
ನೀವು ಚಾಕೋಲೇಟ್ ಮಿಲ್ಕ್ ಸ್ಟ್ರಾಬೆರಿ ಮಿಲ್ಕ್ ಮುಂತಾದವನ್ನು ಕುಡಿದಿರುತ್ತೀರಿ ಟೇಸ್ಟ್ ನೋಡಿರುತ್ತೀರಿ ಆದರೆ ಈಗ ಹೊಸದಾಗಿ ಸೀವೀಡ್ ಮಿಲ್ಕ್ ಎಂಬ ಹೊಸ ಪಾನೀಯ ಬಂದಿದ್ದು, ಬ್ಲಾಗರ್ ಒಬ್ಬರು ಇದನ್ನು ಸೇವಿಸಿ ಟೇಸ್ಟ್ ಹೇಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಗಿದ್ರೆ ಸೀವೀಡ್ ಅಂದ್ರೆ ಏನು ಅಂತ ನೋಡೋಣ ಬನ್ನಿ
ಸೀವಿಡ್ ಎಂದರೆ ಒಂದು ರೀತಿಯ ಕಡಲ ಆಳದಲ್ಲಿ ಬೆಳೆಯುವ ಪಾಚಿ. ಇದಕ್ಕೆ ಕಡಲಕಳೆ ಎಂದೂ ಕೂಡ ಕರೆಯುತ್ತಾರೆ. ಮ್ಯಾಕ್ರೋಆಲ್ಗೆ ಎಂದು ಕರೆಯಲ್ಪಡುವ ಇದರಲ್ಲಿ ಹಲವು ವಿಧಗಳಿವೆ. ರೋಡೋಫೈಟಾ ಹೆಸರಿನ ಕಡಲಕಳೆ ಕೆಂಪು ಬಣ್ಣದಲ್ಲಿದ್ದರೆ ಫಿಯೋಫೈಟಾ ಕಂದು ಹಾಗೂ ಕ್ಲೋರೋಫೈಟಾ ಹಸಿರು ಬಣ್ಣದಲ್ಲಿರುತ್ತದೆ. ಈ ಕಡಲಕಳೆಗಳು ಸಮುದ್ರದಲ್ಲಿರುವ ಹಲವು ಜೀವ ರಾಶಿಗಳಿಗೆ ಅಗತ್ಯವಾದ ಆವಾಸಸ್ಥಾನವನ್ನು ಒದಗಿಸುತ್ತವೆ ಜೊತೆಗೆ ಆಹಾರ ಮೂಲಗಳನ್ನು ರಕ್ಷಿಸುತ್ತವೆ. ಅದರಲ್ಲೂ ಪ್ಲ್ಯಾಂಕ್ಟೋನಿಕ್ ಪಾಚಿಗಳಂತಹ ಇತರ ಪ್ರಭೇದಗಳು ಇಂಗಾಲವನ್ನು ಒಳಗೆ ತೆಗೆದುಕೊಂಡು ಭೂಮಿಯ ಆಮ್ಲಜನಕದ ಕನಿಷ್ಠ 50% ರಷ್ಟನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಇಂತಹ ಪಾಚಿಗಳಿಂದ ಸಿದ್ಧಗೊಂಡ ಪಾನೀಯವೇ ಸೀ ವೀಡ್ ಮಿಲ್ಕ್. ಇದು ಇತ್ತೀಷೆಗಷ್ಟೇ ಆಹಾರ ಸಂಸ್ಕೃತಿಗೆ ಸೇರ್ಪಡೆಯಾದ ಒಂದು ಹೊಸ ಸಮುದ್ರಾಹಾರವಾಗಿದ್ದು, ಕೆಲ ಹೊಟೇಲ್‌ಗಳಲ್ಲಿ ಇತ್ತೀಚೆಗಷ್ಟೇ ಇದು ಫೇಮಸ್ ಆಗುತ್ತಿದೆ. ಸಿಂಗಾಪುರದ ಆಹಾರ ಬ್ಲಾಗರ್ ವೊಬ್ಬರು ಈ ಸೀ ವೀಡ್ ಹೇಗಿದೆ ಎಂಬುದನ್ನು ಟೇಸ್ಟ್ ನೋಡಿ ತಮ್ಮ ಇನ್ಸ್ಟಾದಲ್ಲಿ ವೀಡಿಯೋ ಮಾಡಿ ಹಾಕಿದ್ದಾರೆ. ಇದು ನೆಟ್ಟಿಗರ ಕುತೂಹಲವನ್ನು ಹೆಚ್ಚಿಸಿದೆ ಅನೇಕರು ಇದು ಯಾವ ರೀತಿ ಟೇಸ್ಟ್ ಇರುತ್ತದೆ ತಿನ್ನಲು ಚೆನ್ನಾಗಿರುತ್ತಾ ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಕಡಲಕಳೆ ಅಥವಾ ಸೀ ವೀಡ್‌ನ ಆರೋಗ್ಯ ಪ್ರಯೋಜನಗಳು
ಸೀವೀಡ್‌ನಲ್ಲಿ ಆರೋಗ್ಯ ಅಂಶಗಳ ಬಗ್ಗೆ ಕೆಲವು ಪ್ರಾಥಮಿಕ ಸಂಶೋಧನೆಗಳು ಅಧ್ಯಯನ ಮಾಡಿದ್ದು, ಅದರಂತೆ ಕಡಲಕಳೆ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಆರೋಗ್ಯಕರ ಥೈರಾಯ್ಡ್ ಕಾರ್ಯಕ್ಕೆ ಸಹಕಾರಿಯಾಗಿದೆ ಎಂಬುದನ್ನು ಪತ್ತೆ ಮಾಡಿವೆ. ಆದರೆ ಕಡಲಕಳೆಯನ್ನು ಸೇವಿಸುವುದರಿಂದ ಈ ಎಲ್ಲಾ ಪ್ರಯೋಜನಗಳು ಆಗುತ್ತವೆಯೇ ಎಂಬ ಬಗ್ಗೆ ತಿಳಿಯಲು ಹೆಚ್ಚಿನ ಉತ್ತಮ ಗುಣಮಟ್ಟದ ಮಾನವ ಅಧ್ಯಯನಗಳು ಅಗತ್ಯವಿದೆ.
