ರಾತ್ರಿ ಮಲಗೋ ಮುನ್ನ ಇದನ್ನು ಕುಡಿಯಿರಿ, ಆರೋಗ್ಯ ವೃದ್ಧಿಯಾಗೋದು ಗ್ಯಾರಂಟಿ!

By Suvarna News  |  First Published Nov 3, 2022, 5:17 PM IST

ನಿದ್ರೆ ಸರಿಯಾಗಿ ಬರ್ತಿಲ್ಲ, ಮಲಬದ್ಧತೆ ಸಮಸ್ಯೆ ಅಂತೆಲ್ಲ ಹೇಳೋರು ಮೆಡಿಸಿನ್ ಸುದ್ದಿಗೆ ಹೋಗ್ಬೇಡಿ. ನೇರ ಅಡುಗೆ ಮನೆಗೆ ಹೋಗಿ. ಅಲ್ಲಿರುವ ಎರಡೇ ಎರಡು ಪದಾರ್ಥ ಬಳಸಿ ಟೀ ಸಿದ್ಧಪಡಿಸಿಕೊಂಡು ಮಲಗುವ ಮುನ್ನ ಒಂದು ಕಪ್ ಕುಡಿದ್ರೆ ಮುಗೀತು. ನಿಮ್ಮ ದೇಹ ಫಿಟ್ ಆದಂತೆ.
 


ನಮ್ಮ ಅಡುಗೆ ಮನೆ ಪುಟ್ಟ ಆಸ್ಪತ್ರೆ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದ್ರೆ ಅಡುಗೆ ಮನೆಯಲ್ಲಿರುವ ಕೆಲ ವಸ್ತುಗಳನ್ನು ಸೇವನೆ ಮಾಡೋದ್ರಿಂದ ನಾವು ಅನೇಕ ರೀತಿಯ ಲಾಭವನ್ನು ಪಡೆಯಬಹುದು. ಜೀರ್ಣಕ್ರಿಯೆ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ ಸೇರಿದಂತೆ ಬಹುತೇಕ ಸಮಸ್ಯೆಗೆ ನಮ್ಮ ಮನೆಯಲ್ಲಿಯೇ ಮದ್ದಿರುತ್ತದೆ. ಅನೇಕರಿಗೆ ಅದನ್ನು ಹೇಗೆ ಬಳಸಬೇಕು ಎಂಬುದು ತಿಳಿದಿರೋದಿಲ್ಲ. ಹಾಗೆಯೇ ಯಾವ ಸಮಯದಲ್ಲಿ ಯಾವುದನ್ನು ಸೇವನೆ ಮಾಡ್ಬೇಕು ಎಂಬುದು ತಿಳಿದಿರೋದಿಲ್ಲ. 

ಎಲ್ಲರ ಅಡುಗೆ ಮನೆಯಲ್ಲಿರುವ ವಸ್ತುಗಳಲ್ಲಿ ನಿಂಬೆ (Lemon) ಹಣ್ಣು ಮತ್ತು ಶುಂಠಿ (Ginger) ಕೂಡ ಸೇರಿದೆ. ನಿಂಬೆ ಹಾಗೂ ಶುಂಠಿ ಚಹಾ ಸೇವನೆಯಿಂದ ಸಾಕಷ್ಟು ಲಾಭವಿದೆ ಎಂಬ ಸಂಗತಿ ಅನೇಕ ಅಧ್ಯಯನ (Study) ಗಳಿಂದ ದೃಢಪಟ್ಟಿದೆ.  ನಿದ್ರೆ ಸಮಸ್ಯೆ ಎನ್ನುವವರು ಈ ನಿಂಬೆ ಹಾಗೂ ಶುಂಠಿ ಟೀಯನ್ನು ಆರಾಮವಾಗಿ ಸೇವನೆ ಮಾಡಬಹುದು. ಇದ್ರಿಂದ ಉತ್ತಮ ನಿದ್ರೆ (Sleep) ಬರುವುದಲ್ಲದೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಉರಿಯೂತದಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲ ರೋಗಗಳಿಂದಲೂ ನಮ್ಮ ದೇಹವನ್ನು ಈ ಟೀ ರಕ್ಷಿಸುತ್ತದೆ. ನಿಂಬೆ ಹಾಗೂ ಶುಂಠಿ ಟೀ ಈಗಿನದಲ್ಲ. ಭಾರತದಲ್ಲಿ ಇದನ್ನು ಹಿಂದಿನಿಂದಲೂ ಬಳಸಲಾಗ್ತಿದೆ. ನಿಂಬೆ ಹಣ್ಣು ಮತ್ತು ಶುಂಠಿಯಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವಿಶೇಷವಾಗಿ ಮಲಗುವ ಮುನ್ನ ಈ ಟೀ ಸೇವಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ನಾವು ದೂರವಿರಬಹುದು. ರಾತ್ರಿ ಹಾಸಿಗೆಗೆ ಹೋಗುವ ಮೊದಲು ನಿಂಬೆ – ಶುಂಠಿ ಟೀ ಸೇವನೆ ಮಾಡಿದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವು ಹೇಳ್ತೇವೆ.  

