದೋಸೆ ಆರೋಗ್ಯಕರ ಮತ್ತು ಸುಲಭವಾದ ತಿಂಡಿ. ಇದರಲ್ಲಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಕರಿಬೇವು ಹಾಕೋದ್ರಿಂದ ಮಕ್ಕಳಿಗೆ ಪೌಷ್ಟಿಕಾಂಶ ಸಿಗುತ್ತೆ. ಗೋಧಿಯಲ್ಲಿ ನಾರಿನಂಶ ಹೆಚ್ಚಿರೋದ್ರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಮಕ್ಕಳಿಗೆ ಇಷ್ಟ ಆಗೋ ಬೇರೆ ತರಕಾರಿಗಳನ್ನೂ ಹಾಕಬಹುದು.
ಮಿನಿ ದೋಸೆ
ಮಿನಿ ದೋಸೆಗಳು ಮಕ್ಕಳಿಗೆ ತುಂಬಾ ಇಷ್ಟ. ಇದು ಫಿಂಗರ್ ಫುಡ್ ಆಗಿರೋದ್ರಿಂದ ಮಕ್ಕಳು ಖುಷಿಯಿಂದ ತಿಂತಾರೆ. ಇದನ್ನ ತೆಂಗಿನಕಾಯಿ ಚಟ್ನಿ ಮತ್ತು ಖಾರದ ಇಡ್ಲಿ ಪುಡಿ ಜೊತೆ ಕೊಟ್ಟರೆ ರುಚಿ ಹೆಚ್ಚುತ್ತೆ. ದೋಸೆ ಇನ್ನೂ ಆರೋಗ್ಯಕರವಾಗಿರಬೇಕು ಅಂದ್ರೆ, ಹಿಟ್ಟಿನಲ್ಲಿ ಸ್ವಲ್ಪ ಕ್ಯಾರೆಟ್ ತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಬಹುದು.
ಫ್ರೈಡ್ ಇಡ್ಲಿ
ಇಡ್ಲಿಗಳನ್ನ ಉಪಯೋಗಿಸಿ ಸುಲಭವಾಗಿ ಮಾಡಬಹುದಾದ ರುಚಿಕರ ತಿಂಡಿ ಇದು. ಇಡ್ಲಿಗಳನ್ನ ಸಣ್ಣ ತುಂಡುಗಳಾಗಿ ಕತ್ತರಿಸಿ, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ, ಕರಿಬೇವು ಮತ್ತು ಮಸಾಲೆಗಳ ಜೊತೆ ಹುರಿದರೆ ಮಕ್ಕಳು ಇಷ್ಟಪಟ್ಟು ತಿಂತಾರೆ. ಇದರ ಜೊತೆ ಸೋಯಾ ಸಾಸ್ ಅಥವಾ ಟೊಮೆಟೊ ಸಾಸ್ ಹಾಕಿದ್ರೆ ಚೈನೀಸ್ ಫ್ರೈಡ್ ಇಡ್ಲಿ ಥರ ರುಚಿ ಇರುತ್ತೆ.
ವೆಜ್ ಪಲಾವ್
ವೆಜ್ ಪಲಾವ್ ಪೌಷ್ಟಿಕ ಮತ್ತು ಸಂಪೂರ್ಣ ಆಹಾರ. ಇದು ಟಿಫನ್ ಬಾಕ್ಸ್‌ಗೆ ಒಳ್ಳೆಯ ಆಯ್ಕೆ. ಏಕೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ಇವೆ. ತರಹೇವಾರಿ ತರಕಾರಿಗಳನ್ನ ಹಾಕೋದ್ರಿಂದ ಮಕ್ಕಳಿಗೆ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಪಲಾವ್‌ಗೆ ತರಕಾರಿಗಳ ಜೊತೆಗೆ ಪನ್ನೀರ್ ಅಥವಾ ಸೋಯಾಬೀನ್ ಹಾಕಿದ್ರೆ ಪ್ರೋಟೀನ್ ಹೆಚ್ಚುತ್ತೆ.
ಪನ್ನೀರ್/ಚೀಸ್ ಸ್ಯಾಂಡ್‌ವಿಚ್
ಸ್ಯಾಂಡ್‌ವಿಚ್ ಮಕ್ಕಳಿಗೆ ಇಷ್ಟ ಆಗೋ ಸುಲಭ ತಿಂಡಿ. ಪನ್ನೀರ್, ಚೀಸ್, ಈರುಳ್ಳಿ, ಕ್ಯಾಪ್ಸಿಕಂ, ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಮಾಡೋದ್ರಿಂದ ಮಕ್ಕಳಿಗೆ ಬೇಕಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಿಗುತ್ತೆ. ಪನ್ನೀರ್‌ಗೆ ಬದಲಾಗಿ ಬೇಯಿಸಿದ ಮೊಟ್ಟೆ ಅಥವಾ ಬೀನ್ಸ್, ಕ್ಯಾರೆಟ್ ಹಾಕಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.