Pepper Chicken Recipe: ಯಾವ ರೆಸ್ಟೋರೆಂಟ್‌ಗೂ ಹೋಗೋದು ಬೇಡ.. ಈಸಿಯಾಗಿ ಮನೆಯಲ್ಲೇ ಮಾಡಿ ಪೆಪ್ಪರ್ ಚಿಕನ್

Published : Aug 01, 2026, 03:04 PM IST
Pepper Chicken Recipe

ಸಾರಾಂಶ

Pepper Chicken Recipe: ಪೆಪ್ಪರ್ ಚಿಕನ್ ತಯಾರಿಸುವುದು ಸುಲಭ, ಆದರೆ ಅದರ ರುಚಿ ಹೋಟೆಲ್‌ಗಳಲ್ಲಿ ಸಿಗುವಷ್ಟೇ ಅದ್ಭುತವಾಗಿ ಮತ್ತು ಘಮಘಮಿಸುವಂತೆ ಬರಬೇಕೆಂದರೆ ಕೆಲವು ಸಣ್ಣ ಪುಟ್ಟ ವಿಚಾರಗಳನ್ನು ಗಮನಿಸಬೇಕಾಗುತ್ತದೆ. ನಿಮ್ಮ ಅಡುಗೆಯ ರುಚಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇಲ್ಲಿವೆ ಕೆಲವು ಉಪಯುಕ್ತ ಕಿಚನ್ ಟಿಪ್ಸ್.

ನಾನ್‌ವೆಜ್ ಪ್ರಿಯರಿಗೆ ಪೆಪ್ಪರ್ ಚಿಕನ್ ಎಂದರೆ ಸದಾ ಅಚ್ಚುಮೆಚ್ಚು. ಹೋಟೆಲ್‌ಗಳಲ್ಲಿ ಸಿಗುವ ಆ ಘಮಘಮಿಸುವ ಮತ್ತು ಖಾರಖಾರವಾದ ಪೆಪ್ಪರ್ ಚಿಕನ್ ಅನ್ನು ಮನೆಯಲ್ಲೇ ಅತಿ ಸುಲಭವಾಗಿ ಕೇವಲ ಕೆಲವೇ ಹಂತಗಳಲ್ಲಿ ತಯಾರಿಸಬಹುದು. ಮತ್ಯಾಕೆ ತಡ, ರೆಸ್ಟೋರೆಂಟ್ ಶೈಲಿಯ ಪೆಪ್ಪರ್ ಚಿಕನ್ ಮಾಡುವ ಸರಳ ವಿಧಾನವನ್ನು ಒಮ್ಮೆ ನೋಡೋಣ ಬನ್ನಿ..

ಬೇಕಾಗುವ ಸಾಮಗ್ರಿಗಳು

ಚಿಕನ್: 500 ಗ್ರಾಂ
ಅರಿಶಿನ ಪುಡಿ: ½ ಟೀಸ್ಪೂನ್
ನಿಂಬೆ ರಸ: 1 ಟೇಬಲ್ ಸ್ಪೂನ್
ಎಣ್ಣೆ: 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ: 2 ಟೇಬಲ್ ಸ್ಪೂನ್ (ಸಣ್ಣಗೆ ಹೆಚ್ಚಿದ್ದು)
ಈರುಳ್ಳಿ: 2 (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ: 1 (ಸಣ್ಣಗೆ ಹೆಚ್ಚಿದ್ದು)
ಉಪ್ಪು: ರುಚಿಗೆ ತಕ್ಕಷ್ಟು
ಧನಿಯಾ ಪುಡಿ: 1 ಟೀಸ್ಪೂನ್
ಸೋಂಪು ಪುಡಿ: 1 ಟೀಸ್ಪೂನ್
ಕಾಳುಮೆಣಸಿನ ಪುಡಿ (Pepper Powder): 3 ಟೀಸ್ಪೂನ್
ಕರಿಬೇವು: ಒಂದು ಹಿಡಿ
ಕೊತ್ತಂಬರಿ ಸೊಪ್ಪು: ಸ್ವಲ್ಪ (ಅಲಂಕಾರಕ್ಕೆ)

ತಯಾರಿಸುವ ವಿಧಾನ

ಮೊದಲಿಗೆ ಮ್ಯಾರಿನೇಟ್ ಮಾಡಿ
ಮೊದಲಿಗೆ ಚಿಕನ್ ಅನ್ನು ಸ್ವಚ್ಛವಾಗಿ ತೊಳೆದು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಅರಿಶಿನ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ 15 ನಿಮಿಷಗಳ ಕಾಲ ನೆನೆಯಲು ಬಿಡಿ. ನಿಂಬೆ ರಸವು ಚಿಕನ್ ಅನ್ನು ಮೃದುವಾಗಿಸಲು (Tender) ಸಹಾಯ ಮಾಡುತ್ತದೆ.

ಪೌಡರ್ ಮಾಡಿಕೊಳ್ಳಿ
ಬಾಣಲೆಯಲ್ಲಿ ಧನಿಯಾ, ಸೋಂಪು, ಕಾಳುಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಒಣಮೆಣಸಿನಕಾಯಿ ಸೇರಿಸಿ ಹುರಿದು ಪೌಡರ್ ಮಾಡಿಕೊಳ್ಳಿ.

ತಯಾರಿಸುವ ವಿಧಾನ

*ಒಂದು ಬಾಣಲೆಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ. ಈರುಳ್ಳಿ ತಿಳಿ ಹಳದಿ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ.