ಆರೋಗ್ಯ ಯಾಕೋ ಸರಿ ಇಲ್ವಾ? ಬೆಳಗ್ಗೆ ಎದ್ದ ಕೂಡಲೇ ಇವನ್ನು ಮಾಡೋದ ಮರೀಬೇಡಿ

Tap to resize

Latest Videos

ನಿದ್ರಾಹೀನತೆ (Sleeplessness) ಸಮಸ್ಯೆಗೆ ಮುಕ್ತಿ : ಕೆಲಸದ ಒತ್ತಡ, ಗೆಜೆಟ್ ಬಳಕೆ ಸೇರಿದಂತೆ ಅನೇಕ ಕಾರಣಕ್ಕೆ ನಿದ್ರೆ ಬರೋದಿಲ್ಲ. ನಿದ್ರಾಹೀನತೆಯಿಂದ ಮತ್ತೊಂದಿಷ್ಟು ಸಮಸ್ಯೆ ನಮ್ಮನ್ನು ಕಾಡುತ್ತದೆ. ರಾತ್ರಿ ನಿದ್ರೆ ಚೆನ್ನಾಗಿ ಬರಬೇಕು ಎನ್ನುವವರು ಮಲಗುವ ಮೊದಲು ನಿಂಬೆ-ಶುಂಠಿ ಚಹಾವನ್ನು ಸೇವಿಸಬೇಕು. ಇದು  ದೇಹವನ್ನು ಆರಾಮಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಿ, ಮನಸ್ಸನ್ನು ಶಾಂತಗೊಳಿಸಲು ಈ ಟೀ ಸಹಕಾರಿ ಎಂದು ಒಂದು ಅಧ್ಯಯನದಲ್ಲಿ ಹೇಳಲಾಗಿದೆ. ಪ್ರತಿ ದಿನ ನಿದ್ರೆ ಸಮಸ್ಯೆಯಾಗ್ತಿದೆ ಎನ್ನುವವರು ಇದನ್ನು ಸೇವನೆ ಮಾಡಬೇಕು.  

ಜೀರ್ಣಕ್ರಿಯೆಗೆ (Digestion) ದಿ ಬೆಸ್ಟ್ ಟೀ : ತಿಂದ ಆಹಾರ ಜೀರ್ಣವಾಗಿಲ್ಲವೆಂದ್ರೆ ಮತ್ತೊಂದಿಷ್ಟು ಸಮಸ್ಯೆಯಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ. ಜೀರ್ಣಕ್ರಿಯೆ ಸರಿಯಾಗಿ ಆಗ್ಬೇಕೆಂದ್ರೆ ನೀವು ನಿಂಬೆ ಮತ್ತು ಶುಂಠಿ ಟೀಯನ್ನು ರಾತ್ರಿ ಮಲಗುವ ಮುನ್ನ ಸೇವನೆ ಮಾಡಲು ಮರೆಯಬೇಡಿ. ಮಲಬದ್ಧತೆ  ಸಮಸ್ಯೆಯನ್ನು  ಇದು ಕಡಿಮೆ ಮಾಡುತ್ತದೆ. ನಿರ್ಜಲೀಕರಣ ಮತ್ತು ಫೈಬರ್ ಕೊರತೆ ಸೇರಿದಂತೆ ಹಲವಾರು ಕಾರಣಗಳಿಗಾಗಿ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ.  ನಿಂಬೆ ಮತ್ತು ಶುಂಠಿಯ ಬಿಟಿ ಟೀ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ. ದೀರ್ಘ ಮಲಬದ್ಧತೆ ಸಮಸ್ಯೆಯಿದ್ರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಲು ಮರೆಯಬೇಡಿ.  

ಉರಿಯೂತಕ್ಕೂ ಇದೇ ಮದ್ದು : ವಿಪರೀತ ಉರಿಯೂತದ ಸಮಸ್ಯೆ ಇದೆ ಎನ್ನುವವರು  ನಿಂಬೆ ಮತ್ತು ಶುಂಠಿ ಚಹಾ ಸೇವನೆ ಮಾಡಬೇಕು ಎನ್ನುತ್ತಾರೆ ತಜ್ಞರು. ಶುಂಠಿಯಲ್ಲಿ ಕಂಡುಬರುವ ಜಿಂಜರಾಲ್ ಎಂಬ ಸಂಯುಕ್ತ  ಉರಿಯೂತ ಗುಣಗಳಿಂದ ಸಮೃದ್ಧವಾಗಿದೆ. ಕ್ಯಾನ್ಸರ್,  ಹೃದ್ರೋಗ ಸೇರಿದಂತೆ ಕೆಲ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಇದು ಸಹಕಾರಿ.     

ಬ್ರೇಕ್‌ಫಾಸ್ಟ್‌ಗೆ ಕಾರ್ನ್‌ಫ್ಲೇಕ್ಸ್‌ ತಿನ್ತೀರಾ, ತೂಕ ಹೆಚ್ಚಾಗುತ್ತೆ ಗೊತ್ತಿರ್ಲಿ

ಅಲರ್ಜಿ, ಕಟ್ಟಿದ ಮೂಗಿಗೆ ಒಳ್ಳೆಯದು : ಮೂಗು ಕಟ್ಟಿಕೊಂಡಿದ್ದು, ಕಿರಿಕಿರಿಯಾಗುತ್ತದೆ ಎನ್ನುವವರು ನಿಂಬೆ ಮತ್ತು ಶುಂಠಿ ಚಹಾ ಸೇವನೆ ಮಾಡಬೇಕು. ಇದು ಅಲರ್ಜಿ ಸಮಸ್ಯೆಯನ್ನು ಕಡಿಮೆ ಮಾಡುವ ಮೂಲಕ ಕಟ್ಟಿಕೊಂಡ ಮೂಗಿಗೆ ಪರಿಹಾರ ನೀಡುತ್ತದೆ.  

click me!