ಮೈಸೂರು ಸ್ಪೆಷಲ್ ಶೇಂಗಾ-ಕೊಬ್ಬರಿ ಚಟ್ನಿ.. ಒಮ್ಮೆ ಈ ರೀತಿ ಮಾಡ್ರಿ ಇಡ್ಲಿ-ದೋಸೆ ಎಷ್ಟು ತಿಂದ್ರೂ ಸಾಕಾಗಲ್ಲ ಅಷ್ಟು ರುಚಿ

Published : Mar 26, 2026, 02:34 PM IST
Mysuru Chutney

ಸಾರಾಂಶ

Mysore Chutney Secret: ಪ್ರತಿದಿನ ಮಾಡುವ ಶೇಂಗಾ-ಕೊಬ್ಬರಿ ಚಟ್ನಿ ತಿಂದು ಬೇಸರವಾಗಿದೆಯೇ? ಮೈಸೂರಿನ ಹೋಟೆಲ್‌ಗಳಲ್ಲಿ ಸಿಗುವ ಆ ವಿಶಿಷ್ಟವಾದ ರುಚಿ ಮತ್ತು ಘಮ ನಿಮ್ಮ ಮನೆಯ ಚಟ್ನಿಯಲ್ಲಿ ಏಕೆ ಬರುವುದಿಲ್ಲ ಎಂದು ಯಾವತ್ತಾದರೂ ಯೋಚಿಸಿದ್ದೀರಾ?. ಹಾಗಿದ್ದರೆ ನೀವು ಈ ಎರಡು ರಹಸ್ಯ ಪದಾರ್ಥಗಳನ್ನು ಬಳಸುತ್ತಿಲ್ಲ ಎಂದರ್ಥ!  

ಬೆಳಗಿನ ಉಪಹಾರಕ್ಕೆ ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ಇದ್ದಾಗ ಅದಕ್ಕೆ ಸರಿಯಾದ ಚಟ್ನಿ ಇಲ್ಲದಿದ್ದರೆ ಮಜಾ ಇರುವುದಿಲ್ಲ. ಪ್ರತಿದಿನ ಮಾಡುವ ಸಾಧಾರಣ ಶೇಂಗಾ ಚಟ್ನಿ ಅಥವಾ ಕೊಬ್ಬರಿ ಚಟ್ನಿ ತಿಂದು ಬೇಸರವಾಗಿದ್ದರೆ, ನೀವು ಈ ಮೈಸೂರು ಶೈಲಿಯ ವಿಶೇಷ ಚಟ್ನಿಯನ್ನು ಒಮ್ಮೆ ಟ್ರೈ ಮಾಡಲೇಬೇಕು. ಕರ್ನಾಟಕದ ಮೈಸೂರು ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಚಟ್ನಿ, ಉಳಿದೆಲ್ಲ ಚಟ್ನಿಗಳಿಗಿಂತ ರುಚಿಯಲ್ಲಿ ತುಂಬಾ ಭಿನ್ನ ಮತ್ತು ಅತಿ ಹೆಚ್ಚು ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಶೇಂಗಾ- 1/2 ಕಪ್
ಉದ್ದಿನಬೇಳೆ - 1 ಟೇಬಲ್ ಚಮಚ
ಅಡುಗೆ ಎಣ್ಣೆ - 2 ಟೇಬಲ್ ಚಮಚ
ಕಾಶ್ಮೀರಿ ಒಣಮೆಣಸಿನಕಾಯಿ - 5 (ಇದು ಚಟ್ನಿಗೆ ಗಾಢವಾದ ಬಣ್ಣ ನೀಡುತ್ತದೆ)
ಬೆಲ್ಲದ ಪುಡಿ - 1 ಟೇಬಲ್ ಚಮಚ
ಬೆಳ್ಳುಳ್ಳಿ ಎಸಳು - 3
ಹುಣಿಸೆಹಣ್ಣಿನ ರಸ ಅಥವಾ ಕಿವುಚಿದ ತಿರುಳು - 1/2 ಟೇಬಲ್ ಚಮಚ
ಕಾಳುಮೆಣಸು - 4
ಹಸಿ ತೆಂಗಿನಕಾಯಿ ತುರಿ - 3/4 ಕಪ್
ಕೆಂಪು ಮೆಣಸಿನ ಪುಡಿ - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
 