*ಈರುಳ್ಳಿ ಬೆಂದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಇದು ಹಸಿ ವಾಸನೆ ಹೋಗುವವರೆಗೆ ಹುರಿದು, ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಈಗಾಗಲೇ ಮಾಡಿಟ್ಟುಕೊಂಡ ಪೌಡರ್ ಚಿಕನ್ ತುಂಡುಗಳಿಗೆ ಚೆನ್ನಾಗಿ ಹಿಡಿಯುವಂತೆ ಮಿಶ್ರಣ ಮಾಡಿ. ಚಿಕನ್ ತನ್ನ ನೀರನ್ನೇ ಬಿಟ್ಟುಕೊಳ್ಳುವುದರಿಂದ, ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ ಚಿಕನ್ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.

*ಚಿಕನ್ ಬೆಂದ ನಂತರ, ಒಂದು ಹಿಡಿ ಹಸಿ ಕರಿಬೇವನ್ನು ಸೇರಿಸಿ ಒಂದು ನಿಮಿಷ ಕೈಯಾಡಿಸಿ. ಕರಿಬೇವು ಸೇರಿಸುವುದರಿಂದ ಹೋಟೆಲ್ ಶೈಲಿಯ ಘಮ ಬರುತ್ತದೆ. ಕೊನೆಯದಾಗಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಪೆಪ್ಪರ್ ಚಿಕನ್ ಸವಿಯಲು ಸಿದ್ಧ!

ಇದು ಗಮನದಲ್ಲಿರಲಿ

ತಾಜಾ ಕಾಳುಮೆಣಸಿನ ಬಳಕೆ: ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಪೆಪ್ಪರ್ ಪೌಡರ್ ಬಳಸುವ ಬದಲು, ಇಡೀ ಕಾಳುಮೆಣಸನ್ನು ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಿ, ಆಮೇಲೆ ಕುಟ್ಟಿ ಪುಡಿ ಮಾಡಿ ಬಳಸಿ. ಇದರಿಂದ ಚಿಕನ್ ತುಂಬಾ ಘಮವಾಗಿ ಮತ್ತು ರುಚಿಯಾಗಿ ಬರುತ್ತದೆ.

ನೀರು ಸೇರಿಸಬೇಡಿ: ಚಿಕನ್ ಬೇಯುವಾಗ ಅದಕ್ಕೆ ನೀರು ಸೇರಿಸದಿರುವುದು ಉತ್ತಮ. ಚಿಕನ್ ತನ್ನಷ್ಟಕ್ಕೆ ತಾನೇ ನೀರನ್ನು ಬಿಟ್ಟುಕೊಳ್ಳುತ್ತದೆ, ಅದೇ ನೀರಲ್ಲೇ ಸಣ್ಣ ಉರಿಯಲ್ಲಿ ಬೆಂದರೆ ಮಸಾಲೆ ಚೆನ್ನಾಗಿ ಹಿಡಿಯುತ್ತದೆ.

ಕರಿಬೇವು ಎರಡು ಬಾರಿ ಬಳಸಿ: ಕರಿಬೇವನ್ನು ಮೊದಲಿಗೆ ಒಗ್ಗರಣೆಯಲ್ಲೂ ಬಳಸಿ ಮತ್ತು ಅಡುಗೆ ಮುಗಿಯುವ 2 ನಿಮಿಷ ಮೊದಲು ಸ್ವಲ್ಪ ಹಸಿ ಕರಿಬೇವನ್ನೂ ಸೇರಿಸಿ. ಇದು ರೆಸ್ಟೋರೆಂಟ್ ಶೈಲಿಯ ಸುಗಂಧವನ್ನು ನೀಡುತ್ತದೆ.

ಸೋಂಪು ಕಾಳುಗಳ ಬಳಕೆ: ನಿಮಗೆ ಸೋಂಪು ಪುಡಿ ಇಷ್ಟವಿಲ್ಲದಿದ್ದರೆ, ಎಣ್ಣೆ ಕಾದಾಗ ಒಂದು ಟೀಸ್ಪೂನ್ ಇಡೀ ಸೋಂಪು ಕಾಳುಗಳನ್ನು ಹಾಕಿ. ಇದು ಮಾಂಸಾಹಾರದ ಜೀರ್ಣಕ್ರಿಯೆಗೂ ಒಳ್ಳೆಯದು ಮತ್ತು ವಿಶೇಷ ರುಚಿ ನೀಡುತ್ತದೆ.

ಸಣ್ಣ ಉರಿಯಲ್ಲಿ ಫ್ರೈ ಮಾಡಿ: ಚಿಕನ್ ಬೆಂದ ನಂತರ ಮಸಾಲೆ ಎಲ್ಲಾ ಗಟ್ಟಿಯಾದ ಮೇಲೆ (Dry ಆದ ಮೇಲೆ), ಎರಡು ನಿಮಿಷಗಳ ಕಾಲ ಹೈ ಫ್ಲೇಮ್‌ನಲ್ಲಿ ಚೆನ್ನಾಗಿ ಕೈಯಾಡಿಸಿದರೆ (Tossing), ಚಿಕನ್ ತುಂಡುಗಳು ಸ್ವಲ್ಪ ಕ್ರಿಸ್ಪಿಯಾಗಿ ಚೆನ್ನಾಗಿ ಕಾಣುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಡಬ್ಬದಲ್ಲಿ ಹುಳುಗಳಿವೆಯೇ? ಈ ಸಣ್ಣ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಓಡಿಸಿ
Food: ಬರೀ 15 ನಿಮಿಷದಲ್ಲಿ ಶ್ರಾವಣ ಉಪವಾಸದ ಸ್ಪೆಷಲ್ ಡಿಶ್; ಈ ಸೀಕ್ರೆಟ್ ಸ್ನಾಕ್ಸ್ ರುಚಿ ನೋಡಿದ್ರೆ ಮತ್ತೆ ಮತ್ತೆ ಮಾಡ್ತೀರಾ!