ಸಮುದ್ರದ ಬಹುತೇಕ ಆಹಾರಗಳು ಮಾಂಸಾಹಾರ ಎಂಬುದು ಬಹುತೇಕರಿಗೆ ಗೊತ್ತು. ಹೀಗಾಗಿ ಈ ಸೀವೀಡ್ ಕೂಡ ಮಾಂಸಾಹಾರಿಯೇ ಎಂಬುದು ಅನೇಕರ ಪ್ರಶ್ನೆ. ಆದರೆ ನೀವು ಊಹಿಸಿದಂತೆ ಈ ಸೀವೀಡ್ ಅಥವಾ ಕಡಲಕಳೆ ಮಾಂಸಾಹಾರಿ ಆಹಾರವಲ್ಲ, ಇದು ಒಂದು ರೀತಿಯ ಪಾಚಿ, ಸಸ್ಯ ಆಧಾರಿತ ಜೀವಿ, ಮತ್ತು ಹೀಗಾಗಿಯೇ ಇದನ್ನು ಸಸ್ಯಾಹಾರಿ ಎಂದು ಪರಿಗಣಿಸಲಾಗುತ್ತದೆ. ಕಡಲಕಳೆಯನ್ನು ಅದರ ಪೌಷ್ಟಿಕಾಂಶದ ಪ್ರಯೋಜನಗಳು ಮತ್ತು ಸುವಾಸನೆಗಾಗಿ ಹೆಚ್ಚಾಗಿ ಸಸ್ಯಾಹಾರಿ ಮತ್ತು ಸಸ್ಯಾಹಾರಿ ಆಹಾರಗಳಲ್ಲಿ ಬಳಸಲಾಗುತ್ತದೆ.
ಇನ್ನು ಈ ಸೀವೀಡ್ ಮಿಲ್ಕ್‌ನ್ನು ಸೇವಿಸಿದ ಸಿಂಗಾಪುರದ ಫುಡ್ ಬ್ಲಾಗರ್ ಕ್ಯಾಲ್ವಿನ್ ಲೀ ರಿಯಾಕ್ಷನ್ ಹೇಗಿತ್ತು ನೋಡೋಣ. ವಿಲಕ್ಷಣ ಆಹಾರ ಶೈಲಿಯನ್ನು ಪ್ರಯತ್ನಿಸುವುದಕ್ಕೆ ಈ ವ್ಲಾಗರ್ ಫೇಮಸ್ ಆಗಿದ್ದಾರೆ. ಲೆಟ್ಸ್ ಟ್ರೈ ಸೀ ವೀಡ್ ಮಿಲ್ಕ್ ಎಂದ ಅವರು ಹಾಲಿನಲ್ಲಿ ಈ ಸೀ ವೀಡ್‌ನ್ನು ಕೆಲ ಹೊತ್ತು ಮೆತ್ತಗಾಗಲು ಮುಳುಗಿಸಿಟ್ಟಿದ್ದಾರೆ. ಬಳಿಕ ಕೆಲ ನಿಮಿಷದ ನಂತರ ಮಾಮೂಲಿ ಆಹಾರ ಸೇವಿಸುವಂತೆ ಅದರಲ್ಲಿದ್ದ ಹಾಲಿನ ಜೊತೆ ಜೊತೆಗೆ ಈ ಸೀವೀಡನ್ನು ತಿಂದಿದ್ದಾರೆ. ಬಳಿಕ ಅವರು ಸೂಪರ್ ಎಂದಿದ್ದಾರೆ. ಈ ವೀಡಿಯೋ ನೋಡಿದ ಕೆಲವರು ಹೌದೌದು ನಾನು ಟ್ರೈ ಮಾಡಿದೆ ಚೆನ್ನಾಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮುಂದಿನ ಬಾರಿ ಈ ಸೀವೀಡನ್ನು ಸಮುದ್ರ ನೀರಿನ ಜೊತೆ ಮಿಕ್ಸ್ ಮಾಡಿ ತಿನ್ನುವಂತೆ ಒಬ್ಬರು ಅವರಿಗೆ ಸಲಹೆ ನೀಡಿದ್ದಾರೆ. ನೀವು ಸಮುದ್ರಾಹಾರ ಪ್ರಿಯರ ಹಾಗಿದ್ರೆ ನಿಮಗೆ ಈ ಸೀ ವೀಡ್ ಬಗ್ಗೆ ಏನನಿಸುತ್ತಿದೆ ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.