ತಯಾರಿಸುವ ವಿಧಾನ

*ಮೊದಲು ಒಲೆಯ ಮೇಲೆ ಒಂದು ದಪ್ಪ ತಳದ ಪ್ಯಾನ್ ಇಟ್ಟು, ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾಯುತ್ತಿದ್ದಂತೆ ಶೇಂಗಾ ಮತ್ತು ಉದ್ದಿನಬೇಳೆ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಾಗುವವರೆಗೆ ಹುರಿಯಿರಿ.
*ಇದಕ್ಕೆ ಕಾಶ್ಮೀರಿ ಒಣಮೆಣಸಿನಕಾಯಿ ಸೇರಿಸಿ. ಅವು ಸೀದು ಹೋಗದಂತೆ ಎರಡು ನಿಮಿಷ ಹುರಿಯಿರಿ. ನಂತರ ಬೆಳ್ಳುಳ್ಳಿ ಎಸಳು, ಕಾಳುಮೆಣಸು, ಹುಣಿಸೇಹಣ್ಣಿನ ರಸ ಮತ್ತು ಬೆಲ್ಲದ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ಒಂದು ನಿಮಿಷ ಫ್ರೈ ಮಾಡಿ. ಬೆಲ್ಲ ಮತ್ತು ಹುಣಿಸೆಹಣ್ಣಿನ ಸಂಯೋಜನೆಯೇ ಈ ಮೈಸೂರು ಚಟ್ನಿಗೆ ಅಸಲಿ ರುಚಿ ನೀಡುತ್ತದೆ.
*ಕೊನೆಯದಾಗಿ ಹಸಿ ತೆಂಗಿನಕಾಯಿ ತುರಿ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಎರಡು ನಿಮಿಷ ಹುರಿದು ಸ್ಟವ್ ಆಫ್ ಮಾಡಿ. ಈ ಮಿಶ್ರಣವನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಿ.
*ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ, ಸುಮಾರು ಒಂದು ಕಪ್ ನೀರು ಸೇರಿಸಿ ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಈಗ ಘಮಘಮಿಸುವ ಮೈಸೂರು ಚಟ್ನಿ ರೆಡಿ! ಇದನ್ನು ನೇರವಾಗಿ ಇಡ್ಲಿ ಅಥವಾ ದೋಸೆಯೊಂದಿಗೆ ಸವಿಯಬಹುದು.

ಒಗ್ಗರಣೆ (ಅಗತ್ಯವಿದ್ದರೆ)
ಇನ್ನೂ ಹೆಚ್ಚಿನ ರುಚಿ ಬೇಕೆಂದರೆ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ನೀಡಿದರೆ ಇದರ ರುಚಿ ಡಬ್ಬಲ್ ಹೆಚ್ಚಾಗುತ್ತದೆ! ಈ ಚಟ್ನಿಯನ್ನು ಫ್ರಿಜ್‌ನಲ್ಲಿಟ್ಟರೆ ಎರಡು ದಿನಗಳವರೆಗೆ ತಾಜಾವಾಗಿರುತ್ತದೆ.
ನೀವು ಮೈಸೂರು ಮಸಾಲೆ ದೋಸೆ ಮಾಡುವಾಗ ದೋಸೆಯ ಒಳಭಾಗಕ್ಕೆ ಸವರುವ ಕೆಂಪು ಚಟ್ನಿ ಬೇಕೆಂದರೆ, ಇದೇ ಚಟ್ನಿಯನ್ನು ಸ್ವಲ್ಪ ಗಟ್ಟಿಯಾಗಿ (ಕಡಿಮೆ ನೀರು ಬಳಸಿ) ರುಬ್ಬಿಕೊಳ್ಳಿ. ಇದು ದೋಸೆಗೆ ಹೋಟೆಲ್ ಶೈಲಿಯ ಅದ್ಭುತ ರುಚಿ ನೀಡುತ್ತದೆ!

ಉಳಿದ ಚಟ್ನಿಯಿಂದ ಮಾಡಿ ‘ಇನ್ಸ್ಟಂಟ್ ಮಸಾಲಾ ರೈಸ್’
ಮನೆಯಲ್ಲಿ ಚಟ್ನಿ ಜಾಸ್ತಿ ಉಳಿದುಹೋಗಿದೆಯೇ? ಅದನ್ನು ಬಿಸಾಡುವ ಬದಲು ಹೀಗೆ ಬಳಸಿ. ಬಿಸಿ ಅನ್ನಕ್ಕೆ ಉಳಿದ ಚಟ್ನಿಯನ್ನು ಸೇರಿಸಿ, ಸ್ವಲ್ಪ ತುಪ್ಪ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಅತ್ಯಂತ ರುಚಿಕರವಾದ ಲಂಚ್ ಬಾಕ್ಸ್ ರೆಸಿಪಿ ರೆಡಿಯಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮ್ಮ ಕಿಚನ್‌ನಲ್ಲಿ ಈ ವಸ್ತು ಇದ್ರೆ ಸಾಕು.. ಹಸಿಮೆಣಸಿನಕಾಯಿ ಕೊಳೆಯೋದೂ ಇಲ್ಲ, ಒಣಗೋದು ಇಲ್ಲ
ಸರ್ವಕಾಲಕ್ಕೂ ಆರೋಗ್ಯಕಾರಿ ಈ ಪಪ್ಪಾಯಿ ಹಣ್ಣು; ತಿನ್ನೋದನ್ನ ಮಿಸ್ ಮಾಡ್ಕೋಬೇಡಿ