
ನವದೆಹಲಿ(ಫೆ.07) ಪನ್ನೀರ್ ಹಾಗೂ ಹಾಲು ಸೇವಿಸುವ ಸಸ್ಯಾಹಾರಿಗಳಿಗೆ ಭಾರತೀಯ ವೈದ್ಯ ಶಾಕ್ ನೀಡಿದ್ದಾರೆ. ಇಷ್ಟು ದಿನ ಇವೆರಡೂ ಸಸ್ಯಾಹಾರ ಎಂದು ಸೇವಿಸುತ್ತಿದ್ದ ಮಂದಿಗೆ ಈ ವೈದ್ಯರ ಹೇಳಿಕೆ ಗೊಂದಲ ಸೃಷ್ಟಿಸಿದೆ. ಕಾರಣ ಈ ವೈದ್ಯರ ಪ್ರಕಾರ ಪನ್ನೀರ್ ಹಾಗೂ ಹಾಲು ಸಸ್ಯಾಹಾರ ಅಲ್ಲ ಎಂದಿದ್ದಾರೆ. ಭಾರತೀಯ ವೈದ್ಯಕೀಯ ನೀತಿಶಾಸ್ತ್ರ ಜರ್ನಲ್‌ನ ಕಾರ್ಯನಿರ್ವಾಹಕ ಸಂಪಾದಕಿ ಡಾ. ಸಿಲ್ವಿಯಾ ಕರ್ಪಗಂ ಅವರು ಹಾಲು ಮತ್ತು ಪನೀರ್‌ನಂತಹ ಡೈರಿ ಉತ್ಪನ್ನಗಳನ್ನು ನಿಜವಾಗಿಯೂ ಸಸ್ಯಾಹಾರಿ ಆಹಾರಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದು ಮಾಂಸಾಹರ ಎಂದಿದ್ದಾರೆ.
ಡಾ. ಸುನಿತಾ ಅವರು ಸಾಂಪ್ರದಾಯಿಕ ಊಟದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಊಟವನ್ನು ಪ್ರೋಟೀನ್, ಉತ್ತಮ ಕೊಬ್ಬುಗಳು ಮತ್ತು ಫೈಬರ್‌ನಿಂದ ತುಂಬಿದ "ಸಸ್ಯಾಹಾರಿ ಊಟ" ಎಂದು ವಿವರಿಸಿದ್ದಾರೆ. ಆದರೆ ಈ ಫೋಟೋ ಕುರಿತು ಡಾ. ಕರ್ಪಗಂ ಹಲವು ಪ್ರಶ್ನೆ ಎತ್ತಿದ್ದಾರೆ. ಪ್ರಮುಖವಾಗಿ ಇದು ಸಸ್ಯಾಹಾರವಲ್ಲ ಎಂದಿದ್ದಾರೆ. ಇದಕ್ಕೆ ಕಾರಣವನ್ನು ನೀಡಿದ್ದಾರೆ. ಡೈರಿ ಉತ್ಪನ್ನಗಳು ಸಸ್ಯಾಹಾರಿ ಲೇಬಲ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕ ಕಕ್ಕಾಬಿಕ್ಕಿ, ಆಹಾರ ಜೊತೆ ಪಾರ್ಸೆಲ್ ಆಗಿ ಬಂತು ಬೈಗುಳ!
ಪನೀರ್ ಮತ್ತು ಹಾಲು 'ಸಸ್ಯಾಹಾರಿ' ಅಲ್ಲ. ಅವು ಪ್ರಾಣಿ ಮೂಲದ ಆಹಾರಗಳು... ಕೋಳಿ, ಮೀನು, ಗೋಮಾಂಸ ಮತ್ತು ಎಲ್ಲದರಂತೆಯೇ ಹಾಲು ಹಾಗೂ ಪನ್ನೀರ್ ಮಾಂಸಾಹಾರ ಎಂದು ವಾದಿಸಿದ್ದಾರೆ. ಪ್ರಾಣಿ ಮೂಲದ ಆಹಾರವಾಗಿರುವ ಕಾರಣ ಇದು ಸಸ್ಯಾಹಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಡಾ. ಸುನೀತಾ ಪೋಸ್ಟ್ ಮಾಡಿರುವ ಊಟದ ಫೋಟೋದಲ್ಲಿ ಸೌತೆಕಾಯಿ, ಕ್ಯಾರೆಟ್ ಮತ್ತು ಈರುಳ್ಳಿ ಸೇರಿದಂತೆ ಎದ್ದುಕಾಣುವ ತರಕಾರಿಗಳು, ಪನೀರ್, ತೆಂಗಿನಕಾಯಿ ಮತ್ತು ದಾಲ್‌ನೊಂದಿಗೆ ಪೂರಕವಾಗಿದೆ. ಕೆಲವು ಬಳಕೆದಾರರು ಡಾ. ಕರ್ಪಗಂ ಅವರ ದೃಷ್ಟಿಕೋನವನ್ನು ಒಪ್ಪಿಕೊಂಡರೆ, ಹಲವರು ಹಾಲು ಮತ್ತು ಪನೀರ್ ಪ್ರಾಣಿಯನ್ನು ಕೊಲ್ಲದೆ ಪಡೆಯುವುದರಿಂದ ಅವು ಸಸ್ಯಾಹಾರಿಯಾಗಿ ಉಳಿಯುತ್ತವೆ ಎಂಬ ಸಾಂಪ್ರದಾಯಿಕ ದೃಷ್ಟಿಕೋನವನ್ನು ದೃಢವಾಗಿ ಸಮರ್ಥಿಸಿಕೊಂಡರು.“ಪನೀರ್ ಅಥವಾ ಹಾಲು ತಿನ್ನಲು ಯಾರನ್ನೂ ಕೊಲ್ಲುವುದಿಲ್ಲ…” ಎಂದು X ಬಳಕೆದಾರರೊಬ್ಬರು ